
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಒಂದಾದ “ಸ್ಪೋರ್ಟ್ಸ್ ಕ್ಲಬ್, ಯಲ್ಲಾಪುರ” ವತಿಯಿಂದ ಮೇ 18 ರ ರವಿವಾರ ಒಂದು ದಿನದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಕಮಿಟಿಯ ಪದ್ಮನಾಭ ಶಾನಭಾಗ ಮಾಹಿತಿ ನೀಡಿದ್ದಾರೆ.

ಬೆಳೆಯುತ್ತಿರುವ ಜಗತ್ತಿನೊಂದಿಗೆ ಮೊಬೈಲ್, ಇಂಟರ್‌ನೆಟ್, ಟಿವಿಗಳ ಭರಾಟೆಯಲ್ಲಿ ಕ್ರೀಡೆ ನಶಿಸುತ್ತಿದ್ದು ಮಕ್ಕಳು, ಯುವಜನತೆಯಲ್ಲಿ ಕ್ರೀಡಾ ಜಾಗೃತಿ ಮೂಡಿಸುವ ಸಲುವಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. 5೦೦೦ರೂ ಪ್ರಥಮ ಬಹುಮಾನ, 25೦೦ ದ್ವಿತೀಯ, 1೦೦೦ರೂ ತೃತೀಯ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಉತ್ತಮ ಲಿಫ್ಟರ್, ಶೂಟರ್ ಹಾಗೂ ಪಂದ್ಯ ಪುರುಷೋತ್ತಮ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಉತ್ತಮವಾಗಿ ಆಡುವ ಆಟಗಾರರನ್ನು ಆರಿಸಿ ತಾಲೂಕು ತಂಡವನ್ನು ರಚಿಸಲಾಗುವುದು.

ಪಂದ್ಯಗಳು ವೈ.ಟಿ.ಎಸ್.ಎಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ತಂಡಗಳು ಮೇ 18 ರ ಬೆಳಿಗ್ಗೆ ಹಾಜರಿರಬೇಕು. ರೂ.3೦೦ ಪ್ರವೇಶ ಶುಲ್ಕವಿದ್ದು ಬೆಳಗಿನ ಉಪಹಾರ ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಯಲ್ಲಾಪುರ ತಾಲೂಕಿನ ಆಟಗಾರರಿಗೆ ಮಾತ್ರ ಪ್ರವೇಶವಿದ್ದು ಆಧಾರ ಕಾರ್ಡ್ ಕಡ್ಡಾಯವಾಗಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು ತಂಡದ ಹೆಸರು ನೀಡಲಿಚ್ಚಿಸುವವರು ರಮೇಶ್ ಕಾಮತ್ ದೂ.ಸಂ: 9448957010, ಪದ್ಮನಾಭ ಶಾನಭಾಗ – 7338323077 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.








Prathidvani Yellapura