ಕೇಬಲ್ ನಾಗೇಶ್ ಲೇಖನಿಯಲ್ಲಿ🖋

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆಡಳಿತಸೌಧ ಲೋಕಾರ್ಪಣೆಗೊಂಡು 3 ವರ್ಷಗಳೆ ಕಳೆಯುತ್ತಾ ಬಂದರು ಇನ್ನೂ ಲಿಫ್ಟ್ ಅಳವಡಿಸದಿರುವುದು ಶೋಚನೀಯ.

ಶಾಸಕ ಶಿವರಾಮ ಹೆಬ್ಬಾರ್ ವಿಶೇಷ ಪ್ರಯತ್ನದ ಫಲವಾಗಿ ಪಟ್ಟಣದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಕಟ್ಟಡಗಳು ಸ್ವಂತ ಜಾಗ ಹೊಂದಿ ಹೈಟೆಕ್ ಸ್ಪರ್ಶ ದಲ್ಲಿ ನಳನಳಿಸುತ್ತಿವೆ ಅವುಗಳಲ್ಲಿ ಬಹು ಪ್ರಮುಖವಾಗಿ ಕೆ.ಬಿ ರಸ್ತೆಯಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಯಲ್ಲಾಪುರದ ಆಡಳಿತ ಸೌಧ ಕೂಡ ಒಂದಾಗಿದೆ.

ಕೋಟಿಗಟ್ಟಲೆ ಹಣ ತಂದು ಸುಂದರ ಆಡಳಿತ ಸೌಧ ಕಟ್ಟಿಸಿದ ಕೀರ್ತಿ ಅಂದಿನ ಕಾರ್ಮಿಕ ಮಂತ್ರಿಗಳು ಹಾಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸಲ್ಲುತ್ತದೆ. ಇಷ್ಟೆಲ್ಲಾ ಪ್ರಯತ್ನದ ಫಲವಾಗಿ ಬೃಹತ್ತಾಗಿ ತಲೆ ಎತ್ತಿನಿಂತ ಆಡಳಿತ ಸೌಧದಲ್ಲಿ ಸಕಲ ವ್ಯವಸ್ಥೆ ಅಳವಡಿಸಿದ್ದು ಅದರಲ್ಲಿ ವಿಶೇಷವಾಗಿ

ಹಿರಿಯರು,ವಯೋವೃದ್ದರು,ಗರ್ಭಿಣಿಯರು,ವಿಶೇಷ ಚೇತನರಿಗೆ ಅನುಕೂಲವಾಗಲೆಂದು ಲಿಫ್ಟ್ ಅಳವಡಿಕೆಗು ವ್ಯವಸ್ಥೆ ಮಾಡಿದ್ದು ಮೂರು ವರ್ಷ ಕಳೆದರು ಇನ್ನೂ ಲಿಫ್ಟ್ ಸಾರ್ವಜನಿಕ ಉಪಯೋಗಕ್ಕೆ ಬಾರದಿರುವುದು ದುರಂತವಾಗಿದೆ.

ಆಡಳಿತ ಸೌಧದಲ್ಲಿ ಕೆಲವು ವಿಭಾಗಗಳು ಮೊದಲನೆ ಅಂತಸ್ತು ಮತ್ತು ಎರಡನೇ ಅಂತಸ್ತುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕ ಕೆಲಸಗಳಿಗೆ ಅಷ್ಟೊಂದು ಮೆಟ್ಟಿಲು ಹತ್ತಿ ಇಳಿಯುವುದು ಕಷ್ಟವಾಗಲಿದೆ. ಕೇವಲ ಸಾರ್ವಜನಿಕರು ಮಾತ್ರವಲ್ಲದೆ ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳು ಸಹ ಕಷ್ಟ ಪಡುವಂತಾಗಿದೆ.
ಇನ್ನಾದರು ಸಂಬಂಧಿಸಿದ ಗುತ್ತಿಗೆದಾರರಿಗೆ ಶೀಘ್ರವಾಗಿ ಲಿಫ್ಟ್ ಗೆ ಸಂಬಂಧಿಸಿದ ಕೆಲಸ ಪೂರ್ಣಗೊಳಿಸಿ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳು ಒತ್ತಡ ಹೇರಬೇಕಿದೆ. ಸಾರ್ವಜನಿಕರ ತೆರಿಗೆ ಹಣ ಸಾರ್ವಜನಿಕ ಉಪಯೋಗಕ್ಕೆ ಬಾರದಿದ್ದಮೇಲೆ ಸರ್ಕಾರಕ್ಕೆ ತೆರುಗೆ ಭರಣಮಾಡಿ ಪ್ರಯೋಜನವಾದರು ಏನು ಎಂಬುದು ಹಲವು ಸಾರ್ವಜನಿಕರ ಅಸಮದಾನದ ಮಾತಾಗಿದೆ. ದುಡ್ಡು ಕೊಟ್ಟು ದುಖಃ ಪಡೆಯುವುದೆಂದರೆ ಇದೇ ಇರಬೇಕು..!!!
ಆಡಳಿತ ಸೌಧದಲ್ಲಿ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ತಾಂತ್ರಿಕ ಕಾರಣಗಳಿಂದ ಲಿಫ್ಟ್ ಕೆಲಸ ಬಾಕಿ ಉಳಿದಿದೆ. ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರವಾಗಿ ಸಮಸ್ಯೆ ಪರಿಹರಿಸಲಾಗುವುದು.
ಚಂದ್ರಶೇಖರ ಹೊಸಮನಿ
ತಾಲೂಕು ಧಂಡಾಧಿಕಾರಿಗಳು, ಯಲ್ಲಾಪುರ
ಲಿಫ್ಟ್ ಕಾರ್ಯ ಪೂರ್ಣಗೊಳಿಸಲು ಹಣದ ಕೊರತೆ ಎದುರಾದ ಕಾರಣ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಬರೆಯಲಾಗಿದೆ. ಅನುದಾನ ಬಿಡುಗಡೆ ಆಗುತ್ತಲೆ ಅತಿ ಶೀಘ್ರವಾಗಿ ಸಾರ್ವಜನಿಕರ ಉಪಯೋಗಕ್ಕೆ ಲಿಫ್ಟ್ ಕಾರ್ಯಾರಂಭಿಸಲಿದೆ.
ಸಂಜೀವ್, ಎ.ಇ.ಇ
ಲೋಕೋಪಯೋಗಿ ಇಲಾಖೆ
ಯಲ್ಲಾಪುರ.




Prathidvani Yellapura