



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಕೆ.ಬಿ.ರಸ್ತೆ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಹೆ ನಿರ್ಮಾಣಗೊಂಡು ಜನರಿಗೆ ಸೇವೆ ನೀಡುತ್ತಿರುವ ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆ ಅರ್ಥಪೂರ್ಣವಾದ ಕಾರ್ಯವಾಗಿದ್ದು. ಅದಕ್ಕಾಗಿ ಆಗ್ರಹಿಸಿ ಹೋರಾಟ ಮಾಡುವ ಸಲುವಾಗಿ ವಿವಿಧ ಸಂಘಟನೆಗಳ ಪ್ರಮುಖರು ಯಲ್ಲಾಪುರದ ಲೊಕೊಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಸಭೆಸೇರಿ ಮೂರ್ತಿ ಸ್ಥಾಪನೆಗೆ ಆಗ್ರಹಿಸಲು ಸರ್ವಾನುಮತದಿಂದ ಸಮಿತಿ ರಚಿಸಲಾಯಿತು.


ಸಮಿತಿ ಗೌರವಾಧ್ಯಕ್ಷರಾಗಿ ಜಗನ್ನಾಥ ರೇವಣಕರ್, ಅಧ್ಯಕ್ಷರಾಗಿ ಮಾರುತಿ ಬಿ ವಡ್ಡರ್, ಉಪಾಧ್ಯಕ್ಷರಾಗಿ ಕಲ್ಲಪ್ಪ ಹೊಳಿ, ಅಶೋಕ್ ಕೊರವರ್, ಸಂಚಾಲಕರಾಗಿ ನಾಗೇಶ್ ಕುಮಾರ್.ಎನ್ , ಕಾರ್ಯದರ್ಶಿ ಯಾಗಿ ಸಂತೋಷ್ ಪಾಟಣ್ಕರ್, ಸಹಕಾರ್ಯಶಿ ತೋಳರಾಮ್ ಜಿ ಅತ್ತರವಾಲ ಮಾರ್ಗದರ್ಶಕರಾಗಿ ಬೆನಿತ್ ಸಿದ್ದಿ ಅವರನ್ನು ಹಾಗು 29 ಕ್ಕು ಅಧಿಕ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನಂತರ ಸಭೆಯಲ್ಲಿ ಮಾ,15 ರಂದು ಶುಕ್ರವಾರ 12 ಗಂಟೆಗೆ ಮೂರ್ತಿ ಪ್ರತಿಷ್ಟಾಪನೆಗೆ ಆಗ್ರಹಿಸಿ ಶಾಸಕರಿಗೆ ತಹಶಿಲ್ದಾರರಿಗೆ, ಹಾಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
Prathidvani Yellapura