
ಪ್ರತಿಧ್ವನಿ ಯಲ್ಲಾಪುರ : ಜ್ಯೋತಿಷ್ಯಾಸಕ್ತ ಬಂಧುಗಳೇ ಇವತ್ತಿನ ಒಂದು ಆಧುನಿಕ ಸಮಾಜದಲ್ಲಿ ನಾವು ಜ್ಯೋತಿಷ್ಯವನ್ನ ಬಹಳ ವಿಧವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದೇವೆ ಅದರಲ್ಲಿ ವಶೀಕರಣ ಎಂಬುದು ಸಹ ಒಂದು ವಿಭಾಗ.

ಜ್ಯೋತಿಷ್ಯದಲ್ಲಿ ಬರ್ತಕ್ಕಂತಹ ಒಂದು ವಿಚಾರ ವಶೀಕರಣ ಇದು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಯಶಸ್ವಿಯಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತೇನೆ.
ಸರ್ವರಿಗೂ ಮೊದಲನೇದಾಗಿ ವಶೀಕರಣ ಎಂದರೇನು ಎಂಬುದನ್ನು ತಿಳಿಯಪಡಿಸುತ್ತೇನೆ. ವರ್ಷ ಮತ್ತು ಕರ್ಣ ಅನ್ನು ತಕ್ಕಂತಹ ಎರಡು ಪದಗಳಿಂದ ವಶೀಕರಣ ಎನ್ನುವಂತಹದ್ದಾಗಿದೆ. ವಶೀಕರಣ ಅಂದ್ರೆ ನಮ್ಮ ಹಾಗೆ ಮಾಡಿಕೊಳ್ಳುವುದು . ನಮ್ಮ ರೀತಿಯಲ್ಲಿ ನಮ್ಮ ಜೀವನದಲ್ಲಿ ಬರುವ ಹಾಗೆ ಮಾಡಿಕೊಳ್ಳುವುದು ಎಂಬುದೇ ವಶೀಕರಣ ಎಂಬುದಾಗಿದೆ.ವಶೀಕರಣ ಅಂದ್ರೆ ಏನು ? ಇದು ವ್ಯಕ್ತಿ ಮೇಲೆ ಮಾಡಲಿಕ್ಕಾಗುತ್ತೋ ಹೇಗೆ ? ಬೇರೆಯವರ ಗಮನವನ್ನು ನಮ್ಮ ಕಡೆ ಸೆಳೆಯಲು ಮಾಡುವ ಒಂದು ತಂತ್ರವೇ ವಶೀಕರಣ ಎನ್ನಬಹುದಾಗಿದೆ.

ಇದು ವ್ಯಕ್ತಿ ಮೇಲೆ ಅಷ್ಟೇ ಮಾಡಲಿಕ್ಕೆ ಸಾಧ್ಯನಾ ಅಂತಕಂತ ವಿಚಾರ ಇದು ಸರ್ವೇಸಾಮಾನ್ಯವಾಗಿ ವಶೀಕರಣ ವಿದ್ಯೆ ತಂತ್ರ ವಿದ್ಯೆಯಲ್ಲಿ ಇದನ್ನ ಮಾಡಬಹುದು ಆದರೆ ಧನ ವಶೀಕರಣ ಸ್ತ್ರೀ ಪುರುಷ ವಶೀಕರಣ ಅನ್ನತಕ್ಕಂತದ್ದು ಇಂದಿನ ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಇದನ್ನು ಧರ್ಮ ದೃಷ್ಟಿಯಿಂದಬ ಬಳಸಬೇಕೆ ಹೊರತು ಅಧರ್ಮದ ಕಾರ್ಯಗಳಿಗಲ್ಲ.

ಬಹುತೇಕ ಎಲ್ಲಿ ಬಳಸಬೇಕು ಎಂದು ಹೇಳಿದರೆ ಇದನ್ನು ದಾಂಪತ್ಯ ಜೀವನದಲ್ಲಿ ಬಿರುಕು ಸರಿಪಡಿಸಲು. ದಾಂಪತ್ಯದ ನಡುವೆ ಗಂಡ ಹೆಂಡತಿಯ ಒಂದು ಸಾಮರಸ್ಯ ಗಂಡ ಹೆಂಡತಿಯ ಒಂದು ಪ್ರೀತಿ ಪ್ರೇಮದ ವಿಚಾರದಲ್ಲಿ ಅವರಿಬ್ಬರನ್ನ ಒಂದುಗೂಡಿಸಬೇಕು ಅನ್ನ ತಕ್ಕಂತಹ ಸಂದರ್ಭದಲ್ಲಿ ಧರ್ಮದ ದೃಷ್ಟಿಯಿಂದ ಗಂಡನನ್ನು ಹೆಂಡತಿಗೆ ಹೆಂಡತಿಯನ್ನು ಗಂಡನಿಗೆ ವಶ ಮಾಡಿ ಕೊಡುವಂತಹ ಪೂಜೆಗಳನ್ನು ಮಾಡುವುದು ಇದು ಒಂದು ಧರ್ಮದೃಷ್ಟಿಯ ಪೂಜೆಯೆ ಆಗಿರುತ್ತದೆ ಹಾಗೂ ಧನವಶಿಕರಣ ನಮ್ಮಲ್ಲಿ ಎಷ್ಟೋ ಕರ್ಮ ಎಷ್ಟೋ ಒಂದು ಪರಿಶ್ರಮದಿಂದ ನಾವು ಕೆಲಸ ಕಾರ್ಯಗಳನ್ನು ಮಾಡುತ್ತೇವೆ ನಮಗೆ ಯಾಕೋ ಒಂದು ರೀತಿಯಿಂದ ದನದಾರಿದ್ರಂತೆ ಕಾಡ್ತಾ ಇದೆ ಧನ ವಶೀಕರಣ ನಮ್ಮಲ್ಲಿ ಇಲ್ಲ ಅಂತ ಹೇಳಿದ್ರೆ ಅಂತವರಿಗೆ ಪೂಜೆ ಪುನಸ್ಕಾರಗಳ ಒಂದು ವಿಚಾರದಿಂದ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಪುನಸ್ಕಾರಗಳನ್ನು ಮಾಡಿ ಧನ ಅವರಲ್ಲಿ ಸಂಗ್ರಹಣೆಯಾಗಲಿಕ್ಕೆ ಲಕ್ಷ್ಮಿ ಕೃಪಾಕಟಾಕ್ಷ ಆಗಲೆಂದು ಕೆಲವೊಂದು ಪೂಜೆ ಪುನಸ್ಕಾರ ಮಾಡಿಸಿ ತಾಂತ್ರಿಕ ವಿದ್ಯೆಯ ಮೂಲಕ ಮಾಡಿಕೊಳ್ಳುವುದಾಗಿದೆ. ಮತ್ತೆ ಅವರ ಒಂದು ಕರ್ಮಕ್ಕೆ ತಕ್ಕಂತೆ ಅವರಿಗೆ ಫಲಗಳನ್ನು ಕೊಡ್ತಾ ಹೋಗಬೇಕು ಆ ನಿಟ್ಟಿನಲ್ಲಿ ಎಷ್ಟೋ ಜನ ಪೂಜೆಯನ್ನು ಮಾಡುತ್ತಿರುತ್ತಾರೆ ಹಾಗೆಂದ ಮಾತ್ರಕ್ಕೆ ಇಡೀ ಭಾರತದಲ್ಲಿ ಲಕ್ಷ್ಮಿ ಪೂಜೆನೆ ಮಾಡ್ತಾ ಇರಿ ಅಂತ ಹೇಳಿದರೆ ಹೇಗೆ.? ಭಾರತದಲ್ಲಿ ಬಡತನ ಇರುವುದಿಲ್ಲವೆ!! ಇಲ್ಲಿ ಉದ್ದೇಶ ಏನೆಂದರೆ ನೀವು ಬರಿಯ ಪೂಜೆನೆ ಮಾಡ್ತಾ ಕೂತ್ಕೊಂಡ್ರೆ ಆಗದು. ವಶೀಕರಣ ಪೂಜೆ ಮಾಡ್ತಾ ಕೂತ್ಕೊಂಡ್ರೆ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಆಗಲಿ ವ್ಯಕ್ತಿ ಆಗಲಿ ಬಡತನದಿಂದ ಮೇಲೆ ಬರುವುದಿಲ್ಲ ಪರಿಶ್ರಮವು ಅಗತ್ಯವಾಗಿದೆ.

ನಾವು ಕರ್ಮವನ್ನು ಮಾಡುತ್ತೇವೆ ಪರಿಶ್ರಮವನ್ನು ಮಾಡುತ್ತೇವೆ ಆ ಪರಿಶ್ರಮಕ್ಕೆ ತಕ್ಕ ಹಾಗೆ ನಮ್ಮಲ್ಲಿ ದುಡ್ಡು ಸಂಗ್ರಹಣೆ ಆಗುವುದಿಲ್ಲ ಎಂತಹದ್ದೇ ಒಂದು ಕೆಲಸವನ್ನು ಮಾಡಲಿ ಕೆಲಸಕ್ಕೆ ತಕ್ಕ ಸಂಭಾವನೆ ನಮ್ಮಲ್ಲಿ ಬರುತ್ತದೆ ದುಡ್ಡು ಮಾಡುತ್ತಾರೆ ಆ ಚಂಚಲತೆಯನ್ನು ಉಂಟುಮಾಡುತಕ್ಕಂತಹ ಮನಸ್ಸಿಗೆ ಪೂಜೆ ಪುನಸ್ಕಾರ ಅನ್ನುವಂತಹ ಒಂದು ಕಡಿವಾಣದಿಂದ ಅದನ್ನ ಹತೋಟಿಯಲ್ಲಿ ಇಟ್ಕೊಂಡ್ರೆ ಆ ಬಂದಂತಹ ದುಡ್ಡನ್ನ ಸಂಪಾದಿಸತಕ್ಕಂತಹ ದುಡ್ಡು ಒಂದು ಕಡೆ ಶೇಖರಣೆಯಾಗಿ ಅವನಲ್ಲಿ ಲಕ್ಷ್ಮಿ ಪ್ರಾಪ್ತವಾಗುತ್ತದೆ ಪೂಜೆಗಳು ಪುನಸ್ಕಾರಗಳು ಮಾಡುವುದರ ಅರ್ಥ ಏನು ಅಂತ ಹೇಳಿದ್ರೆ ಈಗ ದುಡ್ಡು ಸಂಪಾದನೆ ಮಾಡಿರ್ತೀವಿ ಆ ದುಡ್ಡು ಸಂಪಾದನೆ ಮಾಡಿರ್ತಕ್ಕಂತ ದುಡ್ಡನ್ನ ಎಷ್ಟು ರೀತಿಯಲ್ಲಿ ನಾವು ಸಂಗ್ರಹಣೆ ಮಾಡಿರಬೇಕು ಎಷ್ಟು ಬಳಸಬೇಕು ಎಷ್ಟು ನಮಗೆ ಅವಶ್ಯಕತೆ ಇದೆ ಎಷ್ಟು ನಮಗೆ ಮುಂದಿನ ಜೀವನಕ್ಕೆ ಬೇಕಾಗುತ್ತದೆ ಅನ್ನುವಂತಹದ್ದು ಒಂದು ಬುದ್ಧಿ ಮತ್ತು ಬಲವರ್ಧನೆಗಾಗಿ ನಾವು ಪೂಜೆ ಪುನಸ್ಕಾರಗಳ ಮೊರೆ ಹೋಗ್ತೀವಿ ಅವಾಗ ಮನಸ್ಸು ಚಿತ್ತ ಚಂಚಲತೆಯಿಂದ ಮುಕ್ತವಾಗಿ ಹಣ ಉಳಿಸಲು ಸಾಧ್ಯವಾಗುತ್ತದೆ. ವಿನಹ ಬೇರೆ ಯಾವುದೇ ರೀತಿ ವಶೀಕರಣ ಅನ್ನುವಂತಹದ್ದು ಇಲ್ಲ. ಒಂದು ಹೆಣ್ಣಿನ ಮೇಲೆ ಧರ್ಮದ ದೃಷ್ಟಿಯಿಂದ ಮಾತ್ರ ವಶೀಕರಣ ಮಾಡಬೇಕು ಹೊರತು ಅಧರ್ಮೀಯ ದೃಷ್ಟಿಯಿಂದ ಮಾಡಬಾರದು.
ಈ ವಿಚಾರವನ್ನು ನಿಮ್ಮ ಮುಂದೆ ಹೇಳುತ್ತಾ ನನ್ನ ಈ ಜಾಗೃತ ಲೇಖನವನ್ನು ಅರಿತುಕೊಳ್ಳಿ. ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಫಲಿತಾಂಶಗಳನ್ನು ಪಡೆಯಿರಿ. ವಂದನೆಗಳು.
ಸರ್ವೇ ಜನ ಸುಖಿನೋ ಭವಂತು….





Prathidvani Yellapura