
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಂದೆಯಿಲ್ಲದೆ ತಾಯಿಯ ಆಧಾರ ಹಾಗೂ ಅಣ್ಣನ ಬಲದಲ್ಲಿ ಬಡತನದ ಬೇಗೆಯಿದ್ದರೂ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.91.5% (549) ಅಂಕ ಗಳಿಸಿದ ತಾಲೂಕಿನ ಖಾರೇವಾಡ ನಿವಾಸಿ ಪಟ್ಟಣದ ವಿಶ್ವದರ್ಶನ ಪಿಯು ಕಾಲೇಜಿನ ಲಕ್ಷ್ಮೀ ಜನ್ನು ಪಾಂಡ್ರಮಿಶೆ ಸಾಧನೆ ಮಾಡಿದ್ದಾಳೆ.

ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಗಳಿಸಿದ ಕುವರಿ ದನಗರ ಗೌಳಿ ಸಮಾಜದ ಹೆಣ್ಣುಮಗಳಾಗಿ ಸಮಾಜಕ್ಕುಕಲಿತ ಶಾಲೆಗು ಕೀರ್ತಿ ತಂದಿದ್ದಾಳೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿಯವರೆಗೆ ವ್ಯಾಸಂಗ ಮಾಡಿ ಅಲ್ಲಿಯೂ 92% ಪ್ರತಿಶತ ಅಂಕ ಪಡೆದು ಬಡತನ ವಿದ್ಯೆಗೆ ಅಡ್ಡಿಯಾಗದು ಕಲಿಯುವ ಶ್ರದ್ದೆ ಸಾಧಿಸುವ ಛಲವಿರಬೇಕು ಎಂಬುದನ್ನು ತೋರಿಸಿದ್ದಾಳೆ.
ತಾಲೂಕಿನ ಖಾರೆವಾಡಾದ ಜನ್ನು ಬಾಬು ಪಾಂಡ್ರಮಿಶೆ ಹಾಗೂ ಸರಿತಾ ಜನ್ನು ಪಾಂಡ್ರಮಿಶೆಯವರ ಮಗಳಾಗಿದ್ದು ಮುಂದೆ ಉನ್ನತ ವಿದ್ಯಾಭ್ಯಾಸ ಮಾಡುವ ಗುರಿ ಹೊಂದಿದ್ದಾಳೆ. ಈಕೆಯ ಸಾಧನೆಗೆ ದನಗರ ಗೌಳಿ ಸಮಾಜದಿಂದ ಪ್ರಶಂಸೆ ವ್ಯಕ್ತವಾಗಿದೆ.
