

ಯಲ್ಲಾಪುರ : ಪೂರ್ವಜರ ಕಾಲದಿಂದಲು ಹೋಳಿ ಹಬ್ಬಕ್ಕು ಮುನ್ನ ಸುಗ್ಗಿ ಕುಣಿತ ನೆರವೇರಿಸುತ್ತಾ ಬಂದಿದ್ದು ಸ್ಥಳೀಯ ದೇವತೆಗಳ ಅಪ್ಪಣೆ ಪಡೆದು ರಣಗಳನ್ನು ಎಬ್ಬಿಸಿ ಸುಗ್ಗಿ ಕುಣಿತ ಆಯೋಜಿಸಲಾಗುತ್ತದೆ ಅದರಂತೆ ಕಣ್ಣೀಗೆರೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುಗ್ಗಿ ಕುಣಿತ ಸದ್ದು ಮಾಡುತ್ತಿದೆ.

ಹಿಂದಿನವಕಾಲದ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪದ್ದತಿ ಪರಂಪರೆಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಂಡು ಮುಂದೆ ಸಾಗುತ್ತಿರುವುದು ನೆಲದ ಸಂಸ್ಕೃತಿಗಳ ರಕ್ಷಣೆಯಾಗಿದೆ.

ಐದು ದಿನಗಳಿಂದ ತಮ್ಮ ಊರು ಮತ್ತು ಮನೆಗಳನ್ನು ಬಿಟ್ಟು ಸುಗ್ಗಿ ಕುಣಿತದಲ್ಲಿ ಪಾಲ್ಗೊಳ್ಳುತ್ತರೆ ಐದು ದಿನಗಳ ನಂತರ ತಮ್ಮ ಮನೆ ಸೇರುತ್ತಾರೆ. ಬಣ್ಣದ ಧಿರಿಸು ಧರಿಸಿ ನಡುಮದ್ಯದಲ್ಲಿ ತುಳಸಿ ಇರಿಸಿ ಮರಾಠಿ ಭಕ್ತಿ ಭಜನೆಗೆ ತಾಳದೊಂದಿಗೆ ಹೆಜ್ಜೆ ಹಾಕುತ್ತ ಸುಗ್ಗಿ ಕುಣಿತ ಮಾಡುತ್ತಾರೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಜಾನಪದ ಸೊಗಡನ್ನು ಮೈಗೂಡಿಸಿಕೊಂಡ ಸುಗ್ಗಿಕುಣಿತ ನೋಡುಗರ ಗಮನ ಸೆಳೆಯುತ್ತಿದ್ದು ಆಕರ್ಷಣೆ ಪಡೆದಿದೆ..


Prathidvani Yellapura