

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ : ತಾಲೂಕಿನ15 ಪಂಚಾಯತ್ ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂಬಂಧ ಆಗಸ್ಟ್ 9 ಮತ್ತು 10 ರಂದು ಪ್ರಕ್ರಿಯೆ ಜರುಗಿತು. 14 ಪಂಚಾಯತಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜರುಗಿ ಕಂಪ್ಲಿ ಪಂಚಾಯತ್ ಚುನಾವಣೆ ಮುಂದೂಡಲಾಯಿತು.
ತಾಲೂಕಿನಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ಎಲ ಪಂಚಾಯತವನ್ಬು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಾಯಿತು.

ಕಿರವತ್ತಿ ಪಂಚಾಯತ್ ಹೆಬ್ಬಾರ್ ಬೆಂಬಲಿಗರ ತೆಕ್ಕೆಗೆ.
ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಅವರ ಬೆಂಬಲಿತ ಅಭ್ಯರ್ಥಿಗಳಾದ ಸಂಗೀತಾ ಕೊಕರೆ ಅವರು ಅಧ್ಯಕ್ಷರಾಗಿ ಹಾಗೂ ಹನುಮವ್ವ ಭಜಂತ್ರಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿ, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಸ್ಥಳೀಯ ಮುಖಂಡರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಗ್ರಾಮ ಪಂಚಾಯತ ಸದಸ್ಯರಾದ ರಹೆಮತ ಅಬ್ಬಿಗೇರಿ, ಪ್ರಮುಖರಾದ ಅನಿಕೇತ ಮಿರಾಶಿ, ರಾಘವೇಂದ್ರ ಗೊಂದಿ, ಮಹೇಶ ಗೋಕರ್ಣ, ಮಾಕು ಕೊಕರೆ, ಆನಂದ ಕುರಿ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಪಂಚಾಯತ ಸದಸ್ಯರು, ಹೆಬ್ಬಾರ್ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಆನಗೋಡ್ ಗ್ರಾಮ ಪಂಚಾಯತ ಶಾಸಕ ಹೆಬ್ಬಾರ್ ಬೆಂಬಲಿಗರ ಗೆಲುವು.
ಯಲ್ಲಾಪುರ : ತಾಲೂಕಿನ ಆನಗೋಡು ಗ್ರಾಮ ಪಂಚಾಯತ್ ಹೆಬ್ಬಾರ್ ಬೆಂಬಲಿಗರ ಪಾಲಾಗಿದೆ.
ಅಧ್ಯಕ್ಷರಾಗಿ ಮೀನಾಕ್ಷಿ ಭಟ್ ಮತ್ತು ಉಪಾಧ್ಯಕ್ಷರಾಗಿ ಕುಸುಮಾ ಸಿದ್ದಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಗೆದ್ದ ಅಭ್ಯರ್ಥಿಗಳನ್ನು ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪಕ್ಷದ ಪ್ರಮುಖರು ಅಭಿನಂದಿಸಿರುತ್ತಾರೆ.

ಹೆಬ್ಬಾರ್ ಬೆಂಬಲಿತರ ಪಾಲಾದ ಕುಂದರಗಿ ಪಂಚಾಯತ್
ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾಮಪಂಚಾಯತದಲ್ಲಿ ಹೆಬ್ಬಾರ್ ಬೆಂಬಲಿತ ಯಮುನಾ ಸಿದ್ದಿ ಅಧ್ಯಕ್ಷೆಯಾಗಿ ಸೌಮ್ಯ ನಾಯ್ಕ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾರೆ.

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತದಲ್ಲಿ ಬುಧವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ್ದ ಹೊನ್ನಗದ್ದೆ ಯ ವಾರ್ಡ ಸದಸ್ಯ ಭಗೀರಥ ನಾಯ್ಕ ಅವಿರೋಧ ಆಯ್ಕೆಗೊಂಡರು.ಗಂಗಾ ಕೋಮಾರ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಕಣ್ಣಿಗೇರಿ ಪಂಚಾಯತ್ ನಲ್ಲಿ ಹೆಬ್ಬಾರ ಬೆಂಬಲಿತರ ಭರ್ಜರಿ ಜಯಭೇರಿ
ಯಲ್ಲಾಪುರ : ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತ್ ಒಟ್ಟು 11 ಸದಸ್ಯ ಬಲವಿದ್ದು ಅಧ್ಯಕ್ಷ ಸ್ಥಾನಕ್ಕೆ ಎರಡು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು ನಂತರ ನಡೆದ ಚುನಾವಣೆಯಲ್ಲಿ ಹೆಬ್ಬಾರ್ ಬೆಂಬಲಿತ ಸುನಂದ ಎಸ್ ಮರಾಠಿ ಅಧ್ಯಕ್ಷೆಯಾಗಿ ನಾಗೇಶ ನಾರಾಯಣ ಗಾವಡೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚಂದಗುಳಿ ಗ್ರಾಮ ಪಂಚಾಯತ್ ಅವಿರೋದವಾಗಿ ಹೆಬ್ಬಾರ್ ಬೆಂಬಲಿತರ ಆಯ್ಕೆ
ಯಲ್ಲಾಪುರ : ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತ್ ಎರಡನೆ ಅವಧಿಯ ಅಧ್ಯಕ್ಷಗಾದಿಗೆ ಹೆಬ್ಬಾರ್ ಬೆಂಬಲಿತ ಶಿಲ್ಪ ರವಿ ನಾಯ್ಕ ಅಧ್ಯಕ್ಷೆಯಾಗಿ ಶಾರದ ನರಸಿಂಹ ಭಾಗ್ವತ್ ಅವರು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ.

ಹಾಸಣಗಿ ಪಚಾಯತ ಹೆಬ್ಬಾರ್ ಬೆಂಬಲಿತರ ಖಾತೆಗೆ.
ಯಲ್ಲಾಪುರ : ತಾಲೂಕಿನ ಹಾಸಣಗಿ ಗ್ರಾಮ ಪಂಚಾಯತ ಕ್ಕೆ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಹೆಬ್ಬಾರ್ ಬೆಂಬಲಿತ ವಿನೋದಾ ಸಿ. ಬಿಲ್ಲವ ಹಾಗೂ ಉಪಾಧ್ಯಕ್ಷರಾಗಿ ಪುರಂದರ ಎನ್ ನಾಯ್ಕ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ.
ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಲೋಕೋಪಯೋಗಿ ಇಲಾಖೆಯ ಸ.ಕಾ.ನಿ ಅಭಿಯಂತರ ವಿ.ಎಂ.ಭಟ್ಟ, ಪಿ.ಡಿ.ಓ ಎಸ್.ಸಿ.ವಿರಕ್ತಮಠ ಸೇರಿದಂತೆ ವಿವಿಧ ಪ್ರಮುಖರು ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಯಲ್ಲಾಪುರ: ಇಡಗುಂದಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಶ್ರೀಕಾಂತ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ನಾಗವೇಣಿ ಸಿದ್ದಿ ಸರ್ವಾನುಮತದೊಂದಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಗೊಂಡ ಇರ್ವರನ್ನು ಶಾಸಕ ಶಿವರಾಮ ಹೆಬ್ಬಾರ್ ಅಭಿನಂದಿಸಿದ್ದಾರೆ.

ಉಮ್ಮಚ್ಗಿ ಪಂಚಾಯತಕ್ಕೆ ಕುಪ್ಪಯ್ಯ ಪೂಜಾರಿ ಅಧ್ಯಕ್ಷ ಗಂಗಾ ಹೆಗಡೆ ಉಪಾಧ್ಯಕ್ಷೆ
ಯಲ್ಲಾಪುರ : ಉಮ್ಮಚ್ಗಿ ಗ್ರಾಮ ಪಂಚಾಯತಕ್ಕೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹೆಬ್ಬಾರ್ ಮಾರ್ಗದರ್ಶನದಲ್ಲಿ ಬಿಜೆಪಿ ಬೆಂಬಲಿತರಾದ ಕುಪ್ಪಯ್ಯ ಅಣ್ಣಪ್ಪ ಪೂಜಾರಿ ಅಧ್ಯಕ್ಷರಾಗಿ ಮತ್ತು ಗಂಗಾ ಕಿರಣ ಹೆಗಡೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಮಾವಿನ ಮನೆ ಪಂಚಾಯತಕ್ಕೆ ಸುಬ್ಬಣ್ಣ ಅಧ್ಯಕ್ಷ ಉಪಾಧ್ಯಕ್ಷೆ ಮಂಗಲ
ಯಲ್ಲಾಪುರ : ತಾಲೂಕಿನ ಮಾವಿನಮನೆ ಪಂಚಾಯತಕ್ಕೆ ಎರಡನೆ ಅವದಿಗೆ ಅಧ್ಯಕ್ಷರಾಗಿ ಶಾಸಕ ಹೆಬ್ಬಾರ್ ಬೆಂಬಲಿತರಾದ ಸುಬ್ರಾಯ ನಾರಾಯಣ ಭಟ್ಟ ಉಪಾಧ್ಯಕ್ಷೆಯಾಗಿ ಮಂಗಲ ಕೇಶವ ಕುಣಬಿ ಅವಿರೋಧವಾಗಿ ಆಯ್ಕೆಯಾದರು

ಮದನೂರ ಗ್ರಾಮ ಪಂಚಾಯತ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರ ತೆಕ್ಕೆಗೆ
ಯಲ್ಲಾಪುರ : ತಾಲೂಕಿನ ಮದನೂರ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲಿತ ಅಭ್ಯರ್ಥಿಗಳಾದ ರಾಜೇಶ ತಿನೇಕರ್ ಅಧ್ಯಕ್ಷರಾಗಿ ಹಾಗೂ ದೀಪಾ ಶಿಂಧೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 13 ಸದಸ್ಯ ಬಲದ ಪಂಚಾಯತಕ್ಕೆ ಪ್ರಕಾಶ್ ಶಾಪೂರಕರ ಮತ್ತು ರಾಜೇಶ್ ತಿನೇಕರ ಸಮಬಲದ 6+6 ಮತಗಳಿಸಿದ್ದು ಒಂದು ಮತ ಅಮಾನ್ಯಗೊಂಡಿತ್ತು ನಂತರ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ ತಿನೇಕರ್ ಆಯ್ಕೆಯಾದರು.
ಶಾಸಕ ಶಿವರಾಮ ಹೆಬ್ಬಾರ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿ, ಗೆಲುವಿಗೆ ಶ್ರಮಿಸಿದ ಸ್ಥಳೀಯ ಮುಖಂಡ ವಿಜಯ ಮಿರಾಶಿ, ಮಹೇಶ ದೇಸಾಯಿ, ವಿನಾಯಕ ತಿನೇಕರ್,ರಾಘವೇಂದ್ರ ಗೊಂದಿ ಸೇರಿದಂತೆ ಸ್ಥಳೀಯ ಪ್ರಮುಖರಿಗೆ ಗ್ರಾಮ ಪಂಚಾಯತ ಸದಸ್ಯರಿಗೆ ಕಾರ್ಯಕರ್ತರಿಗೆ ಅಭಿನಂದಿಸಿದ್ದಾರೆ.

ಹಿತ್ಲಳ್ಳಿ ಪಂಚಾಯತಕ್ಕೆ ಲಾಟರಿ ಅಧ್ಯಕ್ಷ ಸತ್ಯನಾರಾಯಣ ಡಿ ಹೆಗಡೆ. ಅವಿರೋದ ಉಪಾಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರೀ
ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ಚುನಾವಣೆ ಪ್ರಸನ್ನ ಗಜಾನನ ಭಟ್ ಮತ್ತು ಸತ್ಯನಾರಾಯಣ ದೇವೇಂದ್ರ ಹೆಗಡೆ ನಡುವೆ ಚುನಾವಣೆ ನಡೆಯಿತು. ಆರು ಸದಸ್ಯ ಬಲದ ಪಂಚಾಯದಲ್ಲಿ ಇಬ್ಬರಿಗು ಸರಿಸಮ ಮತಗಳು ಬಂದ ಕಾರಣ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು. ಎರಡನೆ ಅವಧಿಗೆ ಅಧ್ಯಕ್ಷರಾಗಿ ಸತ್ಯನಾರಾಯಣ ದೇವೇಂದ್ರ ಹೆಗಡೆ ಲಾಟರಿ ಎತ್ತುವ ಮೂಲಕ ಅಧ್ಯಕ್ಷರಾದರೆ ಮತ್ತು ಗೋಪಾಲಕೃಷ್ಣ ಶಾಸ್ತ್ರೀ ಅವಿರೋದವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ದೇಹಳ್ಳಿ ಪಂಚಾಯತಕ್ಕೆ ಕಳೆದ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರೆ ಈ ಅವಧಿಗು
ಯಲ್ಲಾಪುರ : ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತ್ ಎರಡನೆ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಜರುಗಿದ್ದು ವಿಶೇಷವೆಂದರೆ ಕಳೆದ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರೆ ಈ ಅವಧಿಗು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರಾಗಿ ಶ್ರೀಪತಿ ರಾಮಚಂದ್ರ ಮುದ್ದೆಪಾಲ್ ಉಪಾಧ್ಯಕ್ಷರಾಗಿ ಮಂಜುನಾಥ ವೆಂಕಟರಮಣ ಗುಮ್ಮಾನಿ ಪುನರಾಯ್ಕೆಯಾಗಿದ್ದಾರೆ.

ನಂದೊಳ್ಳಿ ಪಂಚಾಯತಕ್ಕೆ ಭವಾನಿ ಅಧ್ಯಕ್ಷೆ ನಾಗರತ್ನ ಉಪಾಧ್ಯಕ್ಷೆ
ಯಲ್ಲಾಪುರ:ತಾಲೂಕಿನ ನಂದೊಳ್ಳಿ ಗ್ರಾ.ಪಂ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಭವಾನಿ ಸಿದ್ದಿ ಹಾಗೂ ಉಪಾಧ್ಯಕ್ಷರಾಗಿ ನಾಗರತ್ನಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮಸಭೆ ಮುಂದೂಡಿದ್ದ ಕಂಪ್ಲಿ ಪಂಚಾಯತ್ ಚುನಾವಣೆಯು ಮುಂದೂಡಿ ತಾಲೂಕಿನಲ್ಲಿ ಚುನಾವಣೆ ನಡೆಯದ ಏಕೈಕ ಪಂಚಾಯತವಾಗಿದೆ.
ಯಲ್ಲಾಪುರ : ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ಒಂದಲ್ಲ ಒಂದುರೀತಿ ಸುದ್ದಿಯಲ್ಲದೆ ಕಳೆದ ಕೆಲ ದಿನಗಳ ಹಿಂದೆ ಇದೇ ಪಂಚಾಯತದ ಗ್ರಾಮಸಭೆ ಅಧಿಕಾರಿಗಳ ಗೈರಿಂದ ಮುಂದೂಡಲ್ಪಟ್ಟಿತ್ತು ಆದರೆ ಇದೀಗ ಗ್ರಾಮ ಪಂಚಾಯತ್ ಸದಸ್ಯರು ಸಮಯಕ್ಕೆ ಸರಿಯಾಗಿ ಬಾರದೆ ನಾಮಪತ್ರ ಸಲ್ಲಿಸದೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯದೆ ಮುಂದೂಡಿದ ಘಟನೆನಡೆದಿದೆ.
8 ಸದಸ್ಯ ಬಲದ ಕಂಪ್ಲಿ ಗ್ರಾಮ ಪಂಚಾಯತ್ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯದೆ ಕೊನೆಗೆ ಚುನಾವಣಾಧಿಕಾರಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ದಾಕ್ಷಾಯಿಣಿ ನಾಯ್ಕ ರಾಜ್ಯ ಚುನಾವಣ ಆಯೋಗಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ ಮುಂದಿನ ಆದೇಶ ಬಂದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ.







Prathidvani Yellapura