
ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ “ನನ್ನ ಪುಸ್ತಕದ ಅವಲೋಕನ” ಹಾಗೂ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಯಲ್ಲಾಪುರದ ‘ಶಿವಶಂಕರ ನಿಲಯ” ಕಾಳಮ್ಮನಗರದಲ್ಲಿ ಜರುಗಿತು.

ನಮ್ಮ ಪುಸ್ತಕದ ಅವಲೋಕನಕ್ಕೆ ಒಳಪಡಿಸುವುದರಿಂದ ಆ ಪುಸ್ತಕದ ನೈಜತೆ ಮತ್ತು ಮೌಲ್ಯದ ಅರಿವಾಗುತ್ತದೆ.ನಮ್ಮ ಪುಸ್ತಕ ಇನ್ನೊಬ್ಬರಿಗೆ ವರ್ಗಾಯಿಸುವ ಮೂಲಕ ಕವಿತ್ವದ ಶಕ್ತಿ ಮತ್ತು ಸುಧಾರಿಸಿಕೊಳ್ಳಬೇಕಾದ ಉತ್ತಮ ಅಂಶಗಳನ್ನು ಅಳವಡಿಕೊಳ್ಳಲು ಸುಲಭವಾಗಿತ್ತದೆ.ಬರೆದರಷ್ಟೇ ಸಾಲದು ಓದುಗರನ್ನು ಹುಟ್ಟು ಹಾಕುವುದು ಅಷ್ಟೇ ಮಹತ್ವದ ವಿಚಾರ..ಈ ನಿಟ್ಟಿನಲ್ಲಿ ಪುಸ್ತಕ ಅವಲೋಕನ ವಿನೂತನ ಕಾರ್ಯಕ್ರಮ. ಉತ್ತಮ ಪ್ರಯತ್ನವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಶಿವಲೀಲ ಹುಣಸಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಯಲ್ಲಾಪುರ ಪ್ರಥಮಧರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಡಿ ಜನಾರ್ದನ ಮಾತನಾಡಿ ಕವಿತೆಯನ್ನು ಓದುವ ಮತ್ತು ಅದನ್ನು ಅರ್ಥಗರ್ಭಿತ ರೀತಿಯಲ್ಲಿ ವಾಚಿಸುವ ವಿಧಾನ ಅರಿತಷ್ಟು ಆ ಕವಿತೆಯ ಒಳಾರ್ಥ ಕಳೆ ಕಟ್ಟುತ್ತದೆ. ಸ್ವರಭಾರಯುಕ್ತ ಓದು ಮಾತ್ರ ಸಹೃದಯಿಯನ್ನು ತಲುಪಲು ಸಾಧ್ಯ! ಹಾಗೆ ಕವಿಯ ನಿಜವಾದ ಭಾವ ಅರಿಯಲು ಅಸಾಧ್ಯ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಡಾ.ಲಕ್ಷ್ಮೀಶ ಹೆಗಡೆ ಸೊಂದ ಭಾರತದ ಇತಿಹಾಸಕಾರರು ಬೆಂಗಳೂರು ಯಲ್ಲಾಪುರದ ಕಿರುಪರಿಚಯ ಮಾಡಿದರು..ಯಲ್ಲಾಪುರದ ಐತಿಹಾಸಿಕವಾಗಿ ಹೊಂದಿರುವ ಮಜಲುಗಳನ್ನು ಹಾಗೂ ಇಲ್ಲಿ ಸಿಕ್ಕಿರುವ ಶಾಸನಗಳು ಏನನ್ನು ಹೇಳುತ್ತವೆ. ಬನವಾಸಿ,ಕಂಪ್ಲಿ,ಯಲ್ಲಾಪುರ ಹಿಂದೆ ಯಾವ ಯಾವ ರಾಜಮನೆತನಗಳಿಂದ ಆಳಲ್ಪಟ್ಟಿತ್ತು..ನಮ್ಮೂರ ಇತಿಹಾಸ ಹೊಸ ದಿಕ್ಕನ್ನು ಸೂಚಿಸುತ್ತದೆ ಎಂಬುದನ್ನು ಆದಷ್ಟು ಬೇಗ ಯಲ್ಲಾಪುರ ಇತಿಹಾಸದ ಬಗ್ಗೆ ಪುಸ್ತಕ ಬರೆಯುತ್ತೆನೆ ಎಂಬ ಮಾತನ್ನು ದೃಢವಾಗಿ ಹೇಳಿದರು.

ಡಾ.ನವೀನಕುಮಾರ ಎ.ಜಿ ಲೇಖಕರ ಕವನಸಂಕಲನ “ಇಂಗಿತ” ಪುಸ್ತಕದ ಅವಲೋಕನವನ್ನು ಕುಮಾರಿ ಪವಿತ್ರಾ ಆರ್ ಆಗೇರ ಶಿಕ್ಷಕರು ಕವನಸಂಕಲನ ಒಳಗೊಂಡ ಅನೇಕ ಅರ್ಥ ವೈವಿಧ್ಯತೆಯನ್ನು ಮತ್ತು ೭೮ ಕವಿತೆಗಳ ಭಾವಾರ್ಥವನ್ನು ಮತ್ತು ಕವಿಯ ಆಶಾಭಾವದ ಜೊತೆಗೆ ಸಮಾಜದ ಅನಿಷ್ಟ ಪದ್ದತಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹೊಮ್ಮಿದ ಪ್ರಕ್ರಿಯೆಯನ್ನು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳ ಹೊತ್ತ ಕವನಗಳ ಕುರಿತು ಅವಲೋಕಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀರಣ್ಣ ನಾಯಕ ಮೊಗಟಾ ಹಿರಿಯ ಸಾಹಿತಿಗಳು ಕವಿತೆಗಳು ಓದುಗರಿಗೆ ತಲುಪುವುದು ಇಂದಿನ ದಿನಗಳಲ್ಲಿ
ಅತ್ಯವಶ್ಯಕವಾಗಿದೆ. ಓದುವ ಪರಂಪರೆ ಮಾಯವಾಗುತ್ತಿದೆ..ಇಂತಹ ಸಮಯದಲ್ಲಿ ನನ್ನ ಪುಸ್ತಕದ ಅವಲೋಕನ ಪುನಃ ಓದುವುದರತ್ತ ವಾಲುವಂತೆ ಮಾಡುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಮಂಜುನಾಥ ಪಟಗಾರ ನ.ಚೇಸಾಂ.ಕ.ವೇ ಯಲ್ಲಾಪುರ, ಶ್ರೀರಂಗ ಕಟ್ಟಿ ಹಿರಿಯ ಸಾಹಿತಿಗಳು ಪರಿಚಯ ಮಾಡಿದರು.ಲೇಖಕರು ಡಾ.ನವೀನಕುಮಾರ ಎ.ಜಿ ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ
“ಮಹಿಳೆ” ವಿಷಯ ಕುರಿತಾದ ವಿಶೇಷ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಭಾಗವಹಿಸಿದ ಕವಿಗಳಾದ ಶರೀಪ ಹಾರ್ಸಿಕಟ್ಟಾ,ಸುಬ್ರಾಯ ಗಾಂವ್ಕರ,ಡಾ.ಸುಚೇತಾ ಮದ್ಗುಣಿ,ದೀಲಿಪ ದೊಡ್ಮನಿ,ರವಿಕುಮಾರ್ ಕೆ.ಎನ್, ರವಿಶೇಷಗಿರಿ, ಸಂಗೀತಾ ಲಮಾಣಿ,ಪಾರ್ವತಿ ಕಟ್ಟಿಮನಿ,ರಾಘವೇಂದ್ರ ಪಟಗಾರ,ಸುನಂದಾ ಪಾಟಣಕರ. ಮಧುಕೇಶವ ಭಾಗ್ವತ, ಮಾರುತಿ ಆಚಾರಿ,ತ್ರೇಷಾ ನೋಹಾ,ವೀರವ್ವ ಪೂಜಾರಿ,ಸುಮಂಗಲಾ ವೆರ್ಣೇಕರ,ಕೃಷ್ಣ ನಾಯಕನಕೆರೆ,ಸತೀಶ ಶೆಟ್ಟಿ, ಗೌತಮಿ ನಾರಾಯಣಕರ,ಪ್ರೀಯಾ ಲಮಾಣಿ,ಸಾನಿಕಾ ಪಟಗಾರ,ದರ್ಶಿನಿ ಸಿದ್ದಿ,ಹೇಮಾಹಬಲ್ಲೇಶ್ವರ ಸಿದ್ದಿ. ಶೆಟ್ಟಿ ಆಶಾ, ಚಂದ್ರಶೇಖರ ಎಸ್.ಸಿ.ವಿನೋದಕುಮಾರ ಐಗಳ,ರಾಧಾ ಭಟ್ಟ.
ಪ್ರಾರ್ಥನೆ -ಕುಮಾರಿ ಶ್ರೀರಕ್ಷಾ ವೆರ್ಣೇಕರ ಸ್ವಾಗತ – ಸುನಂದಾ ಪಾಟಣಕರ ನಿರೂಪಣೆ – ರಾಘವೇಂದ್ರ ಪಟಗಾರ ವಂದನಾರ್ಪಣೆ – ಸುಧಾಕರ ನಾಯಕ. ನೆರವೇರಿಸಿದರು.




Prathidvani Yellapura