Breaking News

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಸಲ್ಯ ಯೋಜನೆ ಉದ್ಯೋಗ ಮೇಳ ಮತ್ತು ಸಮಾಲೋಚನೆ.

ಯಲ್ಲಾಪುರ : ತಾಲೂಕಿನಲ್ಲಿ ಎನ್.ಆರ್.ಎಲ್.ಎಂ ವಿಭಾಗ ಕ್ರಿಯಾಶೀಲ ಚಟುವಟಿಕೆ ನಡೆಸುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಕಾರ್ಯಗಳೊಂದಿಗೆ ಜನರಿಗೆ ಹತ್ತಿರವಾಗಿದೆ. ಇಂದು ನಡೆಸುತ್ತಿರುವ ಉದ್ಯೋಗ ಸಂಬಂಧ ಸಮಾಲೋಚನೆ ಆಯ್ಕೆ ಮತ್ತು ಮಾಹಿತಿ ಕಾರ್ಯಕ್ರಮ ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಜನತೆಗೆ ಅನುಕೂಲವಾಗಲಿದೆ ಎಂದು ತಾಲೂಕು ಪಂಚಾಯತ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ ಹೇಳಿದರು.


ಅವರು ಪಟ್ಟಣದ ಗಾಂಧಿ ಕುಟಿರದಲ್ಲಿ ಎನ್ ಆರ್ ಎಲ್ ಎಂ ವಿಭಾಗದಡಿಯಲ್ಲಿ ” ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಸಲ್ಯ ಯೋಜನೆ “ ಯಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಮಾಲೋಚನೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.


ವಿದ್ಯಾವಂತ ನಿರುದ್ಯೋಗಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಇದ್ದು ಸ್ವಯಂ ಸೇವ ಸಂಸ್ಥೆಗಳು ಸರ್ಕಾರದ ಅಂಗ ಸಂಸ್ಥೆಗಳೊಂದಿಗೆ ಕೂಡಿ ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಗೆ ಶ್ರಮಿಸುತ್ತಿರುವ ಸಾರ್ಥಕ ಕಾರ್ಯದ ಕುರಿತು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಕೌಶಲ್ಯಾಭಿವೃದ್ದಿ ಜಿಲ್ಲಾ ವ್ಯವಸ್ಥಾಪಕರಾದ ವಿಜಯ್ ಕುಮಾರ್ ಹೆಗಡೆ ಮತ್ತು ಪತ್ರಕರ್ತ ಕೇಬಲ್ ನಾಗೇಶ್ ಮಾತನಾಡಿದರು..
ಬೆಂಗಳೂರಿನ ಪ್ರಾಜೆಕ್ಟ್ ಇಂಪ್ಲಿಮೆಂಟ್ ಎಜೆನ್ಸಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾದ ಹಸನ್ ಮತ್ತು ಸಾಗರ್ ಉಪಸ್ಥಿತರಿದ್ದರು.


ಸಂಜೀವಿನಿ ಒಕ್ಕೂಟದ ರಾಜೇಶ್ವರಿ ಸಿದ್ದಿ ಪ್ರಾರ್ಥಿಸಿದರು. ರಾಜಾರಾಮ ವೈದ್ಯ ಸ್ವಾಗತಿಸಿದರು. ಎನ್.ಆರ್.ಎಲ್.ಎಮ್ ತಾಲೂಕು ಅಧಿಕಾರಿ ಮಂಜಣ್ಣ ನಿರೂಪಿಸಿ ವಂದಿಸಿದರು. ತಾಲೂಕಿನ 15 ಗ್ರಾಮ ಪಂಚಾಯತದ ಪದವಿ ನಿರುದ್ಯೋಗ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *