Breaking News

ನಿವೃತ್ತ ಉದ್ಯೋಗಿಗಳಿಂದ ನಿಧಿ ಸಮರ್ಪಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.


ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳು ತಾವು ದುಡಿದ ಸಂಸ್ಥೆಗೆ ಎರಡು ಲಕ್ಷ ಇಪ್ಪತೈದು ಸಾವಿರದ ಎರಡು ನೂರಾ ಇಪ್ಪತೈದು ರೂಪಾಯಿಗಳ(2,25,225) ನಿಧಿಯನ್ನು ಸಮರ್ಪಿಸಿದರು.
ಈ ನಿಧಿಯನ್ನು ಖಾಯಂ ಠೇವಣಿಯಾಗಿ ಆರ್ಥಿಕ ಸಂಸ್ಥೆಯಲ್ಲಿ ಇಡಬೇಕೆಂದು ಇಚ್ಛಿಸಲಾಗಿದ್ದು, ಇದರಿಂದ ಬರುವ ಬಡ್ಡಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಉಪಯೋಗಿಸಲು ಕೋರಲಾಗಿದೆ. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ಕೊಡುವಂತೆ ತಿಳಿಸಲಾಗಿದೆ

ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಏನಾದರು ಸಹಾಯ ಮಾಡುವುದು ಸಾಮಾನ್ಯ ಬಹುತೇಕ ಊರುಗಳಲ್ಲಿ ಇದನ್ನು ನಿತ್ಯವು ನೋಡುತ್ತೇವೆ. ಆದರೆ ತಾವು ದುಡಿದ ಸಂಸ್ಥೆಗೆ, ತಮಗೆ ಅನ್ನ ನೀಡಿದ ಸಂಸ್ಥೆಗೆ ತಮ್ಮ ಒಂದಷ್ಟು ಹಣ ನೀಡಿ ಅದರಿಂದ ಲಭಿಸುವ ಬಡ್ಡಿ ಹಣದಲ್ಲಿ ಮಕ್ಕಳ ಪ್ರತಿಭೆಗೆ ಪುರಸ್ಕರಿಸಿ ಎನ್ನುವುದು ಅಪರೂಪದಲ್ಲಿ ಅಪರೂಪದ್ದಾಗಿದೆ ಪ್ರತಿಧ್ವನಿ ಇಂದ ನಿವೃತ್ತ ಉದ್ಯೋಗಿಗಳಿಗೆ ನಮ್ಮದೊಂದು ನಮನ ವಿರಲಿ


ಈ ಸಂದರ್ಭದಲ್ಲಿ ಪಿ.ಎಲ್.ಶಾಸ್ರಿ ಗೊಣಸರಮನೆ, ವಿ.ಜಿ.ಭಟ್ಟ ಹೊಸ್ಮನೆ ಚವತ್ತಿ,ಪಿ.ಎಸ್.ಫಾಯದೆ ಮಂಚೀಕೇರಿ, ಜಿ.ಟಿ.ಹೆಗಡೆ ಹೊನ್ನಾವರ, ಸುಬ್ರಹ್ಮಣ್ಯ ಶರ್ಮ ಹಾಸಣಗಿ, ಜಿ.ಜಿ.ಹೆಗಡೆ ಗೋರ್ಸಗದ್ದೆ, ಪಿ.ಮುಕುಂದ ಹಾಸಣಗಿ,ಜಿ.ಟಿ.ಭಟ್ಟ ಬೊಮ್ನಳ್ಳಿ, ಎಚ್.ಜಿ.ಹೆಗಡೆ ಕುಮಟ, ಎಂ.ಸಿ.ಜಮಾದಾರ ಬೆಳಗಾವಿ, ಐ.ಐ.ಶೇಖ ಮಂಚೀಕೇರಿ ಮೊದಲಾದ ದಾನಿಗಳು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *