Breaking News

ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ವಿನೂತನ ಮಾದರಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ ಆಚರಣೆ


ಪ್ರತಿಧ್ವನಿ,ಯಲ್ಲಪುರ – ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ಅಲ್ಲಿನ ಜಯಕರ್ನಾಟಕ ಸಂಘಟನೆ ಅಂಬೇಡ್ಕರ್ ಜಯಂತಿ ಆಚರಣೆಯನ್ನು ವಿನೂತನ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಜಯ ಕರ್ನಾಟಕ ಸಂಘಟನೆಯ ತಾಲೂಕಿನ ವಿವಿಧ ಘಟಕಗಳ ಅಡಿಯಲ್ಲಿ ಜರುಗಿದ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ
ಜಯಕರ್ನಾಟಕ ಸಂಘಟನೆಯಿಂದ ಕಿರವತ್ತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜಿಸಿ ಜಯಂತಿ ಆಚರಣೆ


ಬೆಳಗ್ಗೆ ತಮ್ಮ ಸಂಘಟನೆಯ ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಿ ಭಕ್ತಿ ಭಾವದಿಂದ ಆಚರಿಸಿದ್ದ ಸಂಘಟನೆ ಪ್ರಮುಖರು ಮತ್ತು ಸದಸ್ಯರು ಸಂಜೆ ವೇಳೆಗೆ ಅಲ್ಪ ಸಂಖ್ಯಾತ ಮುಸ್ಲಿಂ ಸಮೂದಾಯದವರು ಆಚರಿಸುತ್ತಿರುವ ರಂಜಾನ್ ಆಚರಣೆಯ ಉಪವಾಸ (ರೋಜಾ) ಬಿಡುವ ವೇಳೆಗೆ ವಿಶೇಷ ಉಪಹಾರದ ವ್ಯವಸ್ಥೆ ಇಫ್ತಿಯಾರ್ ಕೂಟ ಮಾಡಿರುವುದು ವಿಶೇಷವಾಗಿದೆ.

ಜಯ ಕರ್ನಾಟಕ ಸಂಘಟನೆಯ ವತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮುಸ್ಲಿಂ ಬಂಧುಗಳಿಗೆ ನೀಡಿದ ಇಫ್ತಿಯಾರ್


ಅಂಬೇಡ್ಕರ್ ಜಯಂತಿ ಆಚರಣೆಯ ದಿನದಂದೆ ಅವರ ಕನಸಿನಂತೆ ಭಾರತವು ಧರ್ಮ ಜಾತಿ ಭೇದ ಮರೆತು ದೇಶವು ಸಮಾನತೆ ಎಡೆಗೆ ಸಾಗಬೇಕಿದೆ ಎಂಬ ಸಂದೇಶ ಸಾಕಾರ ಗೊಳಿಸಿದಂತಿದೆ.

ಸಾಮರಸ್ಯ ಎಂದರೆ ಇದಲ್ಲವೆ ಸಂಘಟನೆಯ ಕಾರ್ಯಕ್ಕೆ ಶ್ಲಾಘನೆ

ಇಂತಹ ಆತ್ಮೀಯತೆಯ ನಡವಳಿಗಳಿಂದ ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ ಅದೇ ವಿಶ್ವ ಮಾನವ ತತ್ವದೆಡೆಗೆ ಸಾಗುವ ಮಾರ್ಗವು ಆಗಿದೆ.
ಇಂತಹ ವಿನೂತನ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಜಯ ಕರ್ನಾಟಕ ಸಂಘಟನೆ ಪ್ರಶಂಸೆಗೆ ಪಾತ್ರವಾಗಿದೆ.

ಯಲ್ಲಾಪುರ ತಾಲೂಕಿನ ಶೈಕ್ಷಣಿಕ ಕ್ಷೇತ್ರದ ಹಿರಿಮೆ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ
ಪ್ರಸಕ್ತ ವರ್ಷದಿಂದ ನುರಿತ ಸಿ.ಇ.ಟಿ ತರಬೇತುದಾರರಿಂದ ಉತ್ತಮ ತರಭೇತಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ
ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯು ಕ್ರೀಡೆಯಲ್ಲಿಯು ಹೆಸರುವಾಸಿ ಮಕ್ಕಳ ಕ್ರೀಡಾ ಸಾಧನೆಗೆ ದಾರಿ ದೀಪ
ಕಳೆದ ವರ್ಷದ ಶೈಕ್ಷಣಿಕ ಸಾಧನೆ ಮಾಡಿದ ವೈ.ಟಿ.ಎಸ್.ಎಸ್ ವಿದ್ಯಾರ್ಥಿ ನಕ್ಷತ್ರಗಳು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *