Breaking News

ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ ಸಲ್ಲಿಸಿದ ಪಟ್ಟಣದ ೧೧ ಸಮಸ್ಯೆಗಳ ಪಟ್ಟಿ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು ಶೀಘ್ರ ಪರಿಹರಿಸುವಂತೆ ಮುಖ್ಯಾಧಿಕಾರಿ ಸುನಿಲ್ ಗಾವಡೆಯವರಿಗೆ ರವೀಂದ್ರನಗರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ 11 ಸಮಸ್ಯೆಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ಉಲ್ಲೇಖಿಸಿರುವ ಪಟ್ಟಣದ ಸಮಸ್ಯೆಗಳು :
ಎಲ್ಲೆಂದರಲ್ಲಿ ಮೀನು ಮಾರುತ್ತಿರುವುದು
• ಜಾತ್ರೆಗೆ ಅಳವಡಿಸಿದ ಅಲಂಕಾರಿಕ ದೀಪಗಳು ಹಾಳಾಗಿರುವುದು
• ಜಾತ್ರೆ ನಿಮಿತ್ತ ಬೆಲ್ ರಸ್ತೆ ಮಾಡಿದ್ದು ಸಂಪೂರ್ಣ ಹದಗೆಟ್ಟಿದೆ
• ರವೀಂದ್ರನಗರ-ಮುAಡಗೋಡು ರಸ್ತೆಯಲ್ಲಿ ಆಲದ ಮರ ಬಿದ್ದು ೩ತಿಂಗಳುಗಳಾದರೂ ಮರದ ತುಂಡುಗಳನ್ನು ತೆರವುಗೊಳಿಸದಿರುವುದು
• ಫಾರಂ-೩ ಮಾಡಲು ಸಾರ್ವಜನಿಕರು ಪ.ಪಂ ತೆರಿಗೆ ವಿಭಾಗದಲ್ಲಿ ಅಧಿಕಾರಿಗಳಿಲ್ಲದಿರುವುದು
• ಪ.ಪಂ ಅಧಿಕಾರಿಗಳಿಗೆ ಸದಸ್ಯರು ಕರೆ ಮಾಡಿದರೂ ನಿರ್ಲಕ್ಷö್ಯ ತೋರುತ್ತಿರುವುದು
• ಬಸ್‌ಸ್ಟಾಂಡ್ ರಸ್ತೆ, ಚರ್ಚ್ ಕಾಂಪ್ಲೆಕ್ಸ್ ಮುಂಭಾಗ ಪಾದಚಾರಿಗಳಿಗೆ ಮಾರ್ಗವಿಲ್ಲದಂತೆ ತರಕಾರಿ, ಹೂ-ಹಣ್ಣುಗಳ ಮಾರಾಟ
• ರೋಜರಿ ಶಾಲೆಯಿಂದ ಮಕ್ಕಳು ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಮನೆಗೆ ಹೋಗುವ ಫುಟ್‌ಪಾತ್ ಮೇಲೆ ಗಿಡಗಂಟಿ ಬೆಳೆದು ಮಕ್ಕಳು ಹೆದ್ದಾರಿಯಲ್ಲೆ ನಡೆದು ಹೋಗುವುದು
• ರವಿವಾರ ಸಂತೆಯಲ್ಲಿ ಗ್ರಾಹರು ಓಡಾಡದಂತೆ ಅಂಗಡಿಕಾರರು ರಸ್ತೆಗಳಲ್ಲೇ ಅಂಗಡಿಗಳನ್ನು ತೆರೆಯುತ್ತಿರುವುದು
• ಕಾಳಮ್ಮನಗರದ ಅಂಗನವಾಡಿ ಮಂಜೂರಾಗಿ ೬ ತಿಂಗಳಾದರೂ ಸ್ಥಳ ನಿಗಧಿ ಪಡಿಸದಿರುವುದು
• ಜಿ+೨ ಮನೆ ಮಂಜೂರಾತಿಗಾಗಿ ಫಲಾನುಭವಿಗಳು ೫೦,೦೦೦ ಹಣ ಭರಿಸಿ ೧೮ ತಿಂಗಳು ಕಳೆದರೂ ಮನೆ ನೀಡದಿರುವುದು
ಈ ಮೇಲಿನ ಎಲ್ಲ ಸಮಸ್ಯೆಗಳು ಗಂಭೀರವಾಗಿದ್ದು ತಕ್ಷಣ ಪರಿಹರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಗಾವಡೆ ಸಮಸ್ಯೆಗಳತ್ತ ಗಮನ ಹರಿಸಿ ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಅಭಿಯಂತರ ಹೇಮಚಂದ್ರ ನಾಯ್ಕ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ …

Leave a Reply

Your email address will not be published. Required fields are marked *