Breaking News

ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಎಂಬ ಬಡವರ ಆರೋಗ್ಯ ಮಂದಿರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಒಂದಷ್ಟು ಕೊರತೆಗಳ ನಡುವೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತ ಜನಸ್ನೇಹಿ ಆಸ್ಪತ್ರೆಯಾಗಿ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಉತ್ತಮ ಹೆಸರುಗಳಿಸಿ ಪರ ಊರುಗಳಿಂದ ಆರೋಗ್ಯ ಅರಸಿ ಬರುವಂತ ವ್ಯವಸ್ಥೆ ಕಲ್ಪಿಸುತ್ತಾ ಜನಮಾನಸದಲ್ಲಿ ಪ್ರಖ್ಯಾತಿ ಹೊಂದುತ್ತಿದೆ.


      ಕೋವಿಡ್ ನಂತರದ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿ ಹೊಂದಿ ಆರೋಗ್ಯ ಕ್ರಾಂತಿಯಾಯಿತು  ಆ ಸಂದರ್ಭದಲ್ಲಿ ಏನು ಇಲ್ಲದ ಆಸ್ಪತ್ರೆಗಳು ಎಲ್ಲವು ಇರುವಂತಹ ವಾತಾವರಣ ಸೃಷ್ಡಿಯಾಯಿತು.

ಸಾರ್ವಜನಿಕರ ಸೌಭಾಗ್ಯ ಎಂದರೆ ಆರೋಗ್ಯದ ವಿಚಾರದಲ್ಲಿ ಯಲ್ಲಾಪುರದ ತಾಲೂಕು ಆಸ್ಪತ್ರೆ ನಿರಂತರ ಅಭಿವೃದ್ದಿಗೆ ವೇದಿಕೆಯಾಯಿತು ಒಂದಲ್ಲ ಒಂದು ಹೊಸ ವ್ಯವಸ್ಥೆ ಅಳವಡಿಕೆಯಾಗುತ್ತಲೆ ಸಾಗಿತು. ಅದಕ್ಕೆ ಮೂಲ ಕಾರಣ ಅಂದಿನ ಸಚಿವರಾಗಿದ್ದ ಅರಬೈಲ್ ಶಿವರಾಮ ಹೆಬ್ಬಾರ್ ಇದನ್ನು ಜನರು ಪಕ್ಷಾತೀತವಾಗಿ ಒಪ್ಪುತ್ತಾರೆ.


    ಇದರಲ್ಲಿ ಕೇವಲ ಸರ್ಕಾರ ಮಾತ್ರವಲ್ಲದೆ ಜನಪ್ರತಿನಿಧಿಗಳ ಇಚ್ಚಾ ಶಕ್ತಿ, ಖಾಸಗಿ ಕಂಪನಿಗಳ ಮತ್ತು ಸಮಾಜ ಸೇವಕರ ವಿಶೇಷ ಕಾಳಜಿಯಿಂದ ಸಾರ್ವಜನಿಕ ಆಸ್ಪತ್ರೆ ಒಂದು ಶ್ರದ್ದಾಕೇಂದ್ರವಾಗಿ ದೇವಾಲಯದ ಭಾವ ಮೂಡುವಂತಾಯಿತು.


    ಮದ್ಯಮ ಮತ್ತು ತೀರ ಬಡವರಿಗೆ ಯಾವುದೆ ರೋಗ ರುಜಿನಗಳು ಬಂದರೆ ಸರ್ಕಾರಿ ಆಸ್ಪತ್ರೆಯೆ ಧನ್ವಂತರಿ ದೇವಾಲಯವಾಗಿತ್ತು ಕಾರಣ ಖಾಸಗಿ ಆಸ್ಪತ್ರೆಗಳ ಗಗನದೆತ್ತರದ ಬಿಲ್ಲು ಕಟ್ಟಲು ಸಾದ್ಯವಾಗದೆ ಅಷ್ಟೊಇಷ್ಟೊ ರೋಗವಾಸಿಯಾಗಲು ಸರ್ಕಾರಿ ಆಸ್ಪತ್ರೆಗೆ ಬರುವವರಿದ್ದರು ಆದರೆ ಈಗ ಸರ್ಕಾರಿ ಆಸ್ಪತ್ರೆ ಎಂದರೆ ಬಡ ಮಧ್ಮವರ್ಗದ ಜನರು ಮಾತ್ರವಲ್ಲ ಶ್ರೀಮಂತರು ಮತ್ತು ಉತ್ತಮ ಆರೋಗ್ಯವನ್ನು ಅರಸಿ ಬರುವವರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಕಡೆ ಮುಖ ಮಾಡುತ್ತಿದ್ದಾರೆ


    ಆಸ್ಪತ್ರೆ ವಾತಾವರಣವೆ ರೋಗಿಯ ಮಾನಸಿಕ ದೃಡತೆ ತುಂಬುವಂತಿದೆ ಸ್ನೇಹ ಮತ್ತು ಪ್ರೀತಿ ತುಂಬಿದ ಮಾತು ನಡವಳಿಕೆಯೊಂದಿಗೆ ವೈಧ್ಯರು ಮತ್ತು ಸಿಬ್ಬಂದಿಗಳು ರೋಗಿಗಳ ಅಥವ ಅವರ ಸಂಬಂಧಿಕರೊಂದಿಗೆ ನಡೆದು ಕೊಳ್ಳುವುದರಿಂದ ಆತ್ಮಸ್ಥೈರ್ಯ ಮತ್ತಷ್ಟು ಆಪ್ತವಾಗಲು ಕಾರಣವಾಗಿದೆ.


     ಎಲ್ಲವು ಇದೆ ಎನ್ನುವುದರ ಜೊತೆಯಲ್ಲಿ ಒಂದಷ್ಟು ಕೊರತೆಗಳು ಇವೆ. 100 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ  ಒಟ್ಟು ವೈದ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ 84 ಮಂದಿ ಇರಬೇಕು ಆದರೆ 46 ಮಂದಿ ಮಾತ್ರ ಇದ್ದು 38 ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. 5 ಮಂದಿ,ಡಾಕ್ಟರ್, 28 ಮಂದಿ ಗ್ರೂಪ್ ಡಿ, 1 ಫಾರ್ಮಸಿ  1 ಸ್ಟಾಫ್ ನಸ್೯, 1 ಎಫ್.ಡಿ.ಎ, 2 ಎಸ್.ಡಿ.ಎ , 1 ಸೂಪರಿಂಟೆಂಡೆಂಟ್ ಭರ್ತಿಯಾಗಬೇಕಿದೆ. ಎಲುಬು ಕೀಲು ತಜ್ಞರಿಗೆ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗುವ ಸೀ ಆಮ್೯ ಮಷಿನ್ ಅವಶ್ಯವಿದೆ. ಡಯಾಲಿಸೀಸ್ ಮಷಿನ್ ಮತ್ತೊಂದು ನೀಡಿದರೆ ಉತ್ತಮ ಹಾಗು ಈಗಿನ ಮಷಿನ್ ವ್ಯಾಕ್ಯೂಮ್ ಸ್ಪೇಸ್ ದೊಡ್ಡದಿದ್ದರೆ ಅನುಕೂಲಕರವಾಗಿತ್ತು. ಇದೆಲ್ಲವು ಒಮ್ಮೆಲೆ ಆಗಬೇಕೆಂದೇನು ಇಲ್ಲ ಇಷ್ಟೆಲ್ಲಾ ವ್ಯವಸ್ಥೆ ಆಸ್ತ್ರೆಗೆ ಅಳವಡಿಸಿದರೆ ಬಡವರ ಭಾಗ್ಯದ ಬಾಗಿಲು ತರೆದಂತೆ        ವೈದ್ಯರ ವಿಷಯವೆಂದರೆ ಫಿಸಿಷಿಯನ್, ಇ.ಎನ್.ಟಿ , ಚರ್ಮರೋಗ ತಜ್ಞ  ಬಂದರೆ  ಯಾವ ಅತ್ಯಾಧುನಿಕ  ಖಾಸಗಿ ಆಸ್ಪತ್ರೆಗು ಕಡಿಮೆ ಇಲ್ಲ.


    ಉತ್ತಮ ಗುಣಮಟ್ಟದ  ತಪಾಸಣ ಯಂತ್ರಗಳು ಡಯಲಿಸೀಸ್ ಮಷಿನ್ , ಸೋಲಾರ್ ಆಧರಿತ ಹೆರಿಗೆ ಕೋಣೆ, ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, ಸಾಕಷ್ಟು ಆಂಬುಲೆನ್ಸ್, ಇ.ಸಿಜಿ ಅಲ್ಟ್ರಾಸೌಂಡ್, ಎಕ್ಸರೆ, ರಕ್ತಪರೀಕ್ಷೆ, ಇನ್ನು ಹೆಚ್ಚಿನರೀತಿಯ ಸೌಕರ್ಯಗಳು ನಾಗರಿಕ ಸೇವೆಗೆ ಸಿದ್ದವಿದೆ.


       ಆಸ್ಪತ್ರೆ ಆವರಣದಲ್ಲಿ ಶುಭ್ರವಾದ ಗಾಳಿ ಬೆಳಕು ಶುದ್ದವಾದ ನೀರಿನ ಪೂರೈಕೆ‌ ವಾಯು ಮಾಲಿನ್ಯ ವಾಗದಂತೆ ಸುತ್ತಲು ಹಸಿರು ವನ ನಿರ್ಮಾಣ ಎಲ್ಲರೊಂದಿಗೆ ಆತ್ಮೀಯತೆಯೊಂದಿಗದ ಸಹಕಸರ ಮನೋಭಾವದ ಆಂಬುಲೆನ್ಸ್ ಚಾಲಕರು ಹೀಗೆ ಎಲ್ಲವು ಆಸ್ಪತ್ರೆಗೆ ಉತ್ತಮ ಹೆಸರು ಬರಲು ಕಾರಣವಾಗಿದೆ.


     ಪ್ರತಿ ನಿತ್ಯ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಪರೀಕ್ಷೆಗಳಿಗಾಗಿ ನೂರಾರು ಮಂದಿ ನಾಗರಿಕರು ಸಾಲುಗಟ್ಟಿ ನಿಂತಿರುವುದನ್ನು ನೋಡಿದರೆ ಹೇಳಬಹುದು ಖಾಸಗಿ ಆಸ್ಪತ್ರೆಗಳು ಎಷ್ಟೇಅಂದ ಚಂದ ಆಕರ್ಷಣೆ ಮಾಡಿ ಅತ್ಯಾಧುನಿಕ ಸೌಲಭ್ಯ ನೀಡಿದರು ಬಡ ಮಧ್ಯಮವರ್ಗದ ಪಾಲಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಭರವಸೆಯ ಆಶಾ ಕಿರಣ.


      ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆ ನಮ್ಮ ನಿಮ್ಮೆಲ್ಲರ ಸ್ವತ್ತು ಅದನ್ನು ಅಚ್ಚುಕಟ್ಟಾಗಿ ಶುಭ್ರವಾಗಿ ಬಳಸಬೇಕು. ಸಣ್ಪಪುಟ್ಟ ಸಮಸ್ಯೆಗಳನ್ನು ಸುದಾರಿಸಿಕೊಂಡು ಹೋಗಬೇಕಿದೆ. ಸರ್ಕಾರಗಳು ಯಾವುದೆ ಬರಲಿ ತೆರಿಗೆ ಹಣ ನಮ್ಮದೆ ಬಳಸುವುದರಿಂದ ಎಲ್ಲಾ ವ್ಯವಸ್ಥೆಗಳು ನಮ್ಮದೆ ಸದ್ಬಳಕೆ ಮಾಡಿಕೊಂಡು ಸಾಗಬೇಕಿದೆ ಖಾಸಗಿ ಆಸ್ಪತ್ರೆಗಳು ಬೇಡ ಎಂದಲ್ಲ ಬಡವರಿಗೆ ಕೈಗೆಟುಕದ ದುಬಾರಿ ಆರೋಗ್ಯಕ್ಕಿಂತ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುಬ ಜವಾರಿ ಆರೋಗ್ಯವೆ ಮೇಲು ಎಂಬುದು‌ಹಲವರ ಅಭಿಪ್ರಾಯವಾಗಿದೆ.


    ಸರ್ಕಾರಿ ಆಸ್ಪತ್ರೆ ಇಷ್ಟೊಂದು ಸ್ವಚ್ಚತೆ ಕಾಪಾಡಿಕೊಂಡು ಉತ್ತಮ ಸಿಬ್ಬಂದಿಗಳ ಸೇವೆಯೊಂದಿಗೆ ಪರ ಊರಿನ ನಾಗರಿಕರನ್ನು ಸೆಳೆಯುವಷ್ಟು ಉತ್ತಮ ಚಿಕಿತ್ಸೆ ನೀಡುವ ವೈದ್ಯರನ್ನು ಹೊಂದಿದ್ದು ಸ್ನೇಹ,ಪ್ರೀತಿ ,ಸಂಯಮದಿಂದ ನೊಂದು ಬಂದ ಜನರೊಂದಿಗೆ ಸರಳತೆಯಿಂದ ನಡೆದುಕೊಳ್ಳುವ ಸಿಬ್ಬಂದಿಗಳಿಂದ ಅತ್ಯಾಧುನಿಕ ಉಪಕರಗಳ ಸೇವೆಯೊಂದಿಗೆ ಉತ್ತಮ ಗಾಳಿ ಬೆಳಕು ನೀರು ಪರಿಸರ ಒಳಗೊಂಡ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ನಿಜವಾಗಿಯು ಬಡವರ ಪಾಲಿನ ಆರೋಗ್ಯ ದೇಗುಲವಾಗಿದೆ.
ನಿರಂಜನ ಗೌಡ
ರೋಗಿಯ ಸಂಬಂಧಿ
ಹಾಸನ

ಸರ್ಕಾರದ ಸವಲತ್ತುಗಳು ಕಾಲಕಾಲಕ್ಕೆ ಬೇಡಿಕೆಯಂತೆ ಪೂರೈಕೆಯಾಗಿ ಉತ್ತಮ ಆಡಳಿತ ಯಂತ್ರ ವೈದ್ಯರ ತಂಡ ಮತ್ತು ಆರೋಗ್ಯ ಸಿಬ್ಬಂದಿಗಳ ಸಹಕಾರ ಗ್ರೂಪ್ ಡಿ ನೌಕರರ ಸ್ವಚ್ಚತಾ ಕಾರ್ಯ, ಆಂಬುಲೆನ್ಸ್ ಚಾಲಕರ ಸಾರ್ವಜನಿಕರೊಂದಿಗಿನ ಸಂಪರ್ಕ ಉತ್ತಮವಾಗಿದ್ದು ಸಾರ್ವಜನಿಕರ ಸಹಕಾರ ಉತ್ತಮವಾಗಿದ್ದರೆ ಉತ್ತಮ ಸೇವೆ ನೀಡಲು ಸಾದ್ಯವಿದೆ. ವಿಶೇಷವಾಗಿ ಕೋವಿಡ್ ಸಂದರ್ಭದಿಂದ ಅಂದಿನ ಶಾಸಕರು ಸಚಿವರು ಆಗಿದ್ದ ಶಿವರಾಮ ಹೆಬ್ಬಾರ್ ಅವರು ಆಸ್ಪತ್ರೆಗೆ ಬೇಕಾದ ವ್ಯವಸ್ಥೆಯನ್ನು ಖಾಸಗಿಯಾಗಿ ಮತ್ತು ಸರ್ಕಾರದ ಮೇಲೆ ಒತ್ತಡ ತಂದು ಅನುಷ್ಟಾನಗೊಳಿಸಿದ ಪರಿಣಾಮ ಆಸ್ಪತ್ರೆ ಇಷ್ಟೊಂದು ಮೇಲ್ದರ್ಜೆಗೇರಲು ಕಾರಣವಾಗಿದೆ.
ಡಾ,ನರೇಂದ್ರ ಪವಾರ್
ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ
ತಾಲೂಕು ಆರೋಗ್ಯಸಧಿಕಾರಿ, ಯಲ್ಲಾಪುರ

ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ಆಯಾ ಸರ್ಕಾರದ ಅವಧಿಯಲ್ಲಿ ಆ ಕ್ಷೇತ್ರದ ಜನಪ್ರತಿನಿಧಿ ಜನತೆಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಸದಾ ಕಾಲ ಚಿರಸ್ಥಾಯಿಯಾಗಿ ನಿಲ್ಲುತ್ತದೆ ಅಂತಹ ಕಾರ್ಯಗಳನ್ನು ಪಕ್ಷಾತೀತವಾಗಿ ಬೆಂಬಲಿಸಿ ಪ್ರತ್ಸಾಹಿಸಬೇಕು. ಸದ್ಯ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಕೋವಿಡ್ ಪೂರ್ವದಲ್ಲಿ ಜನರ ಸಂಪರ್ಕ ಅಷ್ಟಾಗಿ ಇರಲಿಲ್ಲ ಕೊವಿಡ್ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ಅರಬೈಲ್ ಶಿವರಾಮ ಹೆಬ್ಬಾರ್ ಏನೆಲ್ಲಾ ಸೌಕರ್ಯಗಳು ಬೇಕೊ ಅವೆಲ್ಲವನ್ನು ಅನುಷ್ಠಾನಗೊಳಿಸಿದರು ನಂತರ ಸಚಿವರಾದಮೇಲೆ ಜಿಲ್ಲೆಯ ಆರೋಗ್ಯ ಕ್ಷೇತ್ರದ ಚಿತ್ರಣವೆ ಬದಲಾಗಿಹೋಗಿತ್ತು ಅದರಲ್ಲೂ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ವಿಶೇಷ ವ್ಯವಸ್ಥೆ ಅಳವಡಿಸಿಕೊಂಡು ಜನಮಾನಸದಲ್ಲಿ ಹೆಸರುಗಳಿಸಿ ಉತ್ತಮ ಸೇವೆ ದೊರಕುವಂತಾಯಿತು.ಇನ್ನಷ್ಟು ಆಧುನಿಕ ವ್ಯವಸ್ಥೆ ಅನುಷ್ಠಾನಗೊಂಡರೆ ಇನ್ನಷ್ಟು ವ್ಯವಸ್ಥೆ ಉತ್ತಮವಾಗಲಿದೆ. ಸತೀಶ್ ಶಿವಾನಂದ ನಾಯ್ಕ್, ಪಟ್ಟಣ ಪಂಚಾಯತ ಸದಸ್ಯ, ಮಂಜುನಾಥ ನಗರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *