
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ: ಕುಟುಂಬದ ಹಿರಿಯರು ತಲ ತಲಾಂತರದಿಂದ ಕುಲಕಸಬಾದ ತೊಗಲು (ಚರ್ಮ) ಹದಮಾಡುವ ಕೆಲಸದ ಸ್ಥಳ ಮಣ್ಣು ಕಸ ಹಾಗು ಗಲಿಜು ನೀರು ಸಂಗ್ರಹ ವಾಗಿ ಜನರು ತೀರುಗಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಜಾಗದ ಪರಿಸ್ಥಿತಿ ನೊಡಿ ತೊಗಲು ಹರಳಯ್ಯ ಟ್ರಸ್ಟ್ ( ರಿ) ಅಡಿಯಲ್ಲಿ ಸ್ಥಳ ವನ್ನು ಸ್ವಚ್ಚಗೊಳಿಸಿ ಅಲ್ಲಿಯೆ ಕಚೇರಿ ನಿರ್ಮಿಸಿ ಸಮಾಜಮುಖಿ ಸೇವೆಗೆ ಅಣಿಗೊಳಿಸಲಾಗಿದೆ.

ಸಮುದಾಯದ ಹಿರಿಯರ ಆಶಯದಂತೆ ಪೂರ್ವಜರ ಕುಲಕಸುಬು ಸ್ಥಳವನ್ನು ಕಳೆದ ನಾಲ್ಕು ತಿಂಗಳಿಂದ ನಿತ್ಯವು ಸ್ವಚ್ಚತಾ ಕಾರ್ಯ ಮಾಡುತ್ತಲಿದ್ದು ಮಂಗಳವಾರ ಕಚೇರಿಯನ್ನು ಇಲ್ಲಿಯೆ ತೆರೆಯಲಾಯಿತು ಎಂದು ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ್ ರೆವಣಕರ್ ಮಾದ್ಯಮಗಳಿಗೆ ಹೇಳಿದರು.

ಮಂಜುನಾಥನಗರದ ಕರೆಗುಂಡಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ಅನಾದಿ ಕಾಲದಿಂದಲು ನಮ್ಮ ಕುಟುಂಬದ ಹಿರಿಯರು ಕುಲಕಸುಬನ್ನು ಮಾಡುತ್ತಿದ್ದು ಸಮಾನ ಮನಸ್ಕರೊಡನೆ ಸೇರಿ ಸ್ಥಳವನ್ನು ಪಾಳು ಬಿಡದೆ ಸ್ವಚ್ಚ ಗೊಳಿಸಿದ್ದು ಮುಂದಿನ ದೀನಗಳಲ್ಲಿ ಈ ಸ್ಥಳದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು ಎಂದು ಅಂಬೆಡ್ಕರ ನಗರ ಪಟ್ಟಣ ಪಂಚಾಯತ ಸದಸ್ಯ ಹಾಗು ಟ್ರಸ್ಟ ಕಾರ್ಯದರ್ಶಿ ರವಿ ಪಾಟಣಕರ್ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ ನ ಖಜಾಂಜಿ ನಿರಂಜನ್ ಪಾಟನಕರ್ , ಸದಸ್ಯರಾದ ಗಣೇಶ ಪಾಟಣಕರ್, ರೂಪಾ ಪಾಟಣಕರ್, ವಿಶ್ವನಾಥ ಬೊರಕರ್, ಪ್ರಶಾಂತ ಪಾಟಣಕರ್ , ರಾಜಾ ಪಾಲೆಕರ, ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.
Prathidvani Yellapura