

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ – ತಾಲೂಕಿನ ಪ್ರತಿಷ್ಠಿತ ಸಂಘದಲೊಂದಾದ ಡಾ,ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಹು ದೀರ್ಘ ಸಮಯದಿಂದ ಕ್ರಿಯಾಶೀಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ನಾಥ ರೇವಣಕರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ತಾಲೂಕು ಸಂಘಟನೆಯ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಬರೆದಿದ್ದು ಪತ್ರದಲ್ಲಿ ತನ್ನ ರಾಜಿನಾಮೆಗೆ ಕಾರಣವೇನೆಂಬುದನ್ನು ಉಲ್ಲೇಖಿಸಿದ್ದಾರೆ.

ಸಂಘಕ್ಕಾಗಿ ಬಹು ಸಮಯದಿಂದ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸಂಘದ ಸಭೆಗಳಿಗೆ ಹಾಜರಾಗುವುದು ಕಷ್ಟವಾಗುವುದರಿಂದ ಮತ್ತು ಇನ್ನಿತರ ವೈಯಕ್ತಿಕ ಕಾರಣಗಳಿಂದಾಗಿ ನನ್ನ ಸ್ವ ಹಿಚ್ಚೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.
ನನ್ನ ಸೇವಾ ದಿನಗಳಲ್ಲಿ ನನ್ನೊಂದಿಗೆ ಎಲ್ಲಾ ಕಾರ್ಯಗಳಲ್ಲಿ ಕೈ ಜೋಡಿಸಿ ಸಹಕರಿಸಿದ ಸಮಿತಿಯ ಇತರೆ ಪದಾಧಿಕಾರಿಗಳು ಹಾಗು ಸದಸ್ಯರಿಗೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು, ಹಿರಿಯ ನಾಗರಿಕರು, ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳು ಪತ್ಯಕ್ಷವಾಗಿ ಮತ್ತು ಪರೀಕ್ಷವಾಗಿ ಸಹಕರಿಸಿದ ಸರ್ವರಿಗು ಪ್ರಮುಖವಾಗಿ ಸಮುದಾಯದ ಪ್ರತಿಯೊಬ್ಬ ನಾಗರಿಕ ಬಂಧುಗಳಿಗು ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘವು ಮುಂದೆಯು ಉತ್ತಮ ಕಾರ್ಯಗಳೊಂದಿಗೆ ಮತ್ತಷ್ಟು ಏಳಿಗೆ ಹೊಂದಲೆಂದು ಆಶಿಸುತ್ತೇನೆ ಎಂದು ಜಗನ್ನಾಥ ರೇವಣಕರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Prathidvani Yellapura