



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : 2023-24 ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಒಟ್ಟು 118 ವಿದ್ಯಾರ್ಥಿಗಳಲ್ಲಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 53 ಉನ್ನತ ಶ್ರೇಣಿ, 51 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಆಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 98%, ವಾಣಿಜ್ಯ ವಿಭಾಗದಲ್ಲಿ 100% ಹಾಗೂ ಕಲಾ ವಿಭಾಗದಲ್ಲಿ 81% ಫಲಿತಾಂಶ ಬಂದಿದ್ದು ಕಾಲೇಜಿನ ಒಟ್ಟಾರೆ ಫಲಿತಾಂಶ 95% ಆಗಿರುತ್ತದೆ. ಸಂಸ್ಕೃತದಲ್ಲಿ 3, ಲೆಕ್ಕಶಾಸ್ತ್ರದಲ್ಲಿ 2, ಸಂಖ್ಯಾಶಾಸ್ತ್ರದಲ್ಲಿ 1, ಅರ್ಥಶಾಸ್ತ್ರದಲ್ಲಿ 2, ಗಣಿತದಲ್ಲಿ 4, ಜೀವಶಾಸ್ತ್ರದಲ್ಲಿ 3, ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಪ್ರಾರ್ಥನಾ ಭಟ್ಟ ಜಿಲ್ಲೆಗೆ 3 ಹಾಗೂ ರಾಜ್ಯಕ್ಕೆ 6 ನೆ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಕಾಲೇಜಿನಲ್ಲಿ 15 ವಿಷಯಗಳನ್ನು ಬೋಧಿಸುತ್ತಿದ್ದು 11 ವಿಷಯಗಳಲ್ಲಿ 100 ಕ್ಕೆ 100 ಫಲಿತಾಂಶ ಬಂದಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಲಕ್ಷ್ಮಣ ಶಾನಭಾಗ , ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರೂ ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಎಲ್ಲಾ ಉಪನ್ಯಾಸಕ, ಶಿಕ್ಷಕ ವರ್ಗದವರೂ ಹಾಗೂ ಶಿಕ್ಷಕೇತರ ಸಿಬ್ಬಂದಿಗಳೂ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಿದ್ದಾರೆ.

ವಾಣಿಜ್ಯ ವಿಭಾಗ – ಪ್ರಾರ್ಥನಾ ಭಟ್ಟ ಪ್ರಥಮ 591/600 = 98.50% , ಶ್ರೇಯಾ ಭಾಸ್ಕರ ಭಟ್ಟ ದ್ವಿತೀಯ 580/600= 96.67% , ರಘುನಾಥ ಜಿ ಭಟ್ಟ ತೃತೀಯ 577/600= 96.16% ಸ್ಥಾನ;ಪಡೆದಿರುತ್ತಾರೆ.

ವಿಜ್ಞಾನ ವಿಭಾಗ – ನಯನಾ ಭಟ್ಟ ಪ್ರಥಮ 586/600= 97.67% , ಅದಿತಿ ವಿ ಭಟ್ಟ ದ್ವಿತೀಯ 576/600= 96% , ಮೇಧಾ ಡಿ ಹೆಗಡೆ ತೃತೀಯ 575/600= 95.83% ಸ್ಥಾನ ಪಡೆದಿರುತ್ತಾರೆ.

ಕಲಾ ವಿಭಾಗ – ಓಂಕಾರೇಶ್ವರಿ ಡಿ ಮಿರಾಶಿ ಪ್ರಥಮ 547/600= 91.17% , ಪ್ರಜಿತಾ ಪಿ ವೆಲಿಪ್ ದ್ವಿತೀಯ 517/600 = 86.17% , ಶ್ವೇತಾ ಹುಣಸಗಿ ತೃತೀಯ 512/600= 85.33% ಸ್ಥಾನ ಪಡೆದಿರುತ್ತಾರೆ.



Prathidvani Yellapura