Breaking News

ಅಧಿಕಾರವಿರಲಿ ಇಲ್ಲದಿರಲಿ ಹೆಬ್ಬಾರ್ ಜನಪ್ರಿಯತೆಗೇನೂ ಅಡ್ಡಿಯಿಲ್ಲ!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಸರ್ಕಾರಿ ಕೆಲಸ ಕಾರ್ಯಗಳು ಮಂತ್ರಿ ಗಳಿಂದ, ಶಾಸಕರಿಂದ ಆಗುವಂತಹ ಸನ್ನಿವೇಶಗಳೇ ಇಲ್ಲ. ಆದರೂ ಹೆಬ್ಬಾರ್ ಅವರ ಮನೆ ಮುಂದೆ ಸದಾ ಜನಸಂದಣಿಯಿಂದ ತುಂಬಿರುತ್ತದೆ.


ಅಧಿಕಾರವಿರಲಿ,ಇಲ್ಲದಿರಲಿ ಹೆಬ್ಬಾರ್ ಸದಾ ಜನರ ಮಧ್ಯೆ ಇರುವಂತಹ ವ್ಯಕ್ತಿತ್ವದವರು. ಚುನಾವಣೆಯ ಹೊಸ್ತಿಲಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ ಹಳ್ಳಿಗಳಿಗಳಲ್ಲಿ ಕಾರ್ಯಕರ್ತರ ಸಭೆಗೆ ದೌಡಾಯಿಸುತ್ತಿದ್ದು ಮುಂಜಾನೆ ಮನೆ ಬಿಡುವ ಸಂದರ್ಭದಲ್ಲಿ ಮನೆಯ ಮುಂದೆ ನೂರಾರು ಸಂಖ್ಯೆಯ ಜನರು ಈಗಲೂ ಅವರನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಮನೆ ಮುಂದೆ ಕಾಯುತ್ತಿರುವ ಜನಸಾಮಾನ್ಯರನ್ನು ಮಾತನಾಡಿಸಿಯೇ ಹೆಬ್ಬಾರ್ ಮುಂದೆ ಹೋಗುತ್ತಾರೆ. ಕೈಲಾಗುವ ಸಹಾಯ ಮಾಡುವುದು, ಇಲ್ಲವಾದಲ್ಲಿ ಅವರ ಕಷ್ಡ ಗಳಿಗೆ ಪುತ್ರ ವಿವೇಕ್ ಹೆಬ್ಬಾರ್ ಅವರಿಗೆ ಬಗೆಹರಿಸಲು ಸೂಚಿಸುವುದು ಅವರ ಬೆಳಗಿನ ಕಾಯಕವಾಗಿದೆ.

ಹೆಬ್ಬಾರ್ ಪ್ರತಿ ಹೆಜ್ಜೆ ಬಲ ತುಂಬಲು ಕಂಕಣ ಬದ್ದರಾದ ಪುತ್ರ ವಿವೇಕ್ ಹೆಬ್ಬಾರ್
ಜನರೊಂದಿಗೆ ಬೆರೆಯುವುದೆಂದರೆ ಹೆಬ್ಬಾರ್ ಅವರಿಗೆ ಎಲ್ಲಿಲ್ಲದ ಸಂತಸ


ಜನರೊಂದಿಗೆ ಸಂಪರ್ಕ ನಿನ್ನೆಮೊನ್ನೆಯದಲ್ಲ, ಲಾರಿ ಕ್ಲೀನರ್ ಆಗಿದ್ದಾಗಿನಿಂದಲೂ ಸಾವಿರಾರು ಸಂಖ್ಯೆಯ ಆತ್ಮೀಯರನ್ನು ಗಳಿಸಿದ್ದೇನೆ. ನಿತ್ಯ ಬರುವವರು ಕೇವಲ ರಾಜಕೀಯಕ್ಕಾಗಿ ಅಥವಾ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆಂದೇನೂ ಇಲ್ಲ. ಕೆಲವರು ನನ್ನನ್ನು ನೋಡಲೆಂದೇ ಬರುತ್ತಾರೆ, ಕುಶಲೋಪರಿ ವಿಚಾರಿಸಲು ಬರುತ್ತಾರೆ, ನನ್ನ ಸ್ನೇಹಿತರೂ ಸಹ ನನ್ನನ್ನು ಕಂಡು ಮಾತನಾಡಿಸಿ ಹೋಗುತ್ತಾರೆ. ಹಾಗಾಗಿ ರಾಜಕೀಯ, ಅಧಿಕಾರ ಒಂದು ವಿಭಾಗ, ಆತ್ಮೀಯತೆ , ಅವಿನಾಬಾವ ಸಂಬಂಧ ಮತ್ತೊಂದು ವಿಭಾಗ. ಒಟ್ಟಿನಲ್ಲಿ ನಿತ್ಯವೂ ಜನರನ್ನು ಮಾತನಾಡಿಸದೇ ನನಗೆ ನಿದ್ದೆ ಬರುವುದಿಲ್ಲ, ಜನರಿಗೂ ನನ್ನನ್ನು ಮಾತನಾಡಿಸದಿರಲು ಆಗುವುದಿಲ್ಲ.   ‌‌‌‌‌‌‌‌‌                              ಅರಬೈಲ್ ಶಿವರಾಮ ಹೆಬ್ಬಾರ್

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *