Breaking News

ಕೋಳಿಕೇರಿ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುಷರ ಜಾತ್ರೋತ್ಸವ ಜೂ,29 ರ ರವಿವಾರ – ವಿಜಯ್ ಮಿರಾಶಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಇದೇ ತಿಂಗಳ 29-6-2025 ರ ರವಿವಾರ ದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಲಿದೆ ಎಂದು ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಹಿ ಸದಸ್ಯ ಮಿಜಯ್ ಮಿರಾಶಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ತಮ್ಮ ಪೂರ್ವಜರ ಕಾಲದಲ್ಲಿ ಯುದ್ದದಲ್ಲಿ ವೀರ ಮರಣವನಪ್ಪಿದ ಕಾಳುಘಾಡಿ ಮತ್ತು ಬಾಳು ಘಾಡಿ ಅವರ ಪಾರ್ಥಿವ ಶರೀರವನ್ನು ಇದೇ ಕೋಳಿಕೇರಿ ಅರಣ್ಯ ಪರಿಸರದಲ್ಲಿ ಸಂಸ್ಕಾರ ಮಾಡಿದ್ದು ಈ ಪರಿಸರ ದಿವ್ಯ ಶಕ್ತಿಯನ್ನು ತುಬಿಕೊಂಡಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಮತ್ತು ಹೊರರಾಜ್ಯದ ಸಹಸ್ರಾರು ಭಕ್ತರು ದೈವಾಂಶ ಸಂಭೂತರಾದ ಕಾಳು ಘಾಡಿ – ಬಾಳು ಘಾಡಿ ದರ್ಶನ ಪಡೆದು ಸಕಲ ಇಷ್ಟಾಥಗಳನ್ನು ಬೇಡಿ ಕೊಳ್ಳುತ್ತಾರೆ.

ವಿಜಯ್ ವಿ ಮಿರಾಶಿ, ವಿನೋದ್ ಎಚ್ ಮಿರಾಶಿ, ಸುಭಾಷ್ ಮಿರಾಶಿ, ಆನಂದ ಮಿರಾಶಿ ಹಾಗೂ ಮಿರಾಶಿ ಬಂಧುಗಳು ಆಪ್ತರ ನೇತೃತ್ವದಲ್ಲಿ ಜಾತ್ರೋತ್ಸವದ ಸಕಲ ಸಿದ್ಧತೆಗಳು ಪ್ರಾರಂಭವಾಗಿದ್ದು‌ ಭಕ್ತರಿಗೆ ಪೂಜಾ ವ್ಯವಸ್ಥೆ ಮತ್ತು ಪ್ರಸಾದ ವಿನಿಯೋಗ ನೆರವೇರಿಸಲಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *