
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಕುಗ್ರಾಮವಾದ ಹೊಸಳ್ಳಿಯ ಗೌಳಿ ಕಾಲೋನಿಯಾ ರೂಪಾ ಬಾಬು ಜಾನಕರ ಅತ್ಯಂತ ಬಡತನದಲ್ಲೂ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾಳೆ. ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕಬ್ಬಿಣದ ಕಡಲೆ ಎಂದೇ ಕರೆಯುವ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ಗಮನ ಸೆಳೆದಿದ್ದಾಳೆ. ಪಟ್ಟಣದ ವೈ.ಟಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರೂಪಾ ಜಾನಕರ ಸರ್ಕಾರದ ಬಿ.ಸಿ.ಎಂ ಹಾಸ್ಟೆಲ್‌ನಲ್ಲಿ ಉಳಿದು ಅಭ್ಯಾಸ ಮಾಡುತ್ತಿದ್ದಾಳೆ. ಸಾಧನೆಗೆ ಯಾವುದೂ ಕಷ್ಟವಲ್ಲವೆಂಬಂತೆ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 91.1 ರಷ್ಟು ಅಂಕ ಗಳಿಸಿದ್ದಾಳೆ. ಎಸ್.ಎಸ್.ಎಲ್.ಸಿ ಯಲ್ಲೂ ಶೇಕಡ 87% ರಷ್ಟು ಅಂಕಗಳಿಸಿದ ಈಕೆ ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದ್ದಾಳೆ.

ಯಲ್ಲಾಪುರ ತಾಲೂಕಿನ ಹೆಮ್ಮೆಯ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್ ವಿದ್ಯಾರ್ಥಿನಿಯಾಗಿದ್ದು ಮನೆಯ ಸಂಸ್ಕಾರ,ಗುರುಗಳು ನೀಡಿದ ಶಿಕ್ಷಣ, ಕಲಿಯಬೇಕೆಂಬ ಅಂತಃಶಕ್ತಿ ರೂಪಾ ಸಾಧನೆಗೆ ಪ್ರೇರಣೆಯಾಗಿದೆ.



Prathidvani Yellapura