Breaking News

ಮದನೂರಿನಲ್ಲಿ ಮಹಾನ್ ಮಾನವತವಾದಿ ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ತಾಲೂಕಿನ  ಮದನೂರಿನಲ್ಲಿ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಭಕ್ತಿ ಭಾವದಿಂದವಾಚರಿಸಲಾಯಿತು.

    ಸಂಘಟನಾ ಪ್ರಮುಖ ಪರಶುರಸಮ ಚಲವಾದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸಂವಿಧಾನ ಜನಕ ಇಡೀ ದೇಶವನ್ನು ಕಾನೂನಿ ಚೌಕಟ್ಟಿ ನಡಿ ತಂದ ಮಹಾನ್ ಮಾನವತವಾದಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್
ರವರ 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಪರಶುರಾಮ ಚಲವಾದಿ , ನಾಮದೇವ ಶಿರನಾಳಕರ , ಬಾಬು ಸಿದ್ಧಿ , ಆನಂದ ಕುರಿ , ರಾಘವೇಂದ್ರ ಗೊಂದಿ , ಸಂಜು ಮಿರಾಶಿ , ಶೇಖರ್ ಗೋಸಾವಿ ,
ಅಲ್ಲಾಭಕ್ಷ ಬೈಲಂದೂರು ,ಗೀತಾ ಕಲಬುರ್ಗಿ,ಅಶೋಕಹರಿಜನ್ ,
ಶೇಖರ್ ರಂಗನಾಥ ವಡ್ಡರ್ ,  ಮನವೇಲ ಸಾಲು ಸಿದ್ದಿ ಇನ್ನಿತರ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದರು.

ಜಗತ್ತಿಗೆ ಸಮಾನತೆಯ ದಿಕ್ಕು ತೋರಿಸಿ ಭಾರತದ ಸಾರ್ವಕಾಲಿಕ ಮಹಾನ್ ಚೇತನರಾಗಿ ಮನುಷ್ಯನ ಗೌರವ ಹೆಚ್ಚಿಸಿದ ಅಂಬೇಡ್ಕರ್ ಅವರ ತ್ಯಾಗ ಶ್ರಮದ ಫಲವೇ ನಾವೆಲ್ಲರೂ ಇಂದು ಗೌರವದಿಂದ ಬದುಕು ನಡೆಸಲು ಸಾದ್ಯವಾಗಿದೆ. ಬಾಬು ಸಿದ್ದಿ ,ಸಾಮಾಜಿಕ ಕಾರ್ಯಕರ್ತ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *