Breaking News

ತಂದೆ ಜನರ ಜೀವ ಉಳಿಸುವ ವೈದ್ಯ ವೃತ್ತಿ ; ಮಗನಿಗೆ ಮೂಕ ಪ್ರಾಣಿಗಳ ಸೇವೆಯಲ್ಲಿ ಆತ್ಮ ತೃಪ್ತಿ..


ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ನಿರ್ವಹಿಸುತ್ತಿರುವ ಡಾ.ಮಂಜುನಾಥ ಆರ್ ನಾಯ್ಕ ಅವರ ಪುತ್ರ ಲಿಖಿತ್ ಮಂಜುನಾಥ ನಾಯ್ಕಗೆ ಮೂಕ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉರಗಗಳನ್ನು ರಕ್ಷಿಸುವ ಪ್ರವೃತ್ತಿ.


ಬಿ.ಇ ನಾಲ್ಕನೇ ವರ್ಷದಲ್ಲಿ ಓದುತ್ತಿರುವ 21 ವರ್ಷದ ಲಿಖಿತ್ ಮಂಜುನಾಥ ನಾಯ್ಕ ಬಾಲ್ಯದಿಂದಲೂ ಮೂಕಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿ ಬೆಳೆದವನು. ಬಾಲ್ಯದಲ್ಲಿ ಅಜ್ಜ ದಿ.ರಾಮಚಂದ್ರ ನಾಯ್ಕರೊಂದಿಗೆ ಸದಾ ಪ್ರಾಣಿಗಳನ್ನು ಆರೈಕೆ ಮಾಡುವುದರಲ್ಲೇ ತೊಡಗಿಕೊಂಡು ತನ್ನಲ್ಲೂ ಪ್ರಾಣಿ ಪ್ರೀತಿಯನ್ನು ಮೈಗೂಡಿಸಿಕೊಂಡವನು.

ಬೀದಿ ಬದಿಯಲ್ಲಿ ನಾಯಿಯೊಂದು ಅನಾರೋಗ್ಯದಿಂದ ಬಳಲುತ್ತಿದ್ದರೆ ನಮಗೇಕೆ ಎಂದು ಮುಖ ತಿರುಗಿಸಿ ಹೋಗುವವರ ನಡುವೆ ಸ್ಥಳಕ್ಕೆ ತೆರಳಿ ಆರೈಕೆಯಲ್ಲಿ ತೊಡಗಿಕೊಳ್ಳುವ ಲಿಖಿತ್ , ಗಾಯಗೊಂಡಿದ್ದಲ್ಲಿ ಬ್ಯಾಂಡೇಜ್ ಕಟ್ಟುವುದು, ಆರೋಗ್ಯ ಸರಿಯಾಗುವವರೆಗೂ ತಮ್ಮ ಮನೆಯಲ್ಲೆ ಇರಿಸಿಕೊಳ್ಳುತ್ತಾನೆ.


ಪೆಟ್ಟಾಗಿ ಬಂದ ಅಳಿಲುಗಳಿಗೆ ನೀರು, ಔಷಧಿ ನೀಡುವುದು, ರೆಕ್ಕೆ ಮುರಿತಕ್ಕೆ ಒಳಗಾದ ಹದ್ದಿನ ರಕ್ಷಣೆ ಮಾಡಿ ಮುರಿದ ಮೂಳೆ ಸರಿಯಾಗುವವರೆಗೂ ಆರೈಕೆ ಮಾಡಿ ಹಾರಲು ಶಕ್ತವಾದ ನಂತರ ಕಾಡಿಗೆ ಬಿಡುವುದು. ಮನೆಯಲ್ಲಿ ಉರಗಗಳು ಸೇರಿದಾಗ ಅವುಗಳಿಗೆ ತೊಂದರೆಯಾಗದಂತೆ ರಕ್ಷಿಸಿ ಕಾಡಿಗೆ ಬಿಡುವುದು, ಮೂಕಪ್ರಾಣಿಗಳಿಗೆ ತಾಯಿ ಪ್ರೀತಿಯನ್ನು ನೀಡುವಷ್ಟರ ಮಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ. ಮನೆಯಲ್ಲೇ ಸಾಕಿರುವ ನಾಯಿಯೊಂದಕ್ಕೆ ತುತ್ತು ಮಾಡಿ ಅನ್ನ ತಿನ್ನಿಸುವುದು ನೋಡಿದರೆ ಮೂಕಪ್ರಾಣಿಗಳ ಮೇಲಿನ ಪ್ರೀತಿಯ ಆಳ ತಿಳಿಯುತ್ತದೆ.

ಇತ್ತೀಚಿಗೆ ಹಾವೊಂದು ಚರಂಡಿಯಲ್ಲಿ ಸಿಲುಕಿ ಪೆಟ್ಟು ಮಾಡಿಕೊಂಡು ನೋವು ಅನುಭವಿಸುತ್ತಿದ್ದಾಗ ಸ್ಥಳಕ್ಕೆ ತೆರಳಿ ರಕ್ಷಿಸಿದ್ದಲ್ಲದೇ ಯಾವ ಭಯವಿಲ್ಲದೇ ಹಾವಿನ ಮೈಯನ್ನೆಲ್ಲಾ ತೊಳೆದು ಔಷಧಿ ಹಚ್ಚಿ ಕಾಡಿಗೆ ಬಿಟ್ಟಿದ್ದಾನೆ.


ಒಟ್ಟಿನಲ್ಲಿ ತಂದೆ ಡಾ.ಮಂಜುನಾಥ ಉತ್ತರಕನ್ನಡ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಅತಿ ಹೆಚ್ಚು ಆರೋಗ್ಯ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ ಸದ್ಯ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಅನಾರೋಗ್ಯದಿಂದ ಬಳಲುವ ವ್ಯಕ್ತಿಗಳಿಗೆ ಆತ್ಮೀಯತೆಯ ಮಾತುಗಳನ್ನಾಡುತ್ತಾ ಉತ್ತಮ ಚಿಕಿತ್ಸೆ ನೀಡಿ ಜನರೊಂದಿಗೆ ಚಿರಪರಿಚಿತರಾಗಿದ್ದು ಅವರ ಮಗ ಮೂಕಪ್ರಾಣಿಗಳಿಗೆ ಅಕ್ಕರೆ ತೋರಿ ಆರೈಕೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *