Breaking News

ಮಾರುಕಟ್ಟೆಗೆ ಹಣ್ಣಿನರಾಜ ಮಾವು ಆಗಮನ – ಹಳದಿ ಸುಂದರಿ ನಿಂಬೆ ಬೆಲೆ ತಲುಪಿದೆ ಗಗನ – ದಾಹ ತಣಿಸುವ ಎಳನೀರಿಗು ಬರಲಿದೆ ಬರ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಪ್ರತಿ ರವಿವಾರ ನಡೆಯುವ ಸಂತೆಗೆ ಹಣ್ಣಿನ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣಿನ ಆಗಮನವಾಗಿದೆ.


ಸೇಂದುಲ ಜಾತಿಯ ಮಾವಿನ ಹಣ್ಣು ಕೆ.ಜಿ ಗೆ 200 ನಂತೆ ಮಾರಾಟವಾಗುತ್ತಿತ್ತು ವರ್ಷದಲ್ಲಿ ಪ್ರಥಮವಾಗಿ ಕೊಂಡು ತಿನ್ನುವ ತವಕದಲ್ಲಿ ಗ್ರಾಹಕರು ಮಾವಿನಹಣ್ಣನ್ನು ಇಷ್ಟಪಟ್ಟು ಕೊಂಡರು.


ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ ಹೆಚ್ಚಿದ್ದು ದಾಹ ನೀಗಿಸುವ ಪ್ರಮುಖ ಪೇಯ ಎಳನೀರು ಸದ್ಯ ಇನ್ನೂ 40 ರಲ್ಲೆ ಬಿಕರಿಯಾಗುತ್ತಿದ್ದು ಮಾಲು ಸಿಗದೆ ಪರದಾಡಿ ಎಲ್ಲೆಲ್ಲಿಂದಲೊ ಹೊತ್ತು ತಂದು ಮಾರಾಟಮಾಡುತ್ತಿದ್ದಾರೆ ಇನ್ನೊಂದು ವಾರದಲ್ಲಿ ಎಳನೀರಿನ ಅಭಾವ ಕಾಡಲಿದ್ದು ಆಗ 50 ರುಪಾಯಿಗೆ ಮಾರಬೇಕಾದ ಪರಿಸ್ಥಿತಿ ಇದೆ ಎನ್ನುತ್ತಿದ್ದಾರೆ ಯಲ್ಲಾಪುರದ ಎಳನೀರು ಮಾರಾಟಗಾರರು.


ಹಳದಿ ಸುಂದರಿ ಎಂದೇ ಹೆಸರಾದ ಬಿಸಿಲು ಕಾಲ ಬರುತ್ತಿದ್ದಂತೆ ತನ್ನ ಬೆಲೆ ಹೆಚ್ಚಿಸಿಕೊಳ್ಳುವ ನಿಂಬೆಹಣ್ಣು ಉತ್ತಮ ಗಾತ್ರದ್ದು 12 ರುಪಾಯಿಗೆ ಒಂದು ಮಾರಾಟವಾಗುತ್ತಿದೆ. ಅದರ ಪರಿಸ್ಥಿತಿಕೂಡ ಭಿನ್ನವಾಗಿಲ್ಲ. ಮಾರಾಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಾಲು ಸಿಗದೆ ಕೆಲವೇ ದಿನಗಳಲ್ಲಿ 15 ರುಪಾಯಿ ತಲುಪಿದರೆ ಆಶ್ಚರ್ಯ ಪಡಬೇಕಿಲ್ಲ ಎಂಬುದು ವರ್ತಕರ ಮಾತಾಗಿದೆ.


ಇನ್ನುಳಿದಂತೆ ಕಲ್ಲಂಗಡಿ, ಖರ್ಬೂಜ,ಪಪ್ಪಾಯ, ಕಬ್ಬಿನ ಹಾಲು, ಮಜ್ಜಿಗೆ ಬಿಸಿಲಿನತಾಪಕ್ಕೆ ಹೆಚ್ಚಾಗಿ ಮಾರಾಟವಾಗುತ್ತಿದೆ ಸದ್ಯ ಬೆಲೆ ಮೊದಲಿನಂತೆ ಇದೆ.


ಒಟ್ಟಿನಲ್ಲಿ ರಣ ಬಿಸಿಲಿಗೆ ಭೂಮಿ ಸುಡು ಕೆಂಡವಾಗಿದ್ದು ಮಳೆರಾಯನ ಆಗಮನಕ್ಕಾಗಿ ಆಗಸದ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ ಇಲ್ಲವಾದರೆ ಕುಡಿಯುವ ನೀರಿಗು ಬರಬರುವ ಸಾದ್ಯತೆ ಇದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *