

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಹೊಸತನ್ನು ಕಟ್ಟುವುದು ಅವಿಷ್ಕರಿಸುವುದು ವಿದ್ಯಾರ್ಥಿ ದಿನಗಳ ಕಾಯಕವಾಗಿದೆ ಎಲ್ಲವು ಸಾದ್ಯವಾಗುವ ಸಂದರ್ಭ ವಿದ್ಯಾರ್ಥಿ ದಿಸೆಯಾಗಿದೆ. ದೇವರು ಕೊಟ್ಟ ಕೊಡುಗೆಗಳನ್ನು ಕಾಲಕಾಲಕ್ಕೆ ಅರಿತು ಮುನ್ನಡೆದಾಗ ಜೀವನ ಯಶಸ್ವಿ ಹಾಗು ಕ್ರಿಯಾಶೀಲ ದಾರಿಯಲ್ಲಿ ನಡೆಯಲು ಸಾದ್ಯವಿದೆ. ಸ್ಕರಾವಂತ ಜೀವನ ಕಟ್ಟಿಕೊಡಬಹುದಾಗಿದೆ. ಅಂಕಗಳಿಕೆಯೊಂದೆ ವಿದ್ಯಾರ್ಥಿ ಜೀವನದ ಗುರಿಯಾಗಬಾರದು ಜಗತ್ತಿನ ಎಲ್ಲ ಒಳಿತುಗಳನ್ನು ಅನ್ವೇಷಿಸಬೇಕಿದೆ ಎಂಬುದೆ ಮಹತ್ವದ ಅಭಿಲಾಷೆಯಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಬಹುಮುಖ ಪ್ರತಿಭೆಯ ಶಿಕ್ಷಕ ನಾರಾಯಣ ಭಾಗ್ವತ್ ಹೇಳಿದರು.

ಅವರು ಯಲ್ಲಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೈ.ಟಿ.ಎಸ್.ಎಸ್ ನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಸತ್ತು, ಸಾಂಸ್ಕೃತಿಕ, ಕ್ರೀಡಾ ಹಾಗು ಎನ್.ಎಸ್.ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.

ಇರುವಂತಹ ಸವಲತ್ತುಗಳ ಮದ್ಯೆ ಅತ್ಯಾಧುನಿಕ ವ್ಯವಸ್ಥೆ ಇರದ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ನನ್ನಂತಹ ಸಹಸ್ರಾರು ವಿಧ್ಯಾರ್ಥಿಗಳಿಗೆ ಮೀಸಲಿರಿಸಿ ವಿದ್ಯೆ ನೀಡಿ ಜಗತ್ತಿಗೆ ನೀಡಿದ ಕೀರ್ತಿ ಯಲ್ಲಾಪುರ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಎಲ್ಲಾ ನನ್ನ ಗುರುಗಳಿಗೆ ವಂದಿಸುತ್ತೇನೆ. ಜಗತ್ತಿನ ನಾಲ್ಕು ಪ್ರಖ್ಯಾತ ರೋಬೋಟಿಕ್ ಸರ್ಜರಿ ಸರ್ಜನ್ ಗಳಲ್ಲಿ ನಾನು ಒಬ್ಬನಾಗಿರುವುದಕ್ಕೆ ನನ್ನ ಯಲ್ಲಾಪುರ ಊರು ನನ್ನ ಶಾಲೆ ವೈಟಿಎಸ್ಎಸ್ ಕೊಡುಗೆ ಅವಿಸ್ಮರಣೀಯ. ಯಾವುದೆ ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಯಶಸ್ಸಿನ ಉತ್ತುಂಗದಲ್ಲಿ ನಮ್ಮ ಕಳೆದದಿನಗಳ ಮರೆಯದೆ ಗೌರವಿಸಿ ನೆನಪಿನಲ್ಲಿರಿಸಿಕೊಳ್ಳಬೇಕಿದೆ.

ಇಂದು ಬ್ರಿಟನ್ ದೇಶದ ಪ್ರಿನ್ಸ್ ಕುಟುಂಬ ನನ್ನ ರೊಬೋಟಿಕ್ ಸರ್ಜರಿ ವೀಕ್ಷಿಸಲು ಅವಕಾಶ ಕೋರಿರುವುದು ನನಗೆ ಮಾತ್ರವಲ್ಲ ನನ್ನ ದೇಶ ಭಾರತದ ಹೆಮ್ಮೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿಗೆ ಸಂದ ಗೌರವವಾಗಿದೆ.
ಇದು ನನ್ನ ಸೌಭಾಗ್ಯ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು ವೈಟಿಎಸ್ಎಸ್ ಹಳೆಯ ವಿದ್ಯಾರ್ಥಿಯಾಗಿ ಸಂಸ್ಥೆಯ ಶ್ರೇಷ್ಟತೆಯನ್ನು ಜಗತ್ತಿಗೆ ಪರಿಚಯಿಸಿದ ಡಾ,ಇರ್ಷಾದ್ ಎ ಶೇಖ್ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೇದಿಕೆಯಲ್ಲಿ ಪ್ರಸಕ್ತ ಸಾಲಿನ ವಿಧ್ಯಾರ್ಥಿಗಳ ಸಂಸತ್ ಪರಿಚಯಿಸಲಾಯಿತು. ಕ್ರೀಡೆಯಲ್ಲಿ ಉತ್ತಮ ಸಾದನೆಗೈದ ಕನ್ನಡ ಮಾದ್ಯಮ ಪ್ರೌಡಶಾಲೆವಿಧ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಲಾಯಿತು.

ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಾಸ್ತು ಪ್ರಭಾವವೇನೊ ವಿವಿಧ ಕ್ಷೇತ್ರಗಳ ಸಾಧಕರಲ್ಲಿ ಒಬ್ಬರಾದರು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ವಿಧ್ಯಾರ್ಥಿಗಳ ಹೆಸರು ಕೇಳಿದೊಡನೆ ಪುಳಕಿತವಾಗಿಬಿಡುತ್ತದೆ ಅನೇಕ ಮಹನಿಯರು ಕಟ್ಟಿಬೆಳೆಸಿದ ಸಂಸ್ಥೆಯ ಅಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಇದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿ ಕಾರ್ಯಕ್ರಮಗಳು ವಿಶೇಷವಸಗಿ ಜರುಗಲೆಂದು ಆಶಿಸುತ್ತೇನೆ ಎಂದು ಸಂಸ್ಥೆ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷರು ಆದ ರವಿ ಶಾನಬಾಗ್ ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಪೈ , ನಾಗರಾಜ್ ಮದ್ಗುಣಿ , ಇಂಗ್ಲಿಷ್ ಮಾಧ್ಯಮದ ಹೆಡ್ ಮಿಸ್ ಶೈಲಜ ಮಾಪ್ಸೇಕರ್ ಉಪಸ್ಥಿತರಿದ್ದರು.

ವಿಧ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಾಕ್ರಮ

ಸಂಸ್ಥೆಯ ಪ್ರಾಂಶುಪಾಲ ಆನಂದ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು.

ಶಿಕ್ಷಕ ವಿನೋದ್ ಭಟ್ ನಿರೂಪಿಸಿದರು.

ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಎನ್.ಎಸ್.ಭಟ್ ವಂದಿಸಿದರು.







Prathidvani Yellapura