
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಯಲ್ಲಾಪುರ ನಗರ ಘಟಕ ವತಿಯಿಂದ ಪಟ್ಟಣದ ಶಾರದಾ ಗಲ್ಲಿಯಲ್ಲಿ ಬೂತ್ ಮಟ್ಟದ ಸಭೆಯು ಮಹಮದ್ ಹುಸೇನ್ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅನ್ಯ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ವಿ.ಎಸ್ ಪಾಟೀಲ್ ರವರು ಶಾಲು ಹೊಂದಿಸಿ ಅಭಿನಂದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ತಾಲೂಕಿನ ಕಾಂಗ್ರೆಸ್ ಪ್ರಮುಖರಾದ ಎನ್.ಕೆ ಭಟ್ , ವಿ.ಎಸ್ ಭಟ್ , ರವಿ ನಾಯ್ಕ್, ಎಂಡಿ ಮುಲ್ಲಾ ಪಟ್ಟಣ ಪಂಚಾಯತ್ ಸದಸ್ಯರಾದ ನರ್ಮದ ನಾಯ್ಕ್ , ಕೈಸರಅಲಿ ಪೂಜಾ ನೇತ್ರೇಕರ್ , ಸರಸ್ವತಿ ಗುನುಗ , ಅನಿಲ್ ಮರಾಠೆ ,ಅಣ್ಣಪ್ಪ ನಾಯ್ಕ್ , ಪ್ರಕಾಶ್ ವಡ್ಡರ್ ,ನಿಸಾರ್ ಪಟೇಲ್ , ವೆಂಕಟೇಶ್ ದೇವರ ಹಾಗೂ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು

ನಗರ ಘಟಕದ ಉಸ್ತುವಾರಿ ರವಿಚಂದ್ರನ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಫೈರೋಜ್ ಸಯ್ಯದ್ ಅವರು ವಂದಿಸಿದರು. ಮಹಮ್ಮದ್ ಹುಸೇನ್ ,ರವಿ ಕಲಸನ್ನವರ್, ಬಶೀರ್ ಶೇಕ್ , ರಾಧ ಮಹಾಲೆ, ನಿಸಾರ್ ಅಹಮದ್ ,ಮಂಗಲ ಭಟ್ ,ಸುಧಾ ಚೌಗುಲೆ ,ನೀಲ ವಡ್ಡರ್ ಶಕುಂತಲಾ ಚೌಹಾನ್ ,ಪತಿಮಾ ಸಂಶುದ್ದೀನ್ ಶೇಕ್ ,ಸೈಯದ್ ಫ್ರಾನ್ಸಿಸ್ ,ಲಕ್ಷ್ಮಣ್ ಗೌಡ ಮುಂತಾದವರು ಪಕ್ಷಕ್ಕೆ ಸೇರಿದವರಾಗಿದ್ದಾರೆ.
Prathidvani Yellapura