
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರಥಮ ದರ್ಜೆ ಕಾಲೇಜಿನ ಯುವರೆಡ್ ಕ್ರಾಸ್, ಎನ್ಎಸ್ಎಸ್, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಕಿಮ್ಸ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಿಮ್ಸ್ ವೈದ್ಯಾಧಿಕಾರಿ ಡಾ.ಆತ್ಮಶ್ರೀ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಯುವ ರೆಡ್ ಕ್ರಾಸ್ ಸಂಚಾಲಕ ಶರತ್ ಕುಮಾರ್ ಪ್ರಾಥಮಿಕವಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಿ ಎಸ್ ಭಟ್ ಅಧ್ಯಕ್ಷತೆ ವಹಿಸಿದ್ದರು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ರೋವರ್ ಸ್ಕೌಟ್ಸ್ ಲೀಡರ್ ಡಿಜಿ ತಾಪಸ್, ರೇಂಜರ್ ಲೀಡರ್ ಭವ್ಯ ಸಿ, ಕ್ರೀಡಾ ಸಂಚಾಲಕ ಜನಾರ್ಧನ್, ಪ್ಲೇಸ್ಮೆಂಟ್ ಸಂಚಾಲಕಿ ಸುರೇಖಾ ತಡವಲ ಬೋಧಕ ಬೋಧಕೇತರ ಸಿಬ್ಬಂದಿ ಎನ್ಎಸ್ಎಸ್ ಸ್ವಯಂಸೇವಕ ಸೇವಕಿಯರು ರೋವರ್ಸ್ ರೆಂಜರ್ಸ್ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಶಿಬಿರದಲ್ಲಿ ಸುಮಾರು 62 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನವನ್ನು ಮಾಡಿದರು.
Prathidvani Yellapura