Breaking News

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಮತ್ತೊಂದು ಐತಿಹಾಸಿಕ ಸಾಧನೆ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಭಾರತ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶುಭ ಶುಕ್ರವಾರ ಮದ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ “ಚಂದ್ರಯಾನ-3” ಯಶಸ್ವಿ ಉಡಾವಣೆಯಾಗಿದೆ.

ಚಂದ್ರಯಾನ- 3 ವಿಫಲವಾದರೂ ದೃತಿಗೆಡದ ಭಾರತದ ವಿಜ್ಞಾನಿಗಳು ಕಳೆದ ಬಾರಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಚಂದ್ರಯಾನ-3 ಯಶಸ್ವಿ ಉಡಾವಣೆ ಮಾಡಿದ್ದಾರೆ.

ಸುದ್ದಿಯ ವಿಡಿಯೋ ನೋಡಬೇಕ ಇಲ್ಲಿ ಕ್ಲಿಕ್ ಮಾಡಿ

ಇದು ವಿದ್ಯಾರ್ಥಿಗಳಲ್ಲಿ ದೇಶದ ಬಗೆಗಿನ ಗೌರವ ಮತ್ತಷ್ಟು ಹೆಚ್ಚಲು ಮತ್ತು ಬಾಹ್ಯಾಕಾಶ ಕುರಿತ ಕುತೂಹಲಕ್ಕೆ ಪೂರಕವಾಗುವಂತೆ ಚಂದ್ರಯಾನ-3 ಉಡಾವಣೆಯ ಸಂಪೂರ್ಣ ದೃಶ್ಯಾವಳಿಯನ್ನು ದೊಡ್ಡಪರದೆಯ ಮೇಲೆ ನೇರಪ್ರಸಾರವನ್ನು ತೋರಿಸುವ ಮೂಲಕ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆ ಸಾರ್ಥಕ ಕಾರ್ಯ ಮಾಡಿದೆ.


ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕ ರಾಜಶೇಖರ್ 8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಚಂದ್ರಯಾನ -3 ಉಡಾವಣೆಯ ಹಂತ ಹಂತದ ಮಾಹಿತಿಯನ್ನು ಕನ್ನಡದಲ್ಲೇ ವಿವರಿಸಿ ಮಕ್ಕಳಿಗೆ ಅರಿವಾಗುವಂತೆ ತಿಳಿಸಿದರು.

ಬಾಹ್ಯಾಕಾಶ ಕ್ಷೇತ್ರದ ಕುತೂಹಲ ಮಕ್ಕಳಿಗೆ ಮಾತ್ರ ಇರುವುದಲ್ಲ ಸಮಸ್ತ ಮನು ಕುಲಕ್ಕೆ ಅದರ ಬಗ್ಗೆ ಕುತೂಹಲ ಇದ್ದೇಇದೆ. ಹಲವು ವರ್ಷಗಳ ಕಾಲ ಪರ ದೇಶಗಳ ಸಾದನೆಯನ್ನೆ ನಾವು ನಮ್ಮ ಮಕ್ಕಳು ಓದುತ್ತ ಬಂದಿದ್ದೆವು ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದ್ದು ನಮ್ಮ ವಿಜ್ಞಾನಿಗಳ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಯುವಕರಿಗೆ ದೇಶವಾಸಿ ಪ್ರಜೆಗಳಿಗೆ ತಿಳಿಸಬೇಕಿದೆ ಇಂತಹ ಸಾರ್ಥಕ ಕಾರ್ಯ ಮಾಡಿದ ಎಲ್ಲಾ ಶಿಕ್ಷಕ ವೃಂದಕ್ಕೆ ” ಪ್ರತಿಧ್ವನಿ ಯಲ್ಲಾಪುರ ” ಶಿರಬಾಗಿ ನಮಿಸುತ್ತದೆ. ಶ್ಯಾಮಲಾ ನಾಗೇಶ್ ,ಪ್ರಧಾನ ಸಂಪಾದಕಿ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಗ್ರಾಮದೇವಿ ಸುಕ್ಷೇತ್ರ, ಯಲ್ಲಾಪುರ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *