

ಪ್ರತಿಧ್ವನಿ, ಯಲ್ಲಾಪುರ- ತಾಲ್ಲೂಕಿನ ಮಾವಿನಕಟ್ಟಾ ದಲ್ಲಿ ಗುರುವಾರ ನಡೆದ ಮನ ಕಲಕುವ ಘಟನೆ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿಯ ಸಾವು. ಕಾಪಾಡಲು ತೆರಳಿದ ಮತ್ತೂ ಇಬ್ಬರ ದುರ್ಮರಣ ವಿಧಿಯಾಟಕ್ಕೆ ಮೂವರು ಬಲಿ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ.

ಮಾವಿನಕಟ್ಟದಲ್ಲಿ ವ್ಯಕ್ತಿಯೋರ್ವರಿಗೆ ಸೇರಿದ ಬಾವಿಯಲ್ಲಿನ ಪಂಪ್ ದುರಸ್ತಿಗಾಗಿ ಗೋವಿಂದ ಸೋಮಯ್ಯ ಪೂಜಾರಿ (60) ಎಂಬುವರು ಪಂಪ್ ದುರಸ್ತಿಗೆ ಬಾವಿಯೊಳಗೆ ಇಳಿದಿದ್ದು ಬಹಳ ಸಮಯದವರೆಗೆ ಬಾರದಿದ್ದದ್ದನ್ನು ಕಂಡವರು ಕೂಗಿಕೊಂಡಿದ್ದಾರೆ ತಕ್ಷಣವೇ ಅಲ್ಲಿಯೆ ಹೋಗುತ್ತಿದ್ದ ಮಾವಿನಕಟ್ಟಾ ಸ್ಥಳೀಯ ನಿವಾಸಿ ಗಣೇಶ ರಾಮದಾಸ್ ಶೇಟ್ (23 ) ಎಂಬ ಯುವಕ ಸಹಾಯಕ್ಕೆಂದು ದಾವಿಸಿ ಬಾವಿಗಿಳಿದಿದ್ದಾನೆ ಆತನು ಸಮಸ್ಯೆಗೆ ಸಿಲುಕಿರುವ ಸೂಚನೆ ದೊರೆಯುತ್ತಿದ್ದಂತೆ ಅಲ್ಲಿಯೆ ಇದ್ದ ಸುರೇಶ ನಾಯರ್ ( 40) ಎಂಬಾತ ಬಾವಿಗಿಳಿದಿದ್ದಾನೆ ಆತನ ಪ್ರಾಣ ಪಕ್ಷಿಯು ಹಾರಿ ಹೋಗಿದ್ದು ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದಿಂದ ಮೂವರ ಮೃತದೇಹಹೊರ ತಗೆಯಲಾಯಿತು . ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಲು ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಗೆ ಸಾಗಿಸಲಾಯಿತು.
.

ಸಚಿವ ಶಿವರಾಮ ಹೆಬ್ಬಾರ್ಗೆ ಸುದ್ದಿ ತಿಳಿಯುತ್ತಲೆ ತಕ್ಷಣ ಹೊರಟು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ.





Prathidvani Yellapura