Breaking News

ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಲೋಕ್ ಅಧಾಲತ್

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ನ್ಯಾಯಾಲಯದ ಆವರಣದಲ್ಲಿ ಮಾ,14 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು.


ಲೋಕ್ ಅದಾಲತ್‌ನಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಕುಮಾರ್ ಎಸ್ ಮತ್ತು ಹಿರಿಯ ಸಿವಿಲ್ ನ್ಯಾಯಾಲಯದ ಅಡಿಯಲ್ಲಿ ದಾಖಲಾದ ಒಟ್ಟು 64 ಪ್ರಕರಣಗಳಲಿ ಒಟ್ಟು 53 ಪ್ರಕರಣಗಳು ಇತ್ಯರ್ಥವಾದವು.  ಇದರಿಂದ ಸರ್ಕಾರಕ್ಕೆ 1,67,81,627 -00 ರೂ ಭರಣ ಮಾಡಲಾಯಿತು.


ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಅನಿತಾ ಕುಮಾರಿ . ಎಸ್ ಅವರು ಸಿವಿಲ್ ನ್ಯಾಯಾಲಯದಲ್ಲಿ ದಾಖಲಾದ ಮತ್ತು 314 ಪ್ರಕರಣಗಳಲ್ಲಿ 228 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.  ಇದರಿಂದ ಸರ್ಕಾರಕ್ಕೆ 35,54,638-00 ರೂ ಭರಣ ಮಾಡಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ವಕೀಲರಾದ ಗಣಪತಿ ಎಸ್ ಭಟ್ಟ, ಸಿವಿಲ್‌ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ವಕೀಲರಾದ ಸುಬಾಷ್ ಸಿ ಭಟ್ಟ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ  ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ಟ, ಅಪರ ಸರ್ಕಾರಿ ವಕೀಲರಾದ ಎನ್.ಟಿ.ಗಾಂವ್ಕರ್, ಸಹಾಯಕ ಸರಕಾರಿ ಅಭಿಯೋಜಕಿ ಝೀನತ್ ಬಾನು ಶೇಖ್ ಹಾಗು ಎಲ್ಲಾ ವಕೀಲರು,  ಸೊಸೈಟಿ ಹಾಗೂ ಬ್ಯಾಂಕಿನ ಅಧಿಕಾರಿಗಳು, ಕಕ್ಷಿದಾರರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು  ಉಪಸ್ಥಿತರಿದ್ದು ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಗೊಳಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ  ಬಾಬು ಸಿದ್ದಿ ಮತ್ತು ತಂಡ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ …

Leave a Reply

Your email address will not be published. Required fields are marked *