
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಅನಾದಿ ಕಾಲದಿಂದಲು ಆಚರಣೆಯಲ್ಲಿರುವ ಹೋಳಿ ಹಬ್ಬದ ಪೂರ್ವದಲ್ಲಿ ಆಚರಿಸುವ ಜಾನಪದ ಶ್ರೇಷ್ಠತೆಯ ಹಿನ್ನಲೆಯುಳ್ಳ ಬೇಡರ ವೇಷದ ಕುಣಿತ ಶಿರಸಿ ಸೀಮೆಗೆ ಮಾತ್ರವಲ್ಲದೇ ಯಲ್ಲಾಪುರದಲ್ಲೂ ಕೆಲ ವರ್ಷಗಳಿಂದ ನಿಧಾನವಾಗಿ ಗರಿಗೆದರುತ್ತಿದ್ದು ಈ ವರ್ಷ ಎರಡು ತಂಡಗಳು ಬೇಡರ ವೇಷದ ಕುಣಿತದ ಸೊಬಗನ್ನು ತಾಲೂಕಿನ ಜನತೆಗೆ ಉಣಬಡಿಸಲು ಸಿದ್ದಗೊಂಡಿವೆ.

ಪಟ್ಟಣದ ಅಂಬೇಡ್ಕರ್ ನಗರ ಮತ್ತು ರವೀಂದ್ರನಗರದಿಂದ ಬೇಡರ ವೇಷ ತೊಟ್ಟು ಪಟ್ಟಣದಾದ್ಯಂತ ನೃತ್ಯದ ಸೊಬಗನ್ನು ಜನತೆಗೆ ಪ್ರರ್ಶಿಸಲಿದ್ದಾರೆ. ಶುಕ್ರವಾರ ಸಂಜೆಯಿಂದ ಪ್ರದರ್ಶನಗಳು ಪ್ರಾರಂಭವಾಗಲಿದ್ದು ಎರಡೂ ತಂಡಗಳು ಪೊಲೀಸ್ ಚೌಕದಲ್ಲಿ ಸೇರಿ ರೋಷಾವೇಶದ ಕುಣಿತದೊಂದಿಗೆ ಬೇಡರ ವೇಶದ ನೃತ್ಯದ ಸೊಬಗನ್ನು ಜನತೆಗೆ ಉಣಬಡಿಸಲಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡದ್ದಾರೆ.

ಪೂರ್ವಜರ ಕಾಲದಿಂದಲೂ ಜಾನಪದ ಕಲೆಯಾಗಿ ಶ್ರದ್ಧಾ ಭಕ್ತಿ ಯಿಂದ ಬೇಡರ ವೇಷದ ಸೊಬಗನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು ಪರಂಪರೆಯ ಉಳಿವಿಗೆ ಪ್ರೋತ್ಸಾಹಿಸಿ ಬೆಂಬಲಿಸಬೇಕಿದೆ ಸರ್ವರು ಯಲ್ಲಾಪುರದ ಬೇಡರವೇಷವನ್ನು ಕಾಣಲು ಆಗಮಿಸಬೇಕಿದೆ. ಘನಶ್ಯಾಮ ರೇವಣಕರ ಸಂಘಟಕ

ಶಿರಸಿ ಭಾಗದಲ್ಲಿ ಬಹುತೇಕ ರಾಜ್ಯಮಟ್ಟದಲ್ಲಿ ಹೆಸರಾದ ಬೇಡರ ವೇಷ ಕಳೆದ ಕೆಲವು ವರ್ಷಗಳಿಂದ ಯಲ್ಲಾಪುರದಲ್ಲು ಮುಂದುವರೆಸಿಕೊಂಡು ನಡೆಸಿಕೊಂಡು ಬರುತ್ತಿದ್ದು ಸಾರ್ವಜನಿಕರು ಬೆಂಬಲಿಸಿ ಪ್ರೋತ್ಸಯಿಸಬೇಕಿದೆ. ಅನಿಲ್ ಜೊಗಳೇಕರ್ ಸಂಘಟಕರು



Prathidvani Yellapura