
ಪ್ರತಿಧ್ವನಿಯಲ್ಲಾಪುರ : ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಆಡಳಿತ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನಿಯ. ಎರಡು ಸಾವಿರ ಸದಸ್ಯರ ಹಕ್ಕನ್ನು ಮೊಟಕು ಮಾಡಿ, ಹಣವಂತರಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ರೈತರ ದುರಂತವಾಗಿದೆ.. ಇವರನ್ನು ತಕ್ಷಣದಿಂದ ತೆಗೆದುಹಾಕಬೇಕು ಎಂದು ಟಿ.ಎಂ.ಎಸ್.ನ ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಆಗ್ರಹಿಸಿದ್ದಾರೆ.

ಅವರು, ಮಂಗಳವಾರ ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಈ ಕುರಿತು ಬುಧವಾರ ಸಹಕಾರಿ ಸಂಘದ ಎದುರು ಪ್ರತಿಭಟನೆ ನಡೆಸುವುದಲ್ಲದೇ, ನಮ್ಮ ಪ್ರತಿಭಟನೆಗೆ ಹಿರಿಯ ಅಧಿಕಾರಿಗಳು ಸ್ಪಂದಿಸದಿದ್ದರೆ ಗುರುವಾರ ಶಿರಸಿ ರಸ್ತೆಯ ತಡೆ ಚಳುವಳಿ ನಡೆಸುತ್ತೇವೆ. ಆಡಳಿತ ಮಂಡಳಿ ನಿರ್ವಹಿಸಬೇಕಾದ ಕಾರ್ಯವನ್ನು ಆಡಳಿತಾಧಿಕಾರಿ ಮಾಡುತ್ತಿರುವುದು ತೀರಾ ಅಪರಾಧ. ಇದು ಅಧಿಕಾರಿಯ ವ್ಯಾಪ್ತಿ ಮೀರಿ ನಡೆದಂತಾಗಿದೆ. ಆದ್ದರಿಂದ ಅವರನ್ನು ವಜಾಗೊಳಿಸಬೇಕು. ಸಂಸ್ಥೆಯನ್ನು ಉಳಿಸುವ ಬಗ್ಗೆ ನಮ್ಮ ಈ ಹೋರಾಟ. ನಮ್ಮ ಸಹಕಾರಿ ಸಂಘದಲ್ಲಿ ಮಾರ್ಚ್ ಕೊನೆಗೆ ರಿನೆವಲ್ ಆಗದೇ ರೈತರು ತೊಂದರೆಗೆ ಸಿಲುಕುವುದಲ್ಲದೇ ಏಪ್ರಿಲ್‌ನಲ್ಲ ಕೆ.ಡಿ.ಸಿ.ಸಿ. ಬ್ಯಾಂಕ್‌ನಲ್ಲೂ ರಿನೆವಲ್ ಆಗದೇ ಸಂಘ ತೊಂದರೆಗೆ ಸಿಲುಕಲಿದೆ. ನಮ್ಮ ಅನೇಕ ಸದಸ್ಯರಿಗೆ ಆಸ್ಪತ್ರೆ, ಮಂಗಲಕಾರ್ಯ ಸೇರಿದಂತೆ ಹಲವಾರು ತುರ್ತು ಕಾರ್ಯಗಳಿಗೆ ಹಣ ಬೇಕಾಗುತ್ತದೆ. ಅಂತಹವರು ಇಂದು ಖಾಸಗಿ ಸಾಲಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ಜನಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪ್ರಮೋದ ಹೆಗಡೆ, ಹರಿಪ್ರಕಾಶ ಕೋಣೆಮನೆ, ಗೋಪಾಲಕೃಷ್ಣ ಗಾಂವ್ಕರ, ಜಿ.ವಿ.ಹೆಗಡೆ, ವಿ.ಎನ್.ಭಟ್ಟ ಬೆಳ್ಳಿ, ವೆಂಕಟ್ರಮಣ ಕಿರುಕುಂಭತ್ತಿ, ಸುಬ್ಬಣ್ಣ ಬೋಳ್ಮನೆ, ನಾಗರಾಜ ಕವಡಿಕೆರೆ, ಗಣಪತಿ ಮಾನಿಗದ್ದೆ, ಅಪ್ಪು ಆಚಾರಿ, ರಾಜೇಂದ್ರ ಗೌಡರ್ ಮತ್ತಿತರರು ಉಪಸ್ಥಿತರಿದ್ದರು.




Prathidvani Yellapura