






ಪ್ರತಿಧ್ವನಿ, ಯಲ್ಲಾಪುರ – ಪಟ್ಟಣದ ಮಿನಿ ವಿಧಾನಸೌಧದ ಎದುರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ತಹಸೀಲ್ದಾರ ಎಂ.ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.
ಬೇರೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಅಂಬೇಡ್ಕರ್ ಮೂರ್ತಿಗಳಿವೆ. ಆದರೆ ನಮ್ಮ ತಾಲೂಕಿನಲ್ಲಿ ಎಲ್ಲಿಯೂ ಅಂಬೇಡ್ಕರ್ ಮೂರ್ತಿ ಇಲ್ಲ. ಹಾಗಾಗಿ ತಾಲೂಕಿನ ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್ ಅವರ 11 ಅಡಿ ಎತ್ತರದ ಕಂಚಿನ ಮೂರ್ತಿ ನಿರ್ಮಿಸಬೇಕೆಂದು ಆಗ್ರಹಿಸಿದರು.

ಸಮಿತಿಯ ಪರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿ ಸಂಚಾಲಕ ಕೇಬಲ್ ನಾಗೇಶ, ಅಂಬೇಡ್ಕರ್ ಅವರು ದೇಶದ ಪ್ರತಿ ಮನೆಯ ದೇವರು. ಅವರು ನೀಡಿದ ಸಂವಿಧಾನ ಕೇವಲ ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತವಲ್ಲ. ಎಲ್ಲರಿಗೂ ಅನ್ವಯವಾಗುತ್ತದೆ. ಅಂತಹ ದೇವರ ಪ್ರತಿಮೆ ಪ್ರತಿ ತಾಲೂಕಿನ ತಹಸೀಲ್ದಾರ ಕಚೇರಿ ಎದುರು ಇರಲೇಬೇಕು. ಈ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಯಲ್ಲಾಪುರದಿಂದಲೇ ಪ್ರತಿಮೆ ಸ್ಥಾಪನೆಯ ಕಾರ್ಯ ಆರಂಭವಾಗಲಿ ಎಂದು ಆಶಿಸಿದರು.

ಇದಕ್ಕು ಮುನ್ನ ಸಂಘಟಕರು ರಾಷ್ಟ್ರೀಯ ಹೆದ್ದಾರಿ ಬಳ್ಳಾರಿ-ಕಾರವಾರ ಮೂಲಕ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತ ಸಾಗಿ ಬಂದು ಮನವಿ ಸಲ್ಲಿಕೆ ಮಾಡಿದರು.

ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ರೇವಣಕರ್, ಅಧ್ಯಕ್ಷ ಮಾರುತಿ ಬೋವಿವಡ್ಡರ್, ಉಪಾಧ್ಯಕ್ಷರಾದ ಕಲ್ಲಪ್ಪ ಹೊಳಿ, ಅಶೋಕ ಕೊರವರ್, ಶಾಮಲಿ ಪಾಟಣ್ಕರ್, ಕಾರ್ಯದರ್ಶಿ ಸಂತೋಷ್ ಪಾಟಣ್ಕರ್, ಸಹ ಕಾರ್ಯದರ್ಶಿ ತೊಳರಾಮ್ ಜಿ ಅತ್ತರವಾಲ, ಮಾರ್ಗದರ್ಶಕ ಬೆನಿತ್ ಸಿದ್ದಿ, ಹಾಗು ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿ ಪ್ರಮುಖರಾದ ಘನಶ್ಯಾಮ ರೇವಣಕರ್, ಶಂಕರ ನಾಯಕ್ ರೂಪಾ ಪಾಟಣ್ಕರ್, ಇರ್ಷಾದ್ ಕಾಗಲ್ಕರ್, ಬಶೀರ್ ಸೈಯ್ಯದ್, ದ್ಯಾಮಣ್ಣ ಬೋವಿವಡ್ಡರ್, ಹನುಮಂತ ಕೊರವರ್, ಅನಂತ ಸಿದ್ದಿ ಇನ್ನಿತರ ಪ್ರಮುಖರು.

ಸದಸ್ಯರು ನಾಗರಿಕರು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶಿಲ್ದಾರ ಗುರುರಾಜ್ ಮನವಿ ಸಂಬಂಧಿಸಿದವರಿಗೆ ತುಪಿಸಲಾಗುವುದೆಂದು ಭರವಸೆ ನೀಡಿದರು.

ಗೌರವಾಧ್ಯಕ್ಷ ಜಗನ್ನಾಥ ರೇವಣ್ಕರ್ ಮನವಿ ಪತ್ರ ವಾಚಿಸಿದರು. ಸಂತೋಷ್ ಪಾಟಣ್ಕರ್ ಸ್ವಾಗತಿಸಿ ವಂದಿಸಿದರು.


Prathidvani Yellapura