
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಹಾಗು ಕಾಂಗ್ರೆಸ್ ಸೇವಾದಳದ ವತಿಯಿಂದ ಬಿಜೆಪಿ ಯ ದ್ವೇಷದ ರಾಜಕಾರಣದ ವಿರುದ್ದ ಮೌನ ಪ್ರತಿಭಟನೆ ಮಾಡಲಾಯಿತು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಹೊರಟ ಮೌನ ಪ್ರತಿಭಟನಾ ಮೆರವಣಿಗೆ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದು ತಾಲೂಕು ಆಡಳಿತ ಸೌಧದ ಮುಂಬಾಗ ಕೆಲಕಾಲ ಮಹಾತ್ಮ ಗಾಂಧಿ ಭವಚಿತ್ರ ಹಿಡಿದು ಮೌನದಿಂದ ಕುಳಿತು ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ರಾಷ್ಟ್ರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ದ ಕ್ಷುಲ್ಲಕ ಕಾರಣವನ್ನೆ ಮುಂದಿಟ್ಟುಕೊಂಡು ಹಗೆಸಾಧಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಕ್ಷಮ್ಯ ಅಪರಾಧವಾಗಿದೆ. ಕಾನೂನು ಸಮರದಲ್ಲಿ ಜಾಮೀನು ದೊರೆಯದಂತೆ ಷಡ್ಯಂತರ ಮಾಡುತ್ತಿರುವ ಕೇಂದ್ರ ಸರ್ಕಾರದ ಷಡ್ಯಂತರ ದ್ವೇಷ ರಾಜಕಾರಣದ ಪರಮಾವದಿಯಾಗಿದೆ. ರಾಷ್ಟ್ರದ ಜನತೆ ಎಲ್ಲವನ್ನು ನೋಡುತ್ತಿದ್ದು ಸರಿಯಾದ ಸಮಯದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ.

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ನರ್ಮದಾ ನಾಯ್ಕ್, ಕೈಸರ್ ಅಲಿ , ಸೇವಾದಳದ ಜಿಲ್ಲಾ ಪ್ರಮುಖ ಪ್ರಶಾಂತ್ ಸಭಾಹಿತ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್ ಭಟ್ಟ, ಎನ್.ಕೆ ಭಟ್ಟ ಮೆಣಸುಪಾಲ, ನರಸಿಂಹ ನಾಯ್ಕ್, ಪೂಜಾ ನೇತ್ರೇಕರ್, ರಾಘು ಭಟ್ಟ ಅನಿಲ್ ನಾಯ್ಕ್, ಎಂ.ಡಿ.ಮುಲ್ಲಾ, ಎಂ.ಕೆ.ಭಟ್ಟ ಯಡಳ್ಳಿ, ಅನಿಲ್ ನಾಯ್ಕ್ ಇಡಗುಂದಿ, ಅಣ್ಣಪ್ಪ ಮರಾಠಿ, ರವಿಚಂದ್ರ ನಾಯ್ಕ, ಗಣೇಶ್ ಪಾಟಣಕರ, ಮುಷರತ್,ಸರಸ್ವತಿಗುನಗ ಹಾಗು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Prathidvani Yellapura