
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಈ ಹಿಂದೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ನಾನ ಕಡೆ ಅಲೆದು ಕೆಲಸ ಹುಡುಕಬೇಕಿತ್ತು. ಕಾಲ ಬದಲಾಗಿದೆ ಪ್ರತಿಭೆಗಳನ್ನು ಅರಸಿ ಪ್ರತಿಷ್ಠಿತ ಕಂಪನಿಗಳು ನೀವಿದ್ದಲ್ಲಿಗೆ ಬರುತ್ತಿವೆ ಇನ್ನು ಅವಕಾಶಗಳನ್ನು ಬಾಚಿಕೊಳ್ಳುವುದು ನಿಮ್ಮ ಆಯ್ಕೆಯಾಗಿದೆ. ಇಂತಹ ಸಾರ್ಥಕ ಕಾರ್ಯ ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ ಎಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್ ನಿವೃತ್ತ ಪ್ರಾಂಶುಪಾಲರಾದ ಶ್ರೀರಂಗ ಕಟ್ಟಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮಾರ್ಗದರ್ಶನ ಮತ್ತು ಪ್ರೋತ್ಸಾಹದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.


18 ಕ್ಕು ಹೆಚ್ಚು ಕಂಪನಿಗಳ ಅಡಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು 600 ಕ್ಕು ಅಧಿಕ ಮಂದಿ ಉದ್ಯೋಗ ಆಕಾಂಕ್ಷಿಗಳು ಆನ್ ಲೈನ್ ನಲ್ಲಿ ನೊಂದಾಯಿಸಿಕೊಂಡಿದ್ದರಲ್ಲದೆ ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲೆ ನೊಂದಾಯಿಸಿ ಮೇಳದಲ್ಲಿ ಹಾಜರಾಗಿದ್ದರು.

ಉದ್ಯೋಗ ಮೇಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಬೇಕಿತ್ತು ಬೆಂಗಳೂರಿನ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆಯಿಂದ ಶಾಸಕರ ಅನುಪಸ್ಥಿತಿಯಲ್ಲಿ ಅವರ ಶುಭ ಹಾರೈಕೆಯಲ್ಲಿ ಉದ್ಯೋಗ ಮೇಳ ಯಶಸ್ವಿಯಾಗಿ ನೆರವೇರಿತು.

ಕ್ಷೇತ್ರದ ಶಾಸಕರಾಗಿ ಸದಾ ಅಭಿವೃದ್ಧಿ ಚಿಂತನೆಯಲ್ಲಿ ತೊಡಗಿರುವ ಶಾಸಕ ಶಿವರಾಮ ಹೆಬ್ಬಾರ್ ಸೂಚನೆಯಂತೆ ಅವರ ಮಾರ್ಗದರ್ಶನದಲ್ಲಿ ನಿರುದ್ಯೋಗ ಯುವಕರಿಗೆ ನಮ್ಮ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಪಹುಕ್ತವಾದಂತಹ ಉದ್ಯೋಗ ಮೇಳ ಆಯೋಜನೆಯಾಗಿದೆ.ಯಲ್ಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂತಹ ಉದ್ಯೋಗ ಮೇಳ ಆಯೋಜನೆಯಸಗಿದ್ದು ಸಾಕಷ್ಟು ವಿದ್ಯಾರ್ಥಿಗಳ ಭಾಗ್ಯದ ಬಾಗಿಲು ತೆರೆಯಲಿದೆ. ಮುಂದೆಯು ಇಂತಹ ಮೇಳಗಳು ಇನ್ನಷ್ಟು ಆಯೋಜನೆಗೊಂಡು ನಿರುದ್ಯೋಗಿ ವಿದ್ಯಾವಂತ ಯುವಜನಾಂಗಕ್ಕೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ದೊರೆಯಲಿ ಎಂದು ಕಾಲೇಜಿನ ಪ್ರಾಂಶುಪಾಲ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್.ಭಟ್ಟ ಹೇಳಿದರು.

ಈ ಸಂದರ್ಭದಲ್ಲಿ ಉದ್ಯೋಗ ಮೇಳಕ್ಕೆ ಕೈಜೋಡಿಸಿ ಸಹಕರಿಸಿದ ಹುಬ್ಬಳ್ಳಿ ದೇಶಪಾಂಡೆ ಸ್ಕಿಲ್ಲಿಂಗ್ ಕ್ಲಸ್ಟರ್ ಹೆಡ್ ಸುನಿಲ್ ವಡ್ಡರ್ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಿ ಅಭಿನಂದನೀಯ ಸನ್ಮಾನ ನೀಡಲಾಯಿತು.

ಐಕ್ಯೂಎಸಿ ಕೋ ಅರ್ಡಿನೇಟರ್ ಡಿ.ಜಿ.ತಾಪಸ್ , ಸ್ಟಾಫ್ ಸೆಕ್ರೆಟರಿ ಜನಾರ್ಧನ್ ಆರ್.ಡಿ, ಎಲ್ಎಮ್ಎಸ್ ಕೋಆರ್ಡಿನೇಟರ್ ಶರತ್ ಕುಮಾರ್ ವೇಧಿಕೆಯಲ್ಲಿ ಉಪಸ್ಥಿತರಿದ್ದು ಉದ್ಯೋಗ ಮೇಳದ ಕುರಿತು ಮಾತನಾಡಿದರು.
ವಿದ್ಯಾರ್ಥಿ ಜಯಂತ ಗೋಸಂಗಿ ಸ್ವಾಗತಿಸಿದನು. ಉದ್ಯೋಗ ಮೇಳದ ಪ್ರಮುಖ ಆಯೋಜನ ಅಧಿಕಾರಿ ಸುರೇಖ ಎಸ್ ತಡವಾಳ ಪ್ರಾಸ್ತಾವಿಕ ನುಡಿದರು. ವಿದ್ಯಾರ್ಥಿನಿ ಆಶಾ ಬೆಲ್ಲಣ್ಣವರ ವಂದಿಸಿದರು. ದಿವ್ಯಾ ನಾಯಕ್ ನಿರೂಪಿಸಿದರು.


ಶಿಕ್ಷಣ ಪ್ರೇಮಿ ವಿದ್ಯಾರ್ಥಿ ಮಿತ್ರರೆಂದೆ ಗುರುತಿಸಿಕೊಂಡಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಇಚ್ಚೆಯಂತೆ ಯಲ್ಲಾಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿ ಇತಿಹಾಸ ಸೃಷ್ಟಿಸಿದ ಉದ್ಯೋಗ ಮೇಳ ಬಹುತೇಕ ಯುವಕರ ಬಾಳಿಗೆ ಬೆಳಕಾಗಬಲ್ಲ ಉದ್ಯೋಗ ದೊರೆಯಲಿದೆ ಎಂಬುದು ಸಂತಸದ ಸಂಗತಿ. ಇಂತಹ ಬದ್ದತೆ ತೋರುವ ಶಾಸಕರು ದೊರೆತಿರುವುದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನರ ಸೌಭಾಗ್ಯ ಎನ್ನುವುದು ಉದ್ಯೋಗ ಮೇಳದಲ್ಲಿ ಭಾಗವಹಿಸಿದವರ ಪೋಷಕರ ಮಾತಾಗಿದೆ

ಉದ್ಯೋಗ ಮೇಳಕ್ಕೆ ಕೇವಲ ಯಲ್ಲಾಪುರ ಮಾತ್ರವಲ್ಲದೆ ಜಿಲ್ಲೆ ಮತ್ತು ವಿವಿಧ ಜಿಲ್ಲೆಗಳಿಂದ ಉಡುಪಿ,ಮಂಗಳೂರಿನಿಂದಲು ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಘಟ್ಟದ ಕೆಳಗಿನ ವಿದ್ಯಾರ್ಥಿಗಳು ಪ್ರತ್ಯೇಕ ಮಿನಿಬಸ್ ಗಳಲ್ಲಿ ಉದ್ಯೋಗ ಮೇಳಕ್ಕೆ ಆಗಮಿಸಿದ್ದರು.

Prathidvani Yellapura