Breaking News

ಸಾರ್ಥಕ ಯೋಜನೆಗೆ ಸಾವಿರ ಶರಣು – ಬರಡು ಭೂಮಿಗೆ ನೀರುಣಿಸಿದ ಭಗೀರಥ ಶಾಸಕ ಹೆಬ್ಬಾರ್.


ಯಲ್ಲಾಪುರ – ತಾಲೂಕಿನಲ್ಲಿ ಅತ್ಯಂತ ಬರಡು ಪ್ರದೇಶಗಳಲ್ಲಿ ಒಂದಾದ ಕೆರೆಹೊಸಳ್ಳಿ ಗ್ರಾಮದ ಕೃಷಿ ಮತ್ತು ಕುಡಿಯು ನೀರಿನ ಬವಣೆ ನೀಗಿ ಬಡಜನರ ಪಾಲಿನ ಭಗೀರಥ ಎಂದೆನಿಸಿಕೊಂಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ನ ಸಾಕಾರಗೊಂಡು ಭೂಮಿ ಹಸಿರಾಗಿ ಕೃಷಿಕರ ಬದುಕು ಹಸನಾಗಿದೆ ಊರಿನ 60 ಕ್ಕು ಹೆಚ್ಚು ಕುಟುಂಬಗಳು ಹೆಬ್ಬಾರ್ ಅವರಿಗೆ ಋಣಿಗಳಾಗಿದ್ದೇವೆ ಎಂದು ಕೆರೆಹೊಸಳ್ಳಿ ವಿ.ಎಫ್.ಸಿ ಮಾಜಿ ಅಧ್ಯಕ್ಷ ಸ್ಥಳೀಯ ಕೃಷಿಕ ದತ್ತಾತ್ರೇಯ ಜಿ ಭಾಗ್ವತ್ ಹೇಳಿದರು.


ಅವರು ಪಟ್ಟಣದ ನೌಕರರ ಭವನದಲ್ಲಿ ಕರೆಯಲಾದ ಕೆರೆ ಹೊಸಳ್ಳಿ ಏತ ನೀರಾವರಿ ಯೋಜನೆ ಯಶಸ್ವಿಯಾಗಿರುವ ಕುರಿತು ಕರೆಯಲಾದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು‌.


ಗ್ರಾಮದ ಹೊರವಲಯದಲ್ಲಿ ಹರಿಯುವ ಡಬ್ಗೆ ಹಳ್ಳಕ್ಕೆ ಬಾಂದಾರ ನಿರ್ಮಿಸಿ ಮಳೆಗಾಲವು ಸೇರಿದಂತೆ ಹರಿವ ನೀರನ್ನು ಸಂಗ್ರಹಿಸಿ 60 ಹೆಚ್.ಪಿ ಸಾಮಥ್ರ್ರ್ಯದ ಮೂರು ಪಂಪ್ ಸಹಾಯದಿಂದ 18 ಗೇಟ್ ವಾಲ್ ಗಳ ಮೂಲಕ ಗದ್ದೆ,ತೋಟ,ಕೃಷಿಹೊಂಡ ಇನ್ನಿತರೆ ನೀರುಸಂಗ್ರಹಣ ಸ್ಥಳದಲ್ಲಿ ನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಗಳಿಗೆ ನೀರುಣಿಸಲಾಗುತ್ತಿದೆ.

ಸಾರ್ಥಕತೆಯ ಸುಂದರ ಚಿತ್ರಣಗಳು

ಇದಕ್ಕೆಲ್ಲಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಗಟ್ಟಿ ನಿರ್ಧಾರ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಕಾರ್ಯದ ಫಲ ಈ ಭಾಗದ ಗದ್ದೆ ತೋಟಗಳೆಲ್ಲ ನಳನಳಿಸುತ್ತಿದೆ. ಈ ಎಲ್ಲಾ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸ್ಥಳೀಯ ರೈತರೆ ಸಮಿತಿ ನಿರ್ಮಿಸಿಕೊಂಡು ದಿನಕ್ಕೊಂದು ವಾಲ್ ಕಡೆಗೆ ನೀರುಹಾಯಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಕೆರೆ ಹೊಸಳ್ಳಿ ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಜಾನು ಕುಣಬಿ ಹೇಳಿದರು.


ಸರ್ಕಾರದ ಯೋಜನೆಯೊಂದು ಕೋಟ್ಯಾಂತರ ಹಣವ್ಯಯಿಸಿ ಅನುಷ್ಟಾನಗೊಳಿಸಿದ್ದು ಅದರಿಂದ ಪ್ರಯೋಜನ ಪಡೆದ ಫಲಾನುಭವಿಗಳು ಸಾರ್ಥಕತೆಯ ಕೃತಜ್ಞತೆ ಸಲ್ಲಿಸುವ ಕಾರ್ಯ ಅತ್ಯಂತ ವಿರಳವಾಗಿದ್ದು ಇದೊಂದು ವಿಶೇಷ ಕ್ಷಣ ಎನಿಸಿತು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರಾದ ಚಂದ್ರ ಬಾಬು ಸಿದ್ದಿ, ಗಣಪತಿ ನಾಗಪ್ಪ ಸಿದ್ದಿ ಉಪಸ್ಥಿತರಿದ್ದರು.

ಹಿಂದೆ ಈ ಯೋಜನೆ ಉದ್ಘಾಟನೆಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಶಾಸಕ ಹೆಬ್ಬಾರ್ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿ ಬರೆದ ಲೇಖನ ಇಂದು ಈ ಯೋಜನೆ ಸಾಕಾರಗೊಂಡಿದೆ ಒಬ್ಬ ಜನನಾಯಕರಿಗೆ ಇದಕ್ಕಿಂತ ಇನ್ನೇನು ಪ್ರೀತಿ ಬೇಕು.. ಸಾರ್ಥಕ ಪ್ರಯತ್ನ ಯಶಸ್ವಿಯಾದ ಅನುಷ್ಟಾನಕ್ಕೆ ಪ್ರತಿಧ್ವನಿ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ. ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಸಂಪಾದಕಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *