
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸೇವೆಯಲಿದ್ದ ಕ್ರಿಯಾಶೀಲ ಮುಖ್ಯಾಧಿಕಾರಿ ಸಂಗನ ಬಸಯ್ಯ ವರ್ಗಾವಣೆಯಾಗಿ ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸುನಿಲ್ ಸುಭಾಷ್ ಗಾವಡೆ ಬಂದಿದ್ದು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸುನಿಲ್ ಎಸ್ ಗಾವಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನವರಾಗಿದ್ದು ಈ ಹಿಂದೆ ದಾಂಡೇಲಿ ಯಲ್ಲಿ 10 ವರ್ಷಗಳ ಕಾಲ ಕಿರಿಯ ಆರೋಗ್ಯ ನಿರೀಕ್ಷಕರಾಗಿದ್ದು. 5 ವರ್ಷಗಳ ಕಾಲ ಹೊನ್ನಾವರ ಡೆಪ್ಟೇಷನ್ ಮೇಲೆ ಕರ್ತವ್ಯ ನಿರ್ವಹಿಸಿರುತ್ತಾರೆ. ನಂತರದಲ್ಲಿ ಶಿರಸಿ ನಗರ ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರಿಗೆ ಸರ್ಕಾರ ಪದೋನ್ನತಿಗೊಳಿಸಿ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಆದೇಶಿಸಿದೆ.

ಸಂಗನ ಬಸಯ್ಯ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಕ್ರಿಯಾಶೀಲ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅವರ ಅವಧಿಯಲ್ಲಿ ನಡೆದ ಯಲ್ಲಾಪುರ ಗ್ರಾಮದೇವಿ ಜಾತ್ರೆ ಅತ್ಯಂತ ಯಶಸ್ವಿಯಾಗುವಲ್ಲಿ ಇವರ ಶ್ರಮವು ಅಡಗಿತ್ತು. ದೇವಿದೇವಸ್ಥಾನ ರಸ್ತೆ ಅಗಲಿಕರಣದಲ್ಲಿ ಶ್ರಮಿಸಿದ್ದರು. ಪ್ರತಿ ತಿಂಗಳ ಮಾಸಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಕಾನೂನಾತ್ಮಕ ಉತ್ತರ ನೀಡುತ್ತ ಶಿಸ್ತು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸದಸ್ಯರು ಮತ್ತು ಸಿಬ್ಬಂದಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಕಚೇರಿಯಲ್ಲಿ ಶಿಸ್ತು ತಂದಿದ್ದರು ಮತ್ತು ವಾಲ್ ಮನ್ ಗಳ ಮೇಲೆ ತೀವ್ರನಿಗಾ ಇರಿಸಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಬಾರದಂತೆ ಅವರೆ ಮಾನಿಟರಿಂಗ್ ಮಾಡುತ್ತಿದ್ದರು. ಪೌರ ಕಾರ್ಮಿಕರೊಂದಿಗೆ ಸ್ನೇಹ ಭಾವದಲ್ಲಿ ಇರುತ್ತಿದ್ದರು. ಮುಂಜಾನೆ ವಾಕಿಂಗ್ ಹೆಸರಿನಲ್ಲಿ ವಾಡ್೯ ಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕಡೆಗೆ ಗಮನ ಹರಿಸುತ್ತಿದ್ದರು. ಒಟ್ಟಿನಲ್ಲಿ ಕ್ರಿಯಾಶೀಲ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜನಮಾನಸದಲ್ಲಿ ಹೆಸರು ಗಳಿಸಿ ಸರ್ಕಾರಿ ಆದೇಶದಂತೆ ಶಿಗ್ಗಾಂವಿಗೆ ತೆರಳಿದ್ದಾರೆ ಅವರ ಮುಂದಿನ ಕರ್ತವ್ಯ ಜೀವನ ಶುಭವಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.
Prathidvani Yellapura