
ಪ್ರತಿಧ್ವನಿ ಯಲ್ಲಾಪುರ – ಟಿ.ಎಂ.ಎಸ್ ಉಳಿಸಿ ಎಂಬ ಪ್ರಹಸನ ಕೆಲವೆ ಮಂದಿಗೆ ಸೀಮಿತವಾಗಿದೆ. ಸಹಕಾರಿ ರಂಗದ ಕಿಂಚಿತ್ತು ಅರಿವಿರದ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಮಾತು ಬಾಲಿಷವಾಗಿದೆ.
ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಸಹಕಾರಿಗಳಲ್ಲಿ ಓರ್ವರಾದ ಶಾಸಕ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಪ್ರಸಾದ್ ಹೆಗಡೆಗೆ ಇರುವುದಿಲ್ಲ.
ಟಿ.ಎಂ.ಎಸ್ ಸಂಸ್ಥೆಯ ಇತಿಹಾಸ ಗೊತ್ತಿರದ ನೀವಿನ್ನು ಹಸುಳೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್ ಗುರುವಾರ ಯಲ್ಲಾಪುರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಟಿ.ಎಂ.ಎಸ್ ಉಳಿಸಿ ರಸ್ತೆ ತಡೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಾಯಕರುಗಳ ಮಾತಿಗೆ ತೀವ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾರೋ ಹಿರಿಯರು ಕಟ್ಟಿ ಬೆಳೆಸಿ ಉಳಿಸಿದ ಸಂಸ್ಥೆಯಲ್ಲಿ ಬಂದುಕುಳಿತು ನಾವೆ ಕಟ್ಟಿದ್ದು ಎನ್ನುತ್ತಿದ್ದರೆ ಅದನ್ನು ನಂಬಲು ತಾಲೂಕಿನ ರೈತರು ಮೂರ್ಖರಲ್ಲ.
ಜಿಲ್ಲೆಯ ಸಮಸ್ತ ಸಹಕಾರಿಗಳು ಶಿವರಾಮ ಹೆಬ್ಬಾರ್ ನಾಯಕತ್ವ ಒಪ್ಪಿ ಕೆಡಿಸಿಸಿ ಚುಕ್ಕಾಣಿ ಸತತವಾಗಿ ನೀಡುತ್ತಾ ಬಂದಿರುವುದು ಹೆಬ್ಬಾರ್ ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಸತತ ಆರು ಬಾರಿ ಕೆಡಿಸಿಸಿ ನಿರ್ದೇಶಕರಾಗಿದ್ದು. ಸತತ ನಾಲ್ಕು ಬಾರಿಗೆ ಕ್ಷೇತ್ರದ ಶಾಸಕರಾಗಿ ಜನರೇ ಆಯ್ಕೆ ಮಾಡಿದ್ದಾರೆ.
ಎಪಿಎಂಸಿ ಹೆಬ್ಬಾರ್ ಎಂದೇ ಜನಜನಿತವಾಗಿದ್ದ ಶ್ರೇಷ್ಠ ಸಹಕಾರಿ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲವಾಗಿ ಎಪಿಎಂಸಿ ಮತ್ತು ಟಿಎಂಎಸ್ ನಂತಹ ಹಲವು ಸಂಸ್ಥೆಗಳು ಉತ್ತಮ ಸ್ಥಿತಿಯಲ್ಲಿವೆ. ಸಹಕಾರಿ ಕ್ಷೇತ್ರಕ್ಕೆ ಪ್ರಸಾದ್ ಹೆಗಡೆ ಕೊಡುಗೆ ಶೂನ್ಯವಾಗಿರುವಾಗ ಸಂಸ್ಥೆಯ ಬಗ್ಗೆ ಮಾತನಾಡುವ ಯಾವ ನೈತಿಕತೆಯು ನಿಮಗಿಲ್ಲ. ಸಹಕಾರಿ ಕ್ಷೇತ್ರದಲ್ಲಿನ ಹೆಬ್ಬಾರ್ ಅವರ ಅನುಭವದಷ್ಟು ನಿಮಗೆ ವಯಸ್ಸಾಗಿಲ್ಲ. ಮಾತನಾಡುವ ಮುನ್ನ ಅರಿತು ಮಾತನಾಡುವುದು ಒಳಿತು ಎಂದು ವಿ.ಎಸ್.ಭಟ್ ಮಾದ್ಯಮ ಪ್ರಕಟಣೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.




Prathidvani Yellapura