
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ತುಂಬಾ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 9 ನೆ ತರಗತಿ ಪಠ್ಯದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಕ್ಲಾಸ್ ರೂಮಿನಲ್ಲಿ ಪಾಠ ಹೇಳುವುದರ ಜೊತೆಯಲ್ಲಿ ಅದೇ ವಿಷಯವನ್ನು ಆಸ್ಪತ್ರೆಯಲ್ಲಿ ಅದರಲ್ಲು ವೈಧ್ಯರ ಕಡೆಯಿಂದ ನೇರವಾಗಿ ವಿವರಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳು ಅರ್ಥೈಸಬಲ್ಲರೆಂದು ಸುಮಾರು 70 ವಿದ್ಯಾರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯರಾದ ಡಾ,ದೀಪಕ್ ಭಟ್ ಮತ್ತು ಡಾ, ಸೌಮ್ಯ ದೀಪಕ್ ಭಟ್ ವಿದ್ಯಾರ್ಥಿಗಳಿಗೆ ಮನಸ್ಸಿಗೆ ಮುಟ್ಟುವಂತೆ ವಿಷಯವನ್ನು ವಿವರಿಸಿದರು ಹಾಗು ರಕ್ತ ಪರೀಕ್ಷಿಸುವ ಸಾಧನವನ್ನು ವಿದ್ಯಾರ್ಥಿಗಳೆ ನೋಡುವುದಕ್ಕು ಅವಕಾಶ ಕಲ್ಪಿಸಿದರು.

ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆಯ ಶಿಕ್ಷಕರು ಇತರೆ ಸಿಬ್ಬಂದಿಗಳು ಆಗಮಿಸಿದ್ದರು ಆಸ್ಪತ್ರೆ ಲ್ಯಾಬ್ ಸಿಬ್ಬಂದಿಗಳಾದ ರಾಘು , ಮಾಲತೇಶ್, ಗಣೇಶ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಸಹಕರಿಸಿದರು.
Prathidvani Yellapura