Breaking News

ನಾರಿಗೆ ಉಚಿತ ಸಾರಿಗೆ ; ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವನಿತೆಯರು

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ರಾಜ್ಯಾದ್ಯಂತ ಜೂ.11 ರಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಘೋಷಣೆಯಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಎಂಬ “ಶಕ್ತಿ” ಹೆಸರಿನ ಯೋಜನೆ ವಿದ್ಯುಕ್ತವಾಗಿ ಚಾಲನೆ ಪಡೆಯಿತು. ಅದರಂತೆ ಉಚಿತ ಪ್ರಯಾಣ ಪ್ರಾರಂಭಿಸಿರುವ ಮಹಿಳೆಯರು ಸಂತಸದಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಸೋಮವಾರ ಯಲ್ಲಾಪುರ ಬಸ್ ನಿಲ್ದಾಣದಲ್ಲೂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸರ್ಕಾರದ ಶಕ್ತಿ ಯೋಜನೆಗೆ ಬಹು ಪರಾಕ್ ಹೇಳಿದ್ದಾರೆ.
ಒಂದೆಡೆ ಆರ್ಥಿಕ ತಜ್ಞರು, ಉಚಿತ ಕೊಡುಗೆಗಳನ್ನು ವಿರೋಧಿಸುವವರು ಇಂತಹ ನಿರ್ಧಾರವನ್ನು ದೂಷಿಸುತ್ತಿರುವಂತೆಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ದಿರುವ ಯೋಜನೆ ಅತ್ಯಂತ ಜನೋಪಯೋಗಿಯಾಗಿದೆ ಮತ್ತು ವಿದ್ಯಾರ್ಥಿನಿಯರಿಗೆ ಅನುಕೂಲಕರವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


ಕಾಕತಾಳೀಯ ಎಂಬಂತೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಯಲ್ಲಾಪುರ ಬಸ್ ಡಿಪೋದಲ್ಲಿ ಒಟ್ಟು 70 ಬಸ್ ಗಳಿದ್ದು ಅವುಗಳಲ್ಲಿ 66 ಬಸ್ ಗಳು ಸಂಚಾರದಲ್ಲಿವೆ ಅದರಲ್ಲಿ 6 ಬಸ್ ಗಳು ಅಂತರಾಜ್ಯ ಸಾರಿಗೆ ಮತ್ತು 4 ರಾಜಹಂಸ ಬಿಟ್ಟು ಉಳಿದ 56 ಬಸ್ ಗಳಲ್ಲಿ ಮಹಿಳೆಯರು “ಶಕ್ತಿ” ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಮಹಿಳೆಯರು ತಮ್ಮ ಆಧಾರ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿ ತೋರಿಸಿ ಉಚಿತ ಬಸ್ ಪ್ರಯಾಣ ಸೌಲಭ್ಯ ಪಡೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಯೋಜನೆಯು ರವಿವಾರ 1 ಗಂಟೆಗೆ ಪ್ರಾರಂಭವಾಗಿದ್ದು ಸೋಮವಾರ ರಾತ್ರಿ 10-30ರ ವರೆಗೆ ಒಟ್ಟು 8015 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಬೆಳೆಸಿದ್ದಾರೆಂದು ಯಲ್ಲಾಪುರ ಸಾರಿಗೆ ಅಧಿಕಾರಿಗಳಿಂದ ತಿಳಿದು ಬಂದಿದೆ.


ಉಚಿತ ಪ್ರಯಾಣ ಎಂದು ಸರ್ಕಾರ ಘೋಷಣೆಯಾಗಿ ಚಾಲನೆ ನೀಡಿದ ನಂತರ ಆರ್ಥಿಕ ವಹಿವಾಟಿನಲ್ಲಿ ಬಾರಿ ಚೇತರಿಕೆ ಕಂಡಿದೆ. ಕಾರಣ ಮಹಿಳಾ ಪ್ರಯಾಣಿಕರಿಗೆ ಶೂನ್ಯ ಬೆಲೆಯ ಟಿಕೆಟ್ ಹರಿದಂತೆಲ್ಲಾ ಸರ್ಕಾರ ನಿಗಮಕ್ಕೆ ಹಣ ಭರಣ ಮಾಡುವುದರಿಂದ ನಿಗಮದ ಆರ್ಥಿಕ ಉತ್ಪನ್ನ ಹೆಚ್ಚಲಿದೆ ಎನ್ನುತ್ತಾರೆ ಡಿಪೊ ಅಧಿಕಾರಿಗಳು.


ಒಟ್ಟಿನಲ್ಲಿ ಮಹಿಳೆಯರಿಗೆ ಸಾರಿಗೆ ಉಚಿತವಾಗಿಸಿ ಸರ್ಕಾರ ಆರ್ಥಿಕ ಹೊರೆ ಹೆಚ್ಚಿಸಿಕೊಂಡಿದೆ ಎನ್ನುವ ಸಂದರ್ಭದಲ್ಲಿ ಇದರಿಂದ ಸಾರಿಗೆ ನಿಗಮಗಳ ಆರ್ಥಿಕ ಚೇತರಿಕೆ ಕಾಣುತ್ತಿದೆ ಎಂಬುದು ಅಷ್ಡೇ ಸತ್ಯವಾಗಿದೆ. ಯೋಜನೆ ದುರುಪಯೋಗ ಆಗದೆ ಸದುಪಯೋಗವಾದರೆ ಉಚಿತಕ್ಕೊಂದು ಅರ್ಥ ಬರಲಿದೆ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸಾರಿಗೆ ಉಚಿತವಾಗಿಸಿದ್ದು ಅತ್ಯಂತ ಸಂತಸವಾಗಿದೆ. ಬಡವರು ಮತ್ತು ಮದ್ಯಮವರ್ಗದ ಕುಟು
ಬದಲ್ಲಿನ ಮಹಿಳೆಯರಿಗೆ ಅನುಕೂಲ ಆಗಲಿದೆ ವಿಶೇಷವಾಗಿ ವಿದ್ಯಾರ್ಥಿನಿಯರು ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದ ಹಣ ಪುಸ್ತಕ, ಶುಲ್ಕ ಭರಿಸಲು ಸಹಾಯವಾಗಲಿದೆ ಇದರಿಂದ ತಂದೆತಾಯಿಗಳ ಜೀವನ ನಿರ್ವಹಣೆ ಹೋರಾಟಕ್ಕೆ ಸಹಕಾರಿಯಾಗಲಿದೆ. ಶಾಂತಮ್ಮ ಕುಲಕರ್ಣಿ, ಪ್ರಯಾಣಿಕರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *