ವಾಣಿಜ್ಯ ಉದ್ದೇಶದ ಸುದ್ದಿ



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಕೆ.ಬಿ.ರಸ್ತೆಯಲ್ಲಿ ಸಂಕಲ್ಪ ಹೊಟೆಲ್ ಮುಂಭಾಗದ ಎಲ್.ಎಸ್.ಎಂ.ಪಿ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರ ಗ್ರಾಹಕ ಸ್ನೇಹಿ ಸಂಸ್ಥೆ ಎಂದೇ ಹೆಸರಾದ ವಿಶಾಲ್ ವಾಳಂಬಿ ಒಡೆತನದ ಶ್ರೀ ಗ್ರಾಮದೇವಿ ಕನ್ಸ್ಡ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನ ನೂತನ ಕಚೇರಿಯನ್ನು ಯಲ್ಲಾಪುರ-ಮುಂಡಗೋಡು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.

2016 ರಲ್ಲಿ ಪ್ರಾರಂಭಿಸಿದ ಸಂಸ್ಥೆ ಸಂತೃಪ್ತ ಗ್ರಾಹಕರ ಆಶಿರ್ವಾದದಿಂದ ವಿಶಾಲ್ ವಾಳಂಬಿಯ ಪರಿಶ್ರಮದ ಫಲವಾಗಿ ಯಲ್ಲಾಪುರ ತಾಲೂಕಿನ ಗೃಹ ನಿರ್ಮಾಣ ವಲಯದಲ್ಲಿ ಉತ್ತಮ ಹೆಸರು ಗಳಿಸಿ ಗ್ರಾಹಕ ಸ್ನೇಹಿ ನಿರ್ಮಾಣ ಸಂಸ್ಥೆ ಎಂಬ ಹೆಸರು ಪಡೆದು ಜನಪ್ರಿಯತೆ ಗಳಿಸಿದೆ.


ವಿಶಾಲ್ ವಾಳಂಬಿ ಒಡೆತನದ ಸಂಸ್ಥೆ ಈಗಾಗಲೆ ಹಲವು ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ಉತ್ತಮ ಯೋಜನೆ,ಅಂದಾಜು ವೆಚ್ಚ, ಗುಣಮಟ್ಟದ ಮೌಲ್ಯ ಗಳನ್ನು ಅಳವಡಿಸಿಕೊಂಡು ಜನಾಕರ್ಷಣೆಗೆ ಕಾರಣವಾಗಿದೆ.

ಇದೀಗ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ನೂತನ ಕಚೇರಿ ಉದ್ಘಾಟಿಸಿ ಶುಭಹಾರೈಸಿದರು.ಶಾಸಕರಿಗೆ ವಿಶಾಲ್ ವಾಳಂಬಿ ಕುಟುಂಬದ ವತಿಯಿಂದ ಗೌರವ ಸಮರ್ಪಿಸಿದರು.


ಸಾಮಾಜಿಕ ಕಾರ್ಯಕರ್ತ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಜಿಲ್ಲಾ ಪ್ರಮುಖ ಎಂ.ಜಿ.ಭಟ್, ಪಟ್ಟಣ ಪಂಚಾಯತ ಉಪಾಧ್ಯಕ್ಷ ಅಮಿತ್ ಅಂಗಡಿ, ನಿರ್ಮಾಣ ಕ್ಷೇತ್ರದ ವಿವಿಧ ವಲಯದ ಪ್ರಮುಖರು ಇನ್ನಿತರ ಹಿರಿಯರು ಹಿತೈಷಿ ಬಂಧುಗಳು,ಸ್ನೇಹಿತರು ಉಪಸ್ಥಿತರಿದ್ದು ಶುಭಕೋರಿದರು.
Prathidvani Yellapura