

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರದ ಜೂನಿಯರ್ ಎಸ್ಪಿಬಿ ಎಂದೇ ಖ್ಯಾತಿ ಪಡೆದ ಯಾರೆನೀನು ರೋಜಾ ಹೂವೆ ಖ್ಯಾತಿಯ“ಮನೋಜ್ ಪಾಟೀಲ್” ತಂಡದಿಂದ ಇಂದು ಕಾಳಮ್ಮ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಳಮ್ಮ ದೇವಿ ದೇವಸ್ಥಾನದ ವರ್ಧಂತಿ ಉತ್ಸವದ ನಿಮಿತ್ತ ದೇವಸ್ಥಾನ ಮತ್ತು ತ್ರಶೂಲ್ ಬಳಗದ ಆಯೋಜನೆಯಲ್ಲಿ ಸುಮಧುರ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮವು ಸಂಜೆ 7 ರಿಂದ ಪ್ರಾರಂಭವಾಗಲಿದ್ದು ಸಂಗೀತ ಪ್ರೇಮಿಗಳಿಗೊಂದು ಗಂಧರ್ವ ಗಾನಗಳ ರಸದೌತಣ ಸಿಗಲಿದೆ.
ಹಲವು ಕಲಾವಿದರನ್ನೊಳಗೊಂಡ ತಂಡದಲ್ಲಿ ಟಿ.ವಿ ರಿಯಾಲಿಟಿ ಷೋಗಳಲ್ಲಿ ಪಾಲ್ಗೊಂಡ ಕಲಾವುದರುಗಳಿದ್ದು ಸ್ಥಳೀಯ ಗಾನಪ್ರತಿಭೆಗಳ ಸಂಗೀತ ಸುಧೆ ಹರಿಯಲಿದೆ.
ಸಂಪೂರ್ಣ ಮ್ಯಾನ್ಯುಯಲ್ ಆರ್ಕೆಸ್ಟ್ರಾ ಇದಾಗಿದ್ದು ನುರಿತ ವಾದ್ಯತಂಡದ ಮಧುರ ಸಂಗೀತ ನಿನಾದ ಕಿವಿಗಿಂಪಾಗಲಿದೆ.
ಆರ್ಕೆಸ್ಟ್ರಾದ ರಂಗು ಹೆಚ್ಚಿಸಲು ಮಹೇಶ್ ಶೆಟ್ಟಿ ಗ್ರೂಪ್ಸ್ ತಂಡದ ಕಣ್ಮನ ತಣಿಸುವ ಡಾನ್ಸ್ ಆಯೋಜಿಸಲಾಗಿದೆ.


ವಿಶಾಲವಾದ ವೇದಿಕೆಯ ಅಂದ ಹೆಚ್ಚಿಸಲು ಹುಬ್ಬಳ್ಳಿ ಮೂಲದ ಇವೆಂಟ್ ಅವರಿಂದ ವಿಶಾಲವಾದ ಎಲ್.ಇ.ಡಿ ಪರದೆಯನ್ನು ಅಳವಡಿಸಲಾಗುತ್ತಿದ್ದು ಬೆಳಗಾವಿ ಮೂಲದ ಖ್ಯಾತ ಧ್ವನಿ ಮತ್ತು ಬೆಳಕಿನ ತಂತ್ರಜ್ಞ ಆನಂದ್ ನೇತೃತ್ವದ ತಂಡ ಆರ್ಕೆಸ್ಟ್ರಾ ಸೌಂಡ್ಸ್ ಮ್ಯಾನೇಜ್ ಮಾಡುತ್ತಿದ್ದಾರೆ.

ಈ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆಗೆ ಯಲ್ಲಾಪುರ ನೆಲದ ಅಪ್ಪಟ ಆರ್ಕೆಸ್ಟ್ರಾ ಪ್ರತಿಭೆ ನಮ್ಮೂರ ಗಾನಗಂಧರ್ವ ಮನೋಜ್ ಪಾಟೀಲ್ ಗಾಯನ ಆರ್ಕೆಸ್ಟ್ರಾ ಅಭಿಮಾನಿಗಳ ಎದೆಗೆ ಕಿಚ್ಚುಹಚ್ಚುವ ಹಾಡುಗಳ ಮಳೆ ಸುರಿಯಲಿದೆ.
ಮತ್ತೇಕೆ ತಡ ಇಂದು ರಾತ್ರಿ ಯಲ್ಲಾಪುರದ ಕಾಳಮ್ಮ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಳಮ್ಮ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ತ್ರಿಶೂಲ ಬಳಗದ ಆಯೋಜನೆಯಲ್ಲಿ ಮನೋಜ್ ಪಾಟೀಲ್ ನೇತೃತ್ವದಲ್ಲಿ ” ಮನೋಜ್ ಎಂಟರ್ಟೈನರ್” ತಂಡದ ಆರ್ಕೇಸ್ಟ್ರಾ ನೋಡಲು ನೀವು ಬನ್ನಿ ನಿಮವರನ್ನು ಕರೆತನ್ನಿ.
Prathidvani Yellapura