
ಯಲ್ಲಾಪುರ, ಮಾರ್ಚ್ 11: ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಕಾಳಮ್ಮನಗರ ಯೂತ್ ಕ್ಲಬ್ ಮತ್ತು ದೇವಸ್ಥಾನದ ವತಿಯಿಂದ ಮಂಗಳವಾರ ಆಯೋಜಿಸಲಾದ ರಸಮಂಜರಿ ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಸಮಾಜದಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾಳಮ್ಮದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಉದಯ ನಾಯ್ಕ, ತ್ರೀಶೂಲ ಬಳಗದ ಅಧ್ಯಕ್ಷರಾದ ನರೇಂದ್ರ ಪಾಟೀಲ್, ಪ್ರಮುಖರಾದ ಪ್ರಸಾದ ಹೆಗಡೆ, ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಸಂಜೀವಕುಮಾರ ಹೊಸ್ಕೇರಿ, ಕಾಳಮ್ಮನಗರ ಯೂತ್ ಕ್ಲಬ್ ಅಧ್ಯಕ್ಷರಾದ ನಾಗರಾಜ ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಂತರ ಇದೇ ವೇದಿಕೆಯಲ್ಲಿ ಯಲ್ಲಾಪುರದ ಹೆಸರಾಂತ ಗಾಯಕ ಮನೋಜ್ ಪಾಟೀಲ್ ಸಾರಥ್ಯದಲ್ಲಿ ” ಮನೋಜ್ ಎಂಟ್ರಟೈನರ್” ಅರ್ಪಣೆಯಲ್ಲಿ ಅಮೋಘ ರಸಮಂಜರಿ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.




Prathidvani Yellapura