

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ 15 ಗ್ರಾಮ ಪಂಚಾಯತಗಳ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಆಯ್ಕೆ ಪ್ರಕ್ರಿಯೆ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಬುಧವಾರ ನಡೆಯಿತು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ನೇತೃತ್ವದಲ್ಲಿ ನಡೆದ ಗ್ರಾಮ ಪಂಚಾಯತ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಕಣ್ಣಿಗೇರಿ ಗ್ರಾ.ಪಂ ಅಧ್ಯಕ್ಷ ಸ್ಥಾನ ವರ್ಗ-ಅ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಆನಗೋಡು ಗ್ರಾ.ಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ದೇಹಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ವಜ್ರಳ್ಳಿ ಅಧ್ಯಕ್ಷ(ಅ ವರ್ಗ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮಾವಿನ ಮನೆ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಅ ವರ್ಗ ಮಹಿಳೆ), ಇಡಗುಂದಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟ ಪಂಗಡ ಮಹಿಳೆ), ಕಿರವತ್ತಿ ಅಧ್ಯಕ್ಷ(ಅ ವರ್ಗ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಮದನೂರು(ಹುಣಶೆಟ್ಟಿಕೊಪ್ಪ) ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ( ಅ ವರ್ಗ ಮಹಿಳೆ), ನಂದೊಳ್ಳಿ ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ ( ಅ ವರ್ಗ), ಚಂದಗುಳಿ(ಉಪ್ಪಳೇಶ್ವರ) ಅಧ್ಯಕ್ಷ (ಬ ವರ್ಗ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕಂಪ್ಲಿ(ಮAಚೀಕೇರಿ) ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹಾಸಣಗಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಅ ವರ್ಗ), ಕುಂದರಗಿ ಅಧ್ಯಕ್ಷ (ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ (ಬ ವರ್ಗ ಮಹಿಳೆ), ಶಿಗೇಮನೆ(ಉಮ್ಮಚಗಿ) ಅಧ್ಯಕ್ಷ (ಅ ವರ್ಗ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಿತ್ಲಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ನಿಗದಿಯಾಯಿತು.

ಕೆಲವು ಆಯ್ಕೆಗಳು ಒಂದಕ್ಕಿಂತ ಹೆಚ್ಚಿದ್ದಾಗ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಪ್ರಾರಂಭದಲ್ಲಿ ಯಲ್ಲಾಪುರ ತಹಸೀಲ್ದಾರ ಗುರುರಾಜ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ನಂತರ ಮೀಸಲಾತಿ ನಿಗದಿಯ ಮಾಹಿತಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ವಿವರವಾಗಿ ಸಭೆಯಲ್ಲಿದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಿದರು.

ತದನಂತರ ನಡೆದ ಚಟುವಟಿಕೆಗಳನ್ನು ಶಿರಸಿಯ ಸಹಾಯಕ ಆಯುಕ್ತ ದೇವರಾಜ್ ಆರ್ ನಿರ್ವಹಿಸಿದರು.

ಯಲ್ಲಾಪುರ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹಾಗೂ 15 ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು , ಚುನಾಯಿತ ಗ್ರಾ.ಪಂ ಸದಸ್ಯರು , ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
• 15 ಗ್ರಾ.ಪಂಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವು 8 ಸಾಮಾನ್ಯ, 1 ಪ.ಜಾತಿ, 1 ಪ.ಪಂಗಡ, 4 ಅ-ವರ್ಗ, 1 ಬ-ವರ್ಗಕ್ಕೆ ಮೀಸಲಾಗಿದೆ.
• 8 ಪಂಚಾಯತಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
• ಸಾಮಾನ್ಯ ವರ್ಗಕ್ಕೆ 3, ಅ-ವರ್ಗಕ್ಕೆ 2, ಬ-ವರ್ಗಕ್ಕೆ 1, ಪ.ಜಾತಿಗೆ 1, ಪ.ಪಂಗಡಕ್ಕೆ 1 ಮಹಿಳಾ ಮೀಸಲಾತಿ ಲಭಿಸಿದೆ.

ಮೀಸಲಾತಿ ನಿಗಧಿಯಾಗುವ ವೇಳೆ ಕೆಲ ಪಂಚಾಯತ ಸದಸ್ಯರು ಮೀಸಲಾತಿ ನಿಗಧಿಗೆ ಸಮಾಧಾನಿತರಾಗದೇ ಕಳೆದ ಬಾರಿ ಇದ್ದ ಮೀಸಲಾತಿಯೇ ಪುನರಾವರ್ತನೆಯಾಗಿರುವ ಕುರಿತು ಹಾಗೂ ಕೆಲ ಪಂಚಾಯತಗಳಲ್ಲಿ ಮೀಸಲಾತಿ ಬಂದ ವರ್ಗದ ಸದಸ್ಯರೇ ಇಲ್ಲದ ಬಗ್ಗೆ ಪ್ರಶ್ನಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ, ಮೀಸಲಾತಿ ನಿಗಧಿ ಪ್ರಕ್ರಿಯೆ ನಡೆದಿದೆ. ಕೆಲವು ಪಂಚಾಯತಗಳಲ್ಲಿ ಎಸ್.ಸಿ ಮೀಸಲಾತಿ ಬಂದ ಕಡೆ ಅಭ್ಯರ್ಥಿ ಇಲ್ಲವಾದಲ್ಲಿ ಎಸ್.ಟಿಗೂ, ಎಸ್.ಟಿ ಮೀಸಲಾತಿ ಬಂದ ಕಡೆ ಎಸ್.ಸಿಗೂ ಬದಲಿಸಿಕೊಳ್ಳಬಹುದಾಗಿದೆ. ಅ ವರ್ಗ, ಬ ವರ್ಗ, ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಪ್ರಕ್ರಿಯೆಗೆ ಒಳಪಡುತ್ತದೆ. ಉಳಿದೆಲ್ಲವೂ ಸಾಮಾನ್ಯವೆಂದೇ ಗಣನೆಗೆ ತೆಗೆದುಕೊಳ್ಳಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

Prathidvani Yellapura