Breaking News

ಟಿ.ಎಂ.ಎಸ್ ಉಳಿಸಿ ಹೋರಾಟದ ಮುಂದಿನ ಹಂತವಾಗಿ ಉಪವಾಸ ಸತ್ಯಾಗ್ರಹ.


ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಬಾರಿ ಸುದ್ದಿಯಲಿದ್ದು ಆಡಳಿತಾಧಿಕಾರಿ ವಜಾಗೊಳಿಸುವಂತೆ ಗುರುವಾರ ರಸ್ತೆ ತಡೆ ನಡೆಸಲಾಗಿತ್ತು. ಶುಕ್ರವಾರ ಮುಂದುವರೆದ ಭಾಗವಾಗಿ ಟಿ.ಎಂ.ಎಸ್ ಮುಂಭಾಗ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.


ರೈತರ ಜೀವನಾಡಿಯಂತಿರುವ ಟಿ.ಎಂ.ಎಸ್ ಸಂಸ್ಥೆಯ ಕತ್ತು ಹಿಚುಕುವ ಕಾರ್ಯ ಹಿಬಂದಿಯ ಬಾಗಿಲಿನಿಂದ ಆಡಳಿತಾಧಿಕಾರಿ ಮೂಲಕ ಮಾಡುತ್ತಿದ್ದು ಇಂತಹ ಹೇಯ ಕೃತ್ಯ ಎಸಗದಂತೆ ತಡೆಯುವ ಸಲುವಾಗಿ ಎಂತಹ ಹೋರಾಟಕ್ಕು ನಾವು ಸಿದ್ದರಿದ್ದು ಆಡಳಿತಾಧಿಕಾರಿ ವಜಾ ಮಾಡದ ಹೊರತು ಸತ್ಯಾಗ್ರಹ ಕೈ ಬಿಡುವ ಪ್ರಶ್ನೆಯೆ ಇಲ್ಲ ಎಂಬುದು ಸತ್ಯಾಗ್ರಹಿಗಳ ಒಕ್ಕೊರಲ ಮಾತಾಗಿದೆ.
ಹಿರಿಯ ಸಹಕಾರಿ ಪ್ರಮೋದ್ ಹೆಗಡೆ, ವಿಶ್ವದರ್ಶನ ಸಂಸ್ಥೆ ಪ್ರಮುಖ ಹರಿಪ್ರಕಾಶ್ ಕೋಣೆಮನೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘು ಭಟ್ಟ,  ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಡಿ ಶಂಕರ ಭಟ್, ಸಿ.ಜಿ.ಹೆಗಡೆ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಬೆಳ್ಳಿ, ಕೆ.ಟಿ.ಹೆಗಡೆ ಇನ್ನಿತರ ಪ್ರಮುಖರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲಭಾರತ ಹವ್ಯಕ ಸಂಘ, ಕಿಸಾನ್ ಸಂಘ, ಅಡಿಕೆ ವ್ಯಾಪಾರಸ್ಥರ ಸಂಘ, ಬಿಜೆಪಿ ಜಿಲ್ಲಾ ಘಟಕ ಇತರೆ ರೈತ ಪರ ಸಂಘಟನೆಗಳು ಸತ್ಯಾಗ್ರಹ ಕ್ಕೆ ಬೆಂಬಲ ಸೂಚಿಸಿವೆ ಎಂದು ಹೊರಾಟ ಸಮಿತಿ ಪ್ರಮುಖ ಪ್ರಸಾದ್ ಹೆಗಡೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಗೆ ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಹಿಂದು ಧರ್ಮದ ಜಯಘೋಷ- ವಿಜ್ರಂಭಣೆಯಿಂದ ಜರುಗಿದ ಯುಗಾದಿ ಉತ್ಸವದ ಶೋಭಾಯಾತ್ರೆ.

ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ …

Leave a Reply

Your email address will not be published. Required fields are marked *