Breaking News

ಕೇರಳದ ಯಡನೀರು ಮಠದ ಪೂಜ್ಯ ಶ್ರೀಮದ್ ಸಚ್ಚಿದಾನಂದ ಸ್ವಾಮೀಜಿ ಯಲ್ಲಾಪುರ ಶಕ್ತಿ ಗಣಪತಿಗೆ ಬೇಟಿ

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ, ಶಿರಸಿ, ಕುಮಟಾ, ಅಂಕೋಲಾ ಪ್ರದೇಶಗಳ ಜನರು ಸಾತ್ವಿಕರೂ, ಸರಳರೂ ಆಗಿದ್ದಾರೆ. ಆದ್ದರಿಂದಲೇ ದೂರದ ನಮ್ಮ ಪೂಜ್ಯ ಕೇಶವಾನಂದ ಭಾರತಿ ಸ್ವಾಮಿಗಳಿಗೆ ಇಲ್ಲಿಯ ಜನರ ಸಂಬಂಧ ಬೆಳೆಯಲು ಕಾರಣವಾಗಿದೆ. ಇಲ್ಲಿಯ ಜನರು ಧಾರ್ಮಿಕರೂ, ಸಂಸ್ಕಾರವಂತರೂ ಆಗಿರುವುದರಿಂದ ನಮ್ಮ ಪೂಜ್ಯರು ಇಲ್ಲಿ ಚಾತುರ್ಮಾಸ್ಯ ವ್ರತ ಆಚರಣೆ ಮಾಡಿದ್ದಾರೆ ಎಂದು ಜಗದ್ಗುರು ಶಂಕರಾಚಾರ್ಯ ಯಡನೀರು ಮಠದ ಪೂಜ್ಯ ಶ್ರೀಮದ್ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.


ಅವರು ಪಟ್ಟಣದ ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ತಮಗಿತ್ತ ಪಾದಪೂಜೆ ಸ್ವೀಕರಿಸಿ, ಆಶೀರ್ವಚನ ನೀಡುತ್ತಿದ್ದರು.
ಉಪಸ್ಥಿತರಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕೇಶವಾನಂದ ಭಾರತಿ ಸ್ವಾಮಿಗಳು ೨ ತಿಂಗಳ ಕಾಲ ಚಾತುರ್ಮಾಸ್ಯ ನಡೆಸಿದ್ದು, ಇಂದಿಗೂ ನಮಗೆ ಅವಿಸ್ಮರಣಿಯ ಸಂಗತಿ. ನಿಮ್ಮ ಮಠಕ್ಕೂ ನಮ್ಮ ಯಲ್ಲಾಪುರದ ಭಕ್ತರಿಗೂ ಉತ್ತಮ ಸಂಬಧ ಇಂದಿಗೂ ಇದೆ. ಸದಾ ತಮ್ಮ ಆಶಿರ್ವಾದ ನಮಗೆ ದೊರೆಯುವಂತಾಗಲಿ ಎಂದರು.


ಪಂಚಾಯತ್ ರಾಜ್ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ನಮ್ಮ ಸಂಕಲ್ಪದಲ್ಲಿ ಹಿಂದಿನ ಪೂಜ್ಯರ ಚಾತುರ್ಮಾಸ್ಯ ವ್ರತ ಮತ್ತು ಆ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಉತ್ಸವಗಳು ಈ ಪ್ರದೇಶದಲ್ಲಿ ಒಂದು ಸಂಚಲನ ಮೂಡಿಸಿತ್ತು. ಅವರ ಮಾರ್ಗದರ್ಶನದಲ್ಲೇ ಬೆಳೆದ ತಾವು ಇನ್ನೂ ಹೆಚ್ಚಿನ ಮಠದ ಅಭಿವೃದ್ಧಿಯನ್ನು ಮಾಡಿರುವುದನ್ನು ಕಂಡಿದ್ದೇವೆ. ತಮ್ಮ ಪ್ರೀತಿ, ಸ್ಪಂದನೆ ಅನನ್ಯವಾದುದು. ಮಠದ ಜೊತೆ ನಮ್ಮ ಸಂಬAಧ ಸದಾ ಇರುತ್ತದೆ ಎಂದರು.


ಪೂಜ್ಯ ಸಚ್ಚಿದಾನಂದ ಭಾರತಿ ಸ್ವಾಮಿಗಳ ಪಾದಪೂಜೆಯನ್ನು ಶ್ರೀಮತಿ ಮುಕ್ತಾ ಮತ್ತು ಶಂಕರ ಭಟ್ಟ ತಾರೀಮಕ್ಕಿ ನೆರವೇರಿಸಿದರು. ಮಾತೆಯರು ಪೂಜ್ಯರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಪ್ರಸಾದ ಹೆಗಡೆ ವಂದಿಸಿದರು.
ಈ ಸಂದರ್ಭದಲ್ಲಿ ಶಕ್ತಿ ಗಣಪತಿ ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ್, ಕಾರ್ಯದರ್ಶಿ ಸುಬ್ರಾಯ ಭಟ್ಟ ಹಂಡ್ರಮನೆ, ಮನೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಬ್ರಾಹ್ಮಣ ಮಹಾಸಭೆಯ ನಿರ್ದೆಶಕ ಕೆ.ಎಸ್.ಭಟ್ಟ, ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ, ಎಂ.ಎನ್.ಹೆಗಡೆ ಹಳವಳ್ಳಿ, ಸಿ.ಎಸ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *