
ಕೇಬಲ್ ನಾಗೇಶ್ ,ಪ್ರತಿಧ್ವನಿ ಅತಿಥಿ ಬರಹ…..🖊

ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಭೋಧಿಸಿದ ಧರ್ಮ ಸೂಕ್ಷ್ಮ ವಿಚಾರಗನ್ನೊಳಗೊಂಡ ಭಗವದ್ಗೀತೆ ಯನ್ನು ಹಿಂದು ಧರ್ಮ ಗ್ರಂಥವಾಗಿ ಗೌರವಿಸುತ್ತೇವೆ ಅಂತೆಯೆ ಭವ್ಯ ಭಾರತದ ಸ್ವಾತಂತ್ರ್ಯ ನಂತರ ಮನುಕುಲ ಮಾನವೀಯ ನೆಲೆಗಟ್ಟಿನಲ್ಲಿ ಬದುಕಲು ಸೃಷ್ಟಿಸಿದ ದಿವ್ಯವಾದ ಪವಿತ್ರ ಗ್ರಂಥವೆ ” ಅಂಬೇಡ್ಕರ್ ರಚಿಸಿದ ಸಂವಿಧಾನ ಇದು ನಮ್ಮೆಲ್ಲರ ಮದ್ಯದಲ್ಲೆ ಇದ್ದು ಕಣ್ಣಿಗೆ ಕಂಡ ಮನುಷ್ಯರೂಪದಲ್ಲಿದ್ದ ದೇವರು ನೀಡಿದ ಭಾರತದ ನಿಜವಾದ ಧರ್ಮಗ್ರಂಥ ” ಸಂವಿಧಾನ ” ಇದು ಸಾರ್ವಕಾಲಿಕ ಮೂರ್ತ ಸ್ವರೂಪದ ಸತ್ಯ.

ಬಹುತೇಕ ಜನರಲ್ಲಿರುವ ತಪ್ಪು ಭಾವನೆ ಎಂದರೆ ಬಾಬಾ ಸಾಹೆಬ್ ಅಂಬೇಡ್ಕರ್ ಅವರು ದಲಿತರ,ಹಿಂದುಳಿದವರ,ಅಲ್ಪಸಂಖ್ಯಾತರ ,ಬುಡಕಟ್ಟು, ಆದಿವಾಸಿಗಳ ಆರಾಧ್ಯ ದೈವ ಎಂಬುದು. ನಿಜವಾದ ವಿಚಾರವೆಂದರೆ ಅಂಬೇಡ್ಕರ್ ಭಾರತೀಯರ ಆರಾಧ್ಯ ದೈವ ಕಾರಣ ಪ್ರತಿಯೊಬ್ಬ ಭಾರತೀಯನ ದೈನಂದಿನ ಚಟುವಟಿಕೆಯಲ್ಲಿ ಜೀವನದ ಹಂತಗಳಲ್ಲಿ ಬದುಕಿನ ಪಥದಲ್ಲಿ ಬೆರೆತುಹೋಗಿದ್ದಾರೆ. ಕೇವಲ ಮಿಸಲಾತಿ ಕೊಟ್ಟಿದ್ದಾರೆ ಎಂಬ ವಿಚಾರಕ್ಕೆ ಅವರನ್ನು ಸೀಮಿತಗೊಳಿಸದೆ ಭಾರತೀಯರ ಬದುಕಿಗೆ ಶ್ರೇಷ್ಠ ಪಥವನ್ನ ಹಾಕಿಕೊಟ್ಟ ನಿಜವಾದ ಸಂತರಾಗಿದ್ದಾರೆ.

ಪ್ರಸ್ತುತ ನಾವು ಜೀವಿಸುತ್ತಿರುವ ಪ್ರತಿ ದಿನವು ಅಂಬೇಡ್ಕರ್ ನೀಡಿರುವ ದಿನಗಳಾಗಿವೆ ಇಲ್ಲದಿದ್ದರೆ ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಕಾಣಬೇಕಿತ್ತು. ದಮನಿತರ,ಶೋಷಿತರ,ತುಳಿತಕ್ಕೊಳಗಾದವರ ಧ್ವನಿಯಾಗಿ ಸಮಸ್ತ ಭಾರತೀಯರ ಸ್ವಾತಂತ್ರ ಬದುಕಿನ ಗಣಿಯಾದವರು ಡಾ.ಬಿ.ಆರ್.ಅಂಬೇಡ್ಕರ್ ಅವರು.

ರಾಜಕೀಯ, ಸಾಮಾಜಿಕ,ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ರಿಯೆಗಳಲ್ಲಿ. ನ್ಯಾಯಾಂಗ,ಕಾರ್ಯಾಂಗ,ಶಾಸಕಾಂಗ ವ್ಯಸ್ಥೆಯಲ್ಲಿ. ಸರ್ಕಾರಿ ಉದ್ಯೊಗದಲ್ಲಿ ಪ್ರತಿ ವ್ಯವಸ್ಥೆಯಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯಗಳಿವೆ ಅದರ ಅಡಿಯಲ್ಲಿ ಬದುಕುತ್ತಿದ್ದೇವೆ ಅಂದ ಮೇಲೆ ಕಣ್ಣಿಗೆ ಕಾಣುವ ಮಾನವ ಸ್ವರೂಪದ ದೈವೀ ಪುರುಷ ಅಂಬೇಡ್ಕರ್ ಎಂಬುದು ಜಗತ್ತಿನ ಸತ್ಯ ಅಲ್ಲವೆ.

ಅಂತಹ ಮಹಾನ್ ಪರುಷರ ಮೂರ್ತಿ ಸ್ಥಾಪನೆ ಪ್ರತಿ ಮನೆಗಳಲ್ಲು ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಜನಮಾನಸಕ್ಕು ಭವಿಷ್ಯದ ಪೀಳಿಗೆಗು ಅಂಬೇಡ್ಕರ್ ಚಿರಸ್ಥಾಯಿಯಾಗಿರುತ್ತಾರೆ ಅದಕ್ಕಾಗಿ ಯಲ್ಲಾಪುರದ ಆಡಳಿತ ಸೌಧದ ಎದುರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಪ್ರಿಷ್ಟಾಪಿಸಲು ಸಮಸ್ತ ಯಲ್ಲಾಪುರ ತಾಲೂಕಿನ ಜನರು ಕೈಜೋಡಿಸಬೇಕಿದೆ.

” ಭಾರತೀಯರ ಬದುಕಿಗೆ ಸಂವಿಧಾನದ ನೆರಳಲ್ಲಿ ಶ್ರೇಷ್ಠ ಪಥ ಹಾಕಿ ಕೊಟ್ಟ ಕಣ್ಣಿಗೆ ಕಂಡ ದೇವರಾದ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಟಾಪನೆಗೆ ಬೆಂಬಿಸೋಣ”

ಜೈ ಭಾರತ ಮಾತ , ಜೈ ಸಂವಿಧಾನ , ಜೈ ಅಂಬೇಡ್ಕರ್
Prathidvani Yellapura