Breaking News

ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ನಿಷೇಧ – ಗೋಭಿ ಮಂಚೂರಿಗಿಲ್ಲ ಆತಂಕ.

 ಪ್ರತಿಧ್ವನಿ ಯಲ್ಲಾಪುರ –  ರಸ್ತೆ ಬದಿಯಲ್ಲಿ ಮಾಡುವ ತಿಂಡಿ ತಿನಿಸುಗಳ ಮೇಲೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ  ಕಣ್ಣಿಟ್ಟು ಅತಿ ಹೆಚ್ಚು ಕೃತಕ ಬಣ್ಣ ಮತ್ತು ವಿಷಕಾರಿ ಟೇಸ್ಟಿಂಗ್ ಪೌಡರ್ ಬಳಸುವುದನ್ನು ಗಮನಿಸಿ ಗೋಭಿ ಮಂಚೂರಿ ಮತ್ತು ಬೊಂಬಾಯಿ ಮಿಠಾಯಿಯನ್ನು ನಿಷೇಧಿಸುವ ಮಾತುಗಳು ಅಲ್ಲಲ್ಲಿ ಕೇಳಿಬಂದಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಲಿದೆ ಎಂಬ ಸತ್ಯ ಅರಿತು ಪುನಃ ಸ್ಪಷ್ಟನೆ ನೀಡಿ ಅಂತಹ ಪದಾರ್ಥಗಳಿಗೆ ಬಳಸುವ ವಿಷಕಾರಿ ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ನಿಷೇಧಿಸಿದ್ದು ಇದರಿಂದ ಆತಂಕಕ್ಕೊಳಗಾಗಿದ್ದ ಗೋಭಿ ಮಂಚೂರಿ ಅಂಗಡಿಕಾರರು ನಿಟ್ಟಸಿರು ಬಿಡುವಂತಾಗಿದೆ.


ಕೊರೊನ ನಂತರ ಬೀದಿ ಬದಿ ವ್ಯಾಪಾರಿಗಳ ಗೋಳು ಹೇಳತೀರದ್ದಾಗಿತ್ತು. ಇತ್ತೀಚಿಗೆ ನಿಧಾನವಾಗಿ ಬದುಕು ಹಳಿಗೆ ಬರುವ ಸಮಯದಲ್ಲಿ ಗೋಬಿ ಮಂಚೂರಿ ಅಂಗಡಿಗಳನ್ನೇ ಬ್ಯಾನ್ ಮಾಡುವ ಮಾತುಗಳು ಬರಸಿಡಿಲಿನಂತೆ ಬಡಿದಿತ್ತು. ಇದರೊಂದಿಗೆ ಹೂಕೋಸು ಮತ್ತು ಎಲೆಕೋಸು ಬೆಳೆಯುವ ರೈತರಿಗೂ ಆತಂಕ ಎದುರಾಗಿತ್ತು.ಆತ್ಮೀಯ

ಇದೀಗ ಸರ್ಕಾರ ಸ್ಪಷ್ಟಪಡಿಸಿದ್ದು ಕಾಟನ್ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣ ಬ್ಯಾನ್ ಮಾಡಿದ್ದು ಬಣ್ಣ ಬಳಸದ ಕ್ಯಾಂಡಿಗೆ ಯಾವುದೇ ನಿರ್ಬಂಧವಿಲ್ಲ ಹಾಗೆಯೇ ಕೆಮಿಕಲ್‌ಯುಕ್ತ ಗೋಬಿ ಮಂಚೂರಿಯನ್ನೂ ಬ್ಯಾನ್ ಮಾಡಿದ್ದು ಅದಾವುದನ್ನೂ ಬಳಸದೇ ಮಾಡುವ ಗೋಭಿಗೆ ನಿರ್ಬಂಧವಿಲ್ಲ ಎಂಬುದನ್ನು ಸ್ವತಃ ಆರೋಗ್ಯಮಂತ್ರಿ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.


ಇದೀಗ ಯಲ್ಲಾಪುರ ಪಟ್ಟಣದ ಬೀದಿಬದಿ ಗೋಭಿ ಅಂಗಡಿಕಾರರು ಸರ್ಕಾರದ ನಿರ್ದೇಶನ ಪಾಲಿಸುತ್ತಿದ್ದು ಬಣ್ಣ ಬಳಸದೆ ಟೇಸ್ಟಿಂಗ್ ಪೌಡರ್ ಹಾಕದೆ ಗೋಭಿಮಂಚೂರಿ ಮಾಡಲಾಗುತ್ತಿದೆ. ಕೆಲಸಮಯ ಗ್ರಾಹಕರಿಗೆ ರುಚಿಯಲ್ಲಿ ವ್ಯತ್ಯಾಸ ಕಂಡರು ಆರೋಗ್ಯದ ದೃಷ್ಟಿಯಿಂದ ಇಂತಹ ನಿರ್ಧಾರಕ್ಕೆ ಒಗ್ಗಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ ಗ್ರಾಹಕರು.


ಗೋಭಿ ಮಂಚೂರಿಯನ್ನು ಸುಮಾರು 2೦:ವರ್ಷಗಳಿಂದ ರಸ್ತೆಬದಿಯ ಗೂಡಂಗಡಿಯಲ್ಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದು ಗೋಭಿ ಮಾಡುವುದನ್ನೇ ಬ್ಯಾನ್ ಮಾಡುತ್ತಾರೆಂಬುದನ್ನು ಕೇಳಿ ಆತಂಕವಾಗಿತ್ತು. ಆದರೆ ಕೆಮಿಕಲ್ ಬಳಕೆಯನ್ನು ಮಾತ್ರ ನಿಷೇಧಿಸಿರುವುದನ್ನು ಕೇಳಿ ಸಂತಸವಾಗಿದೆ. ಆರೋಗ್ಯ ಇಲಾಖೆ , ಆಹಾರ ಇಲಾಖೆ ಕಾಲಕಾಲಕ್ಕೆ ನಮ್ಮ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಂತಹ ವಿಷಕಾರಿ ವಸ್ತುಗಳನ್ನು ಬಳಸುತ್ತಿದ್ದರೆ ಸೀಜ್ ಮಾಡಬಹುದಾಗಿದೆ. ಇದು ಆರೋಗ್ಯದ ವಿಚಾರವಾದ್ದರಿಂದ ಸರ್ಕಾರದ ನಿರ್ಧಾರಕ್ಕೆ ನಮ್ಮ ಸ್ವಾಗತವಿದೆ ಎಂದು ಪಟ್ಟಣದ ಸುಪ್ರಿಯ ಗೋಭಿ ಅಂಗಡಿ ಮಾಲಿಕ ಪ್ರಕಾಶ ಶಂಕರಪ್ಪ ಪೂಜಾರಿ ಮತ್ತು ತಿಲಕ ಗೋಭಿ ಅಂಗಡಿ ಮಾಲಿಕ ಯಲ್ಲಪ್ಪ ಬದ್ದಿ ಕರಾವಳಿ ಮುಂಜಾವಿಗೆ ಪ್ರತಿಕ್ರಿಯಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *