
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಆಡಳಿತಾಧಿಕಾರಿ ವಜಾಗೊಳಿಸುವಂತೆ ಶುಕ್ರವಾರ ಮುಂದುವರೆದ ಭಾಗವಾಗಿ ಟಿ.ಎಂ.ಎಸ್ ಮುಂಭಾಗ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಸಂಜೆ ವೇಳೆಗೆ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು ಪೊಲೀಸರ ಸಹಕಾರದಲ್ಲಿ ಆಂಬುಲೆನ್ಸ ಕರೆಸಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು ಸತ್ಯಾಗ್ರಹ ಯಾವುದೆ ಕಾರಣಕ್ಕು ನಿಲ್ಲಿಸುವುದಿಲ್ಲ ತಕ್ಷಣವೆ ಆಡಳಿತಾಧಿಕಾರಿ ವಜಾಗೊಳಿಸುವಂತೆ ಹೋರಾಟ ಸಮಿತಿ ಸದಸ್ಯರ ಆಗ್ರಹವಾಗಿದೆ.
ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸುತ್ತಿದ್ದು ಹೆಚ್ಚಿನ ವಿವರ ಇನ್ನಷ್ಟೆ ಲಭಿಸಬೇಕಿದೆ.
Prathidvani Yellapura