Breaking News

ರಿಲ್ಯಾಕ್ಸ್ ಮೂಡಿನಲ್ಲಿ ಸಚಿವ ಹೆಬ್ಬಾರ್- ಸದಾ ಜನರೊಂದಿಗೆ


ಪ್ರತಿಧ್ವನಿ,ಯಲ್ಲಾಪುರ-ಚುನಾವಣೆ ಮುಗಿದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಯಾರಾಗಬೇಕೆಂದು ಮತದಾರ ತನ್ನ ನಿರ್ಧಾರವನ್ನು ಅದಾಗಲೆ ದಾಖಲಿಸಿ ಪೆಟ್ಟಿಗೆಯೊಳಗೆ ಜೋಪಾನವಾಗಿರಿಸಿದ್ದಾನೆ ನಾಳೆ 9 ಮಂದಿ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.


ಇಷ್ಟೆಲ್ಲಾ ಒತ್ತಡವಿದ್ದರು ಸಚಿವ ಹೆಬ್ಬಾರ್ ಅವರಿಗೆ ಪಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಜೊತೆ ಕಾರ್ಯಕರ್ತರ ಜೊತೆ ಕುಳಿತು ಮಾತನಾಡುತ್ತ ಸಮಯ ಕಳೆದರು. ಸಚಿವರ ಹಲವು ವಿಶೇಷತೆಗಳಲ್ಲಿ ಇದು ಒಂದು ಎಷ್ಟೇ ಒತ್ತಡ ಸಮಸ್ಯೆಗಳಿದ್ದರು ಎಲ್ಲವನ್ನು ಜನರ ಮದ್ಯೆ ಬೆರೆತು ಕಳೆದುಬಿಡುತ್ತಾರೆ. ಸದ್ಯ ನಡೆದ ವಿಧಾನಸಭಾ ಚುನಾವಣಾ ಪಲಿತಾಂಶ ನಾಳೆ ಹೊರಬೀಳಲಿದ್ದು ಯಾವುದೆ ಆತಂಕ ವಿಲ್ಲದೆ ಎಂದಿನಂತೆ ಮಂದಹಾಸದಲ್ಲಿ ಜನರನ್ನು ಮಾತನಾಡಿಸುತ್ತಾ ಅವರದ್ದೆ ಮನೆಯ ಹೊರಾಂಡದಲ್ಲಿ ಕುಳಿತು ರಿಲ್ಯಾಕ್ಸ ಮೂಡ್ ನಲ್ಲಿದ್ದಾರೆ.

ಚುನಾವಣೆ ಘೋಷಣೆಯಾದಾಗಿನಿಂದ ಕ್ಷೇತ್ರದ ಜನರ ಆಶಿರ್ವಾದಕ್ಕಾಗಿ ಸಂಚರಿಸಿದ್ದೇನೆ ಜನ ನನ್ನನ್ನು ಆಶಿರ್ವದಿಸಿ ಮತ್ತೊಮ್ಮೆ ಅವರ ಸೇವೆಗೆ ಅಪ್ಪಣೆ ನೀಡಿದ್ದಾರೆ ಅದರಲ್ಲಿ ಯಾವುದೆ ಸಂದೇಹವಿಲ್ಲ. ಚುನಾವಣೆಯಲ್ಲಿ ತಮ್ಮ ಜವಾಬ್ದಾರಿಯುತ ಕರ್ತವ್ಯವಾದ ಮತ ಚಲಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಜನರಿಗು. ಶಾಂತಿಯುತ ಮತದಾನಕ್ಕೆ ಕಾರಣೀರ್ಕರಾದ ಅಧಿಕಾರಿಗಳು ಸಿಬ್ಬಂದಿಗಳು ಹಾಗು ಹಗಲಿರುಳು ದುಡಿದ ಕಾರ್ಯಕರ್ತರಿಗು ನಾನು ಋಣಿಯಾಗಿದ್ದೇನೆ. ಯಾವುದೆ ಗೊಂದಲ ಆತಂಕವಿಲ್ಲದೆ ವಿಜಯೋತ್ಸವದ ತಯಾರಿಯ ಚಿಂತನೆಯಲಿದ್ದೇನೆ ಎಂದು ಗೆಲುವಿನ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಸಚಿವ ಶಿವರಾಮ ಹೆಬ್ಬಾರ್.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *