
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಎಪಿಎಂಸಿ ಆವಾರದ ಟಿ.ಎಸ್.ಎಸ್‌ಗೆ ಅಮೆಜಾನ್ ಮೂಲಕ ಬಂದ ಪಾರ್ಸೆಲ್ ಅನ್ನು ತಲುಪಿಸಿ ಹಿಂತಿರುಗುವಾಗ ಡೆಲಿವರಿ ಬಾಯ್ ಜೇಬಿನಲ್ಲಿದ್ದ 27,800 ರೂ ನಗದು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಇಸ್ಲಾಂಗಲ್ಲಿ ನಿವಾಸಿ ಆಸಿಫ್ ಎಂಬ ಯುವಕನೇ ಹಣ ಕಳೆದುಕೊಂಡವನಾಗಿದ್ದು ಕೇವಲ ಮೂರು ದಿನಗಳ ಹಿಂದೆ ಅಮೆಜಾನ್ ಕಂಪನಿಯಲ್ಲಿ ಡೆಲಿವರ್ ಬಾಯ್ ಕೆಲಸಕ್ಕೆ ಸೇರಿದ್ದಾನೆ. ಶುಕ್ರವಾರ ಬೆಳಗಿನಿಂದ ವಿವಿದೆಡೆ ಪಾರ್ಸೆಲ್ ತಲುಪಿಸಿ ಟಿ.ಎಸ್.ಎಸ್ ಗೆ ಬಂದ ಪಾರ್ಸೆಲ್ ತಲುಪಿಸಿ ಒಟ್ಟಾದ ಹಣವನ್ನು ರಬ್ಬರ್ ಬ್ಯಾಂಡ್ ಹಾಕಿ ಜೇಬಿನಲ್ಲಿಟ್ಟುಕೊಂಡಿರುತ್ತಾನೆ. ಅದೇ ಜೇಬಿನಲ್ಲಿ ಮೊಬೈಲ್ ಅನ್ನೂ ಇಟ್ಟಿದ್ದು ಯಾವುದೋ ಕರೆಗಾಗಿ ಮೊಬೈಲ್ ತೆಗೆದು ಮಾತನಾಡಿದ್ದಾನೆ. ನಂತರ ನೋಡಿದಾಗ ಜೇಬಿನಲ್ಲಿದ್ದ ಅಷ್ಟೂ ಹಣ ಕಳೆದು ಹೋಗಿರುವುದು ಗೊತ್ತಾಗಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾನೆ.
ದುಡಿದು ತಿನ್ನುವ ಬಡತನದಲ್ಲಿದ್ದು ಏಕಾಏಕಿ ಇಷ್ಟು ಹಣ ಕಳೆದುಕೊಂಡಿರುವುದರಿಂದ ಯುವಕ ಕಂಗಾಲಾಗಿದ್ದು ಯಾರಿಗಾದರೂ ಹಣ ದೊರೆತಲ್ಲಿ ಯಲ್ಲಾಪುರ ಠಾಣೆ ಅಥವಾ ಕಳೆದುಕೊಂಡ ಯುವಕನ ಮೊಬೈಲ್ ಸಂಖ್ಯೆ 7676231381 ಗೆ ಕರೆ ಮಾಡಿ ನೀಡಿದರೆ ಅನುಕೂಲವಾಗಲಿದೆ ಎಂದು ಯುವಕ ಕೋರಿಕೊಂಡಿದ್ದಾನೆ.
Prathidvani Yellapura