




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚೀಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 86.30% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 100 % ಫಲಿತಾಂಶ ದಾಖಲಾಗಿದ್ದು 30 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ.

ಲಕ್ಷಿ ರಾ ಭಂಡಾರಿ 600 ಕ್ಕೆ 536 ಅಂಕಗಳಿಸಿ ಪ್ರಥಮ, 528 ಅಂಕಗಳೊಂದಿಗೆ ನಾಗರತ್ನ ಕುಣಬಿ ದ್ವಿತೀಯ, ಮಂಜುನಾಥ ನಾಯ್ಕ 504 ಅಂಕ ಪಡೆದು ತೃತಿಯ ಸ್ಥಾನ ಗಳಿಸಿರುತ್ತಾರೆ.

ಕಲಾ ವಿಭಾಗದಲ್ಲಿ 73.03 % ಫಲಿತಾಂಶ ದಾಖಲಾಗಿದ್ದು 26 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಧಿಕಾ ಮರಾಠಿ 600 ಕ್ಕೆ 558 ಅಂಕಗಳಿಸಿ ಪ್ರಥಮ, 538 ಅಂಕಗಳೊಂದಿಗೆ ಮಹಾಲಕ್ಷ್ಮಿ ಜಿ ನಾಯ್ಕ ದ್ವಿತೀಯ, ತುಕಾರಾಂ ಡೋಯಿಪೊಡೆ 481 ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 82.35 ಫಲಿತಾಂಶ ದಾಖಲಾಗಿದ್ದು 17 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾಯಾ ಭಾಸ್ಕರ ಹೆಗಡೆ 547 ಅಂಕಗಳೊಂದಿಗೆ ಪ್ರಥಮ, 541 ಅಂಕಗಳೊದಿಗೆ ವೃಂದಾ ಶೇಟ ದ್ವಿತೀಯ, 538 ಅಂಕಗಳೊಂದಿಗೆ ಛಾಯಾ ಭಾಸ್ಕರ ಹೆಗಡೆ ತೃತೀಯ ಸ್ಥಾನ ಗಳಿಸಿದ್ದು ಪ್ರಾಂಶುಪಾಲರು, ಅದ್ಯಾಪಕ ವೃಂದ, ಕಾಲೇಜು ಅಭಿವೃದ್ಧಿ ಸಮಿತಿ ಪಧಾದಿಕಾರಿಗಳು ಸದಸ್ಯರು ಹಾಗೂ ಊರ ನಾಗರೀಕರು ಪ್ರಶಂಸಿಸಿದ್ದಾರೆ.



Prathidvani Yellapura